ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಅವರ ಸಹೋದರಿ, ಮಾಜಿ ಸಂಸದೆ ಬಿ.ಶಾಂತಾರ ಪುತ್ರಿ ಬಿ. ಪ್ರಸನ್ನ ಲಕ್ಷ್ಮಿ ಅವರ ವಿವಾಹ ಸ್ಥಳೀಯ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಎಂಬುವರ ಪುತ್ರನೊಂದಿಗೆ ನಿಶ್ಚಯವಾಗಿದೆ.
ಬಳ್ಳಾರಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಅವರ ಸಹೋದರಿ, ಮಾಜಿ ಸಂಸದೆ ಬಿ.ಶಾಂತಾರ ಪುತ್ರಿ ಬಿ. ಪ್ರಸನ್ನ ಲಕ್ಷ್ಮಿ ಅವರ ವಿವಾಹ ಸ್ಥಳೀಯ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಎಂಬುವರ ಪುತ್ರನೊಂದಿಗೆ ನಿಶ್ಚಯವಾಗಿದೆ. ವಧು ಪ್ರಸನ್ನ ಲಕ್ಷ್ಮಿ ಬಿ.ಕಾಂ ಪದವೀಧರೆ ಯಾಗಿದ್ದು, ವರ ಪವನ್ ಕುಮಾರ್ ಸಹ ಬಿ.ಕಾಂ ಪದವಿ ಪಡೆದಿದ್ದಾರೆ.
ಇದೇ ಅ.11 ರಂದು ನಗರದ ಅಲ್ಲಂ ಭವನದಲ್ಲಿ ವಿವಾಹ ನೆರವೇರಲಿದೆ. ಪ್ರಸ್ತುತ ಕಾಂಗ್ರೆಸ್ ನಲ್ಲಿರುವ ಶ್ರೀನಿವಾಸ್, ‘ಬ್ರಾಂದಿ ಸೀನಾ’ ಎಂದೇ ಈ ಭಾಗದಲ್ಲಿ ಹೆಸರುವಾಸಿಯಾಗಿದ್ದು, ಈ ಹಿಂದೆ ಬಿಜೆಪಿಯಿಂದ ಪಾಲಿಕೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು ಎಂದು ತಿಳಿದುಬಂದಿದೆ.
ಇನ್ನು ಆಮಂತ್ರಣ ಪತ್ರಿಕೆಯಲ್ಲಿ ಸುಖಾಗಮನ ಬಯಸುವವರು ಎಂದು ಶಾಸಕ ಶ್ರೀರಾಮಲು, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಹೆಸರನ್ನು ನಮೂದಿಸಲಾಗಿದೆ.
