Asianet Suvarna News Asianet Suvarna News

ಸೂಕ್ತ ಸ್ಥಳವನ್ನೇ ನೀಡುತ್ತೇವೆ : ಜಮೀರ್‌ಗೆ ಹೇಳಿದ ಸಚಿವ ಸೋಮಣ್ಣ

ಕರ್ನಾಟಕ ವಸತಿ ಸಚಿವ ವಿ ಸೋಮಣ್ಣ ಸೂಕ್ತ ಸ್ಥಳವನ್ನೇ ಕಲ್ಪಿಸಿಕೊಡುವುದಾಗಿ ಹೇಳಿದ್ದಾರೆ. ಕೈ ಮುಖಡಮ ಜಮೀರ್‌ ಅಹಮದ್‌ಗೆ ಈ ಹೇಳಿಕೆ ನೀಡಿದರು. 

Soon Govt Will Give place To Slum people says Minister Somanna snr
Author
Bengaluru, First Published Feb 2, 2021, 8:33 AM IST

ವಿಧಾನಸಭೆ (ಫೆ.02):  ಘೋಷಿತ ಕೊಳಚೆ ಪ್ರದೇಶದಲ್ಲಿ ನೆಲೆಸಿರುವವರಿಗೆ ಶೀಘ್ರದಲ್ಲೇ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಹಾಗೂ ಪ್ರತಿಯೊಬ್ಬರಿಗೆ ಸೂರು ಕಲ್ಪಿಸಬೇಕು ಎಂಬ ಆಶಯದೊಂದಿಗೆ ಮುಂದಿನ 8-10 ದಿನದಲ್ಲಿ ಯಾವ ರೀತಿ ವಸತಿ ನೀಡಬೇಕು ಎಂಬ ಕುರಿತು ಸ್ಪಷ್ಟಚಿತ್ರಣ ಸಿದ್ಧ​ಪ​ಡಿ​ಸ​ಲಾ​ಗು​ವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಸೋಮವಾರ ಕಾಂಗ್ರೆಸ್‌ ಸದಸ್ಯ ಜಮೀರ್‌ ಅಹಮ್ಮದ್‌ ಖಾನ್‌ ಪ್ರಶ್ನೆಗೆ ಉತ್ತರ ನೀಡಿದ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ 600 ಚದರ ಅಡಿ, ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿ, ಪುರಸಭೆ, ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ 1200 ಚದರ ಅಡಿ ಮೀರದಂತೆ ನೆಲೆಸಿರುವವರಿಗೆ ಹಕ್ಕು ಪತ್ರ ವಿತರಿಸ​ಲಾ​ಗು​ವುದು. ಆರು ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸುವ ಚಿಂತನೆ ಇದೆ. ಎಲ್ಲರಿಗೂ ಸೂರು ಕಲ್ಪಿಸಬೇಕೆಂಬ ಆಶಯದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ. ಫಲಾನುಭವಿಗಳಿಂದ ಯಾವ ರೀತಿಯಾಗಿ ಹಣ ಸಂಗ್ರಹಿಸಬೇಕು ಮತ್ತು ಯಾವ ರೀತಿ ವಸತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯಲಾಗುತ್ತಿದೆ. ಮುಂದಿನ 8-10 ದಿನಗಳÜಲ್ಲಿ ಈ ಬಗ್ಗೆ ಸ್ಪಷ್ಟರೂಪುರೇಷೆ ತಯಾರಿಸಲಾಗುವುದು ಎಂದರು.

ಸಾಮಾನ್ಯ ಜನರಿಗೆ ಸಂತಸದ ಸುದ್ದಿ ನೀಡಿದ ಸರ್ಕಾರ..! ..

ಪುರಸಭೆ ಮತ್ತು ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ 1,200 ಚದರ ಅಡಿಯಲ್ಲಿರುವ ನಿವೇಶನ ನೋಂದಣಿಗೆ ಸಾಮಾನ್ಯ ವರ್ಗದವರಿಗೆ .3 ಸಾವಿರ, ಎಸ್‌ಸಿ, ಎಸ್‌ಟಿ ವರ್ಗದವರಿಗೆ .1200, ನಗರಸಭೆ ವ್ಯಾಪ್ತಿಯಲ್ಲಿನ 600 ಚದರ ಅಡಿ ನಿವೇಶನಕ್ಕೆ ಸಾಮಾನ್ಯ ವರ್ಗದವರಿಗೆ .4 ಸಾವಿರ, ಎಸ್‌ಸಿ/ಎಸ್‌ಟಿ ವರ್ಗದವರಿಗೆ .2 ಸಾವಿರ ನಿಗದಿ ಮಾಡಲಾಗಿದೆ. ಬಿಬಿಎಂಪಿ ಮತ್ತು ನಗರ ಪಾಲಿಕೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳ ನಿವೇಶನದ ನೋಂದಣಿಗೆ ಸಾಮಾನ್ಯ ವರ್ಗದವರಿಗೆ .10 ಸಾವಿರ, ಎಸ್‌ಸಿ/ಎಸ್‌ಟಿ ವರ್ಗದವರಿಗೆ 5 ಸಾವಿರ ರು. ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios