ಬೊಮ್ಮಾಯಿ ಸಾಧನೆಯ ಹಾಡುಗಳ ಸೀಡಿ ಬಿಡುಗಡೆ ಸಿಎಂ ಅಭಿಮಾನಿಗಳ ಬಳಗದಿಂದ ಸೀಡಿ ತಾರಾ ಅನೂರಾಧ ಬಿಡುಗಡೆ

ಬೆಂಗಳೂರು (ಅ.11) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾಧನೆಗಳು ಮತ್ತು ಅವರ ವ್ಯಕ್ತಿತ್ವ ಬಿಂಬಿಸುವ ಹಾಡುಗಳ ಧ್ವನಿ ಸುರುಳಿಯನ್ನು ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷೆ ತಾರಾ ಅನುರಾಧ ಬಿಡುಗಡೆ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದವರು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮಾಡಿರುವ ಸಾಧನೆಗಳು ಮತ್ತು ಅವರ ವ್ಯಕ್ತಿತ್ವ ಬಿಂಬಿಸುವ ಐದು ಹಾಡುಗಳನ್ನು ಹೊರತಂದಿದ್ದಾರೆ. ಧ್ವನಿ ಸುರುಳಿಗಳನ್ನು ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ತಾರಾ ಅವರು ಬಿಡುಗಡೆ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೇಳೆ ಮಾತನಾಡಿದ ತಾರಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮಾನಿಗಳ ಬಳಗದಿಂದ ಹೊರ ತಂದಿರುವ ಮುಖ್ಯಮಂತ್ರಿಗಳ ಸಾಧನೆಗಳ ಕುರಿತ ಧ್ವನಿಸುರುಳಿ ಬಿಡುಗಡೆ ಮಾಡಿರುವುದು ಹರ್ಷ ತಂದಿದೆ. ಮುಖ್ಯಮಂತ್ರಿಗಳ ಮೇಲಿನ ಅಭಿಮಾನದಿಂದ ಹಾಡುಗಳನ್ನು ರಚಿಸಲಾಗಿದೆ. ಮುಖ್ಯಮಂತ್ರಿಯಾಗಿ ಮಾಡಿರುವ ಸಾಧನೆಗಳ ಕುರಿತು ಹಾಡುಗಳನ್ನು ರಚಿಸಲಾಗಿದೆ. ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ನಾನು ಎರಡು ಬಾರಿ ಸ್ಟಾರ್‌ ಪ್ರಚಾರಕರಾಗಿ ಕ್ಯಾಂಪೇನ್‌ ಮಾಡಿದ್ದೆ. ಒಮ್ಮೆ ಜಲಸಂಪನ್ಮೂಲ ಸಚಿವರಾರಾಗಿದ್ದು, ಮತ್ತೊಮ್ಮೆ ಗೃಹಸಚಿವರಾಗಿದ್ದರು. ಅವರು ಮುಖ್ಯಮಂತ್ರಿಯಾಗಿ ಮೊದಲ ಬಜೆಟ್‌ನಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಬಜೆಟ್‌ ಕೊಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ತುಂಬಾ ಸರಳ ಜೀವಿ. ಮುಖ್ಯಮಂತ್ರಿಗಳ ಪುತ್ರನಾಗಿದ್ದರೂ, ಎಂಜಿನಿಯರಿಂಗ್‌ ಪದವೀಧರರಾಗಿದ್ದರೂ ತುಂಬಾ ಸರಳ ವ್ಯಕ್ತಿತ್ವದವರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದ ಶಿವಕುಮಾರ್‌ ಮೇಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಯಾವ ರಾಜ್ಯದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಇದೆ? ಹಿಂದುಳಿದ ವರ್ಗದ ಕತೆಏನು?