ರಾಜ್ಯ ಪೊಲೀಸ್‌ ಇಲಾಖೆಯಲ್ಲಿರುವ ಅಸಮರ್ಥರು ಮತ್ತು ಭ್ರಷ್ಟರ ಪಟ್ಟಿತಯಾರಿಸಲು ಯೋಚಿಸಿದ್ದೇನೆ   ಒಳ್ಳೆಯ ಸ್ಟೇಷನ್‌ ಸಿಗದೆ ಹಾಗೆ ನೋಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಶಿವಮೊಗ್ಗ (ಆ.17): ರಾಜ್ಯ ಪೊಲೀಸ್‌ ಇಲಾಖೆಯಲ್ಲಿರುವ ಅಸಮರ್ಥರು ಮತ್ತು ಭ್ರಷ್ಟರ ಪಟ್ಟಿತಯಾರಿಸಲು ಯೋಚಿಸಿದ್ದೇನೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

 ಇಂತಹವರಿಗೆ ಒಳ್ಳೆಯ ಸ್ಟೇಷನ್‌ ಸಿಗದೆ ಹಾಗೆ ನೋಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. 

ಅಕ್ರಮ ಚಟುವಟಿಕೆಗಳಿಗೆ ಪೊಲೀಸರೇ ಹೊಣೆ : ಆರಗ ಜ್ಞಾನೇಂದ್ರ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಇಲಾಖೆ ಬೆಳವಣಿಗೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಪೊಲೀಸ್‌ ಠಾಣೆಯಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣವಾಗಬೇಕು. ಈಗಾಗಲೇ ಪೊಲೀಸ್‌ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಪೊಲೀಸ್‌ ಠಾಣೆಯಲ್ಲಿ ನಿಯಮ ಉಲ್ಲಂಘಿಸಿ ರಾಜೀ ಪಂಚಾಯ್ತಿ ಮಾಡುವ ಹಾಗಿಲ್ಲ ಎಂದರು.

ಇದೇ ವೇಳೆ ಇಲಾಖೆಯ ಸಿಬ್ಬಂದಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಮತ್ತಷ್ಟುಕ್ರಮ ಕೈಗೊಳ್ಳಲಾಗುವುದು ಎಂದರು.