Asianet Suvarna News Asianet Suvarna News

ಕೆಐಎನಲ್ಲಿ ದಕ್ಷಿಣ ಏಷ್ಯಾದ ಮೊದಲ ವಿಮಾನ ರಿಕವರಿ ತರಬೇತಿ ಶಾಲೆ!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಏಷ್ಯಾದ ಮೊದಲ ಏರ್‌ಕ್ರಾಫ್ಟ್‌ ರಿಕವರಿ ತರಬೇತಿ ಶಾಲೆ ಆರಂಭಿಸುವ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್‌) ಮತ್ತೊಂದು ಸಾಧನೆ ಮಾಡಿದೆ.

South Asia's first aircraft recovery training school at KIA bengaluru rav
Author
First Published Oct 10, 2023, 4:53 AM IST

ಬೆಂಗಳೂರು (ಅ.10) :  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಏಷ್ಯಾದ ಮೊದಲ ಏರ್‌ಕ್ರಾಫ್ಟ್‌ ರಿಕವರಿ ತರಬೇತಿ ಶಾಲೆ(Aircraft Recovery Training School) ಆರಂಭಿಸುವ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್‌) ಮತ್ತೊಂದು ಸಾಧನೆ ಮಾಡಿದೆ.

ತರಬೇತಿ ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಜರ್ಮನಿಯ ಕುನ್ಜ್‌ ಜಿಎಂಬಿಎಚ್‌ ವಿಮಾನ ಬಿಡಿಭಾಗಗಳ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನೂತನ ಶಾಲೆಯಲ್ಲಿ ರನ್‌ ವೇ ಅಥವಾ ವಿಮಾನ ನಿಲ್ದಾಣ ಒಳ ಭಾಗದಲ್ಲಿ ಸ್ಥಗಿತಗೊಂಡ ವಿಮಾನಗಳನ್ನು ದುರಸ್ತಿ ಮಾಡಿ ಮತ್ತೆ ಹಾರಾಟ ನಡೆಸುವಂತೆ ಮಾಡುವ ತರಬೇತಿ ನೀಡಲಾಗುತ್ತದೆ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮೂಲಕ ಗುರುತಿಸಲಾಗಿರುವ ತರಬೇತುದಾರರ ಮೂಲಕ ವಿಮಾನ ದುರಸ್ತಿ ಕುರಿತಂತೆ ತರಬೇತಿ ನೀಡಲಾಗುತ್ತದೆ. ಅಲ್ಲದೆ, ನೂತನ ತರಬೇತಿ ಶಾಲೆಯಲ್ಲಿ ಅತ್ಯಾಧುನಿಕ ಡಿಸೇಬಲ್ಡ್‌ ಏರ್‌ಕ್ರಾಫ್ಟ್‌ ರಿಕವರಿ ಸಾಮಗ್ರಿಗಳನ್ನು ಅಳವಡಿಸಲಾಗಿದ್ದು, ಅದರಿಂದಾಗಿ ಶಾಲೆಗೆ ಸೇರ್ಪಡೆಗೊಳ್ಳುವವರಿಗೆ ಉತ್ತಮ ರೀತಿಯ ತರಬೇತಿ ನೀಡಬಹುದಾಗಿದೆ.

ವಿದೇಶದಿಂದ ಅಕ್ರಮವಾಗಿ ಚಿನ್ನ, ಎಲೆಕ್ಟ್ರಾನಿಕ್‌ ಉಪಕರಣಗಳು: 8 ಆರೋಪಿಗಳ ಬಂಧನ

ಈ ಕುರಿತು ಪ್ರತಿಕ್ರಿಯಿಸಿರುವ ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರರ್‌, ದಕ್ಷಿಣ ಏಷ್ಯಾದಲ್ಲಿ ಈ ರೀತಿಯ ತರಬೇತಿ ಶಾಲೆ ಹೊಂದಿರುವ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ವಾಯುಯಾನ ತರಬೇತಿಯಲ್ಲಿ ವಿಶ್ವದರ್ಜೆ ಸೌಲಭ್ಯ ಕಲ್ಪಿಸುವ ನಮ್ಮ ಗುರಿಗೆ ತಕ್ಕಂತೆ ಉತ್ತಮ ತಂತ್ರಜ್ಞ, ತರಬೇತುದಾರರ ಮೂಲಕ ವೃತ್ತಿಪರರನ್ನು ಸಜ್ಜುಗೊಳಿಸಲಾಗುತ್ತದೆ ಎಂದರು.

ಕುನ್ಜ್‌ ಜಿಎಂಬಿಎಚ್‌ನ ವ್ಯವಸ್ಥಾಪಕ ನಿರ್ದೇಶಕ ಆಂಡ್ರಿಯಾಸ್‌ ಫೂಗ್‌ ಮಾತನಾಡಿ, ತರಬೇತಿ ಶಾಲೆಯ ಮೂಲಕ ವಿಮಾನ ನಿಲ್ದಾಣದ ಸೇವೆಯನ್ನು ಮತ್ತಷ್ಟು ನಿಖರವಾಗಿ ಮಾಡಲಾಗುತ್ತದೆ. ತರಬೇತಿ ಶಾಲೆಯ ಮೂಲಕ ಅಭ್ಯರ್ಥಿಗಳಿಗೆ ಐಸಿಎಒ ಟ್ರೈನರ್‌ ಪ್ಲಸ್‌ ಮಾನ್ಯತೆ ಪಡೆದ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

KIA Terminal 2 : ಬೆಂಗಳೂರಿನಲ್ಲಿ ಆಗಸ್ಟ್ 31 ರಿಂದ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರನೆ ಆರಂಭ

Follow Us:
Download App:
  • android
  • ios