ಬೆಂಗಳೂರು (ಡಿ.24):  ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಭರ್ತಿ ಮಾಡುವ ವಿಶ್ವಾಸವನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್‌ ಅಠಾವಳೆ ತಿಳಿಸಿದ್ದಾರೆ.

ಸೋಮವಾರ ನಗರದ ಕುಮಾರಕೃಪ ಗೆಸ್ಟ್‌ಹೌಸ್‌ನಲ್ಲಿ ರಾಜ್ಯ ಸರ್ಕಾರದ ಸಂಬಂಧಪಟ್ಟಅಧಿಕಾರಿಗಳ ಜತೆ ಬ್ಯಾಕ್‌ಲಾಗ್‌ ಹುದ್ದೆಗಳ ಕುರಿತು ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಜ್ಯದ ಉದ್ಯೋಗದಲ್ಲಿ ಶೇ.15ರಷ್ಟುಪರಿಶಿಷ್ಟಜಾತಿ ಹಾಗೂ ಶೇ.3ರಷ್ಟುಪರಿಶಿಷ್ಟಪಂಗಡಕ್ಕೆ ಮೀಸಲು ಇದೆ. 2011ರ ಅಂಕಿಅಂಶದನ್ವಯ 19,150 ಹುದ್ದೆಗಳ ಪೈಕಿ 2475 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಮುಂದಿನ ಮೂರು ತಿಂಗಳಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಆದಷ್ಟುಬೇಗ ಕ್ರಮ ಕೈಗೊಂಡು ಬ್ಯಾಕ್‌ಲಾಗ್‌ ಹುದ್ದೆ ಭರ್ತಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

EQ ಹೆಚ್ಚಿರುವವರು ಉದ್ಯೋಗದಲ್ಲಿ ಒತ್ತಡ ನಿಭಾಯಿಸುವುದು ಹೀಗೆ......

ರಾಜ್ಯಲ್ಲಿನ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ ಮತ್ತು ಸಮಸ್ಯೆಗಳ ಪರಿಹಾರ ಕುರಿತು ರಾಜ್ಯಮಟ್ಟದ ಪರಿಶಿಷ್ಟಜಾತಿ/ ಪರಿಶಿಷ್ಟವರ್ಗದ ಕಲ್ಯಾಣ ಸಮಿತಿಯನ್ನು ಶಾಸಕಾಂಗದ ಪ್ರತಿನಿಧಿ ಮತ್ತು ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿದೆ. ಸಮಿತಿಯು ಕಾಲಕಾಲಕ್ಕೆ ಸಭೆ ನಡೆಸಲಿದೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಸ್ವಯಂ ಸೇವಾಸಂಸ್ಥೆಗಳು ನಡೆಸುತ್ತಿರುವ 40 ವೃದ್ಧಾಶ್ರಮಗಳಿಗೆ ಕೇಂದ್ರ ಸರ್ಕಾರ ವಾರ್ಷಿಕ 23 ಲಕ್ಷ ರು. ಅನುದಾನ ನೀಡುತ್ತಿದೆ. ರಾಜ್ಯದಲ್ಲಿ 1,225 ವೃದ್ಧಾಶ್ರಮಗಳಿದ್ದು, ರಾಜ್ಯದ ಜನಸಂಖ್ಯೆಯ ಶೇ.7ರಷ್ಟುವೃದ್ಧರು ಗೌರವಧನ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.