Asianet Suvarna News Asianet Suvarna News

ಓಟು ಹಾಕಿ ಜಾಲತಾಣದಲ್ಲಿ ಫೋಟೊ ಶೇರ್ ಮಾಡಿಕೊಂಡ ಯೋಧ! ಮತ ಅಸಿಂಧು

ಕ್ಷೇತ್ರ ವ್ಯಾಪ್ತಿಯ ಶಾಂತಿಗ್ರಾಮದ ಹೆಗ್ಗಡಿಹಳ್ಳಿಯ ನಂದೀಶ ಎಂಬ ಯೋಧ ತನ್ನ ಪೋಸ್ಟಲ್ ಬ್ಯಾಲೆಟ್‌ನಲ್ಲಿ ಮತದಾನ ಮಾಡಿ, ಫೋಟೋ ತೆಗೆದು ಅದನ್ನು ವಾಟ್ಸಪ್‌ನಲ್ಲಿ ಪ್ರದರ್ಶನ ಮಾಡಿದ್ದಾರೆ. ಮತದಾನದ ಗೌಪ್ಯತೆ ಕಾಪಾಡಿಕೊಳ್ಳದೆ, ಸಂವಿಧಾನಕ್ಕೆ ಅಗೌರವ ತೋರಿದ ಪರಿಣಾಮವಾಗಿ ಆವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

Soldier shared a photo on social media after vote at holenarsipur Lok sabha constituency rav
Author
First Published Apr 15, 2024, 11:29 AM IST

ಹೊಳೆನರಸೀಪುರ (ಏ.15): ಕ್ಷೇತ್ರ ವ್ಯಾಪ್ತಿಯ ಶಾಂತಿಗ್ರಾಮದ ಹೆಗ್ಗಡಿಹಳ್ಳಿಯ ನಂದೀಶ ಎಂಬ ಯೋಧ ತನ್ನ ಪೋಸ್ಟಲ್ ಬ್ಯಾಲೆಟ್‌ನಲ್ಲಿ ಮತದಾನ ಮಾಡಿ, ಫೋಟೋ ತೆಗೆದು ಅದನ್ನು ವಾಟ್ಸಪ್‌ನಲ್ಲಿ ಪ್ರದರ್ಶನ ಮಾಡಿದ್ದಾರೆ. ಮತದಾನದ ಗೌಪ್ಯತೆ ಕಾಪಾಡಿಕೊಳ್ಳದೆ, ಸಂವಿಧಾನಕ್ಕೆ ಅಗೌರವ ತೋರಿದ ಪರಿಣಾಮವಾಗಿ ಆವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಅವರ ಮತ ಅಸಿಂಧುಗೊಳಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸತೀಶ್ ಬಾಬು ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಚುನಾವಣೆ ಪ್ರಕರಣ ಸಂಬಂಧಿಸಿದಂತೆ ಮಾಧ್ಯಮದ ಜತೆ ಮಾತನಾಡಿ, ಮತದಾನದ ಗೌಪ್ಯತೆ ಕಾಪಾಡಿಕೊಳ್ಳದೆ ಯಾರೇ ಉಲಂಘನೆ ಮಾಡಿದರೂ ಕಠಿಣವಾದ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

 

ಲೋಕಸಭೇಲಿ ಕಾವೇರಿ ಬಗ್ಗೆ ಮಾತನಾಡಲು ಎನ್‌ಡಿಎ ಗೆಲ್ಲಬೇಕು: ದೇವೇಗೌಡ

ಇತ್ತೀಚೆಗೆ ಕೋಡಿಹಳ್ಳಿ ಗ್ರಾಮದಲ್ಲಿ ಕನೂನು ಉಲಂಘಿಸಿ, ರಾಜಕೀಯ ಕಾರಣಕ್ಕೆ ಆಹಾರ ವಿತರಣೆ ಸಂಬಂಧಿಸಿ ರಾಜ್ಯ ಚುನಾವಣೆ ಆಯೋಗದ ನಿರ್ದೇಶನದ ಅಡಿಯಲ್ಲಿ ನಾಶ ಮಾಡಲಾಗಿತ್ತು. ಆದರೆ ಮಗುವಿನ ನಾಮಕರಣಕ್ಕೆ ಸಿದ್ಧಪಡಿಸಿದ್ದ ಆಹಾರ ನಾಶ ಮಾಡಿದ್ದಾರೆ ಎಂಬ ತಪ್ಪು ಸಂದೇಶವನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಲಾಗಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಸಮಾಜದ ಸ್ವಾಸ್ಥ್ಯ ಕಾಪಾಡದೆ, ಮತದಾರರಲ್ಲಿ ಗೊಂದಲ ಉಂಟು ಮಾಡುವ ಜನರು ಅಥವಾ ವಾಟ್ಸಪ್ ಗ್ರೂಪಿನ ಅಡ್ಮಿನ್ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಸಹಾಯಕ ಚುನಾವಣಾಧಿಕಾರಿ ಸತೀಶ್ ಬಾಬು ಎಚ್ಚರಿಸಿದ್ದಾರೆ.

Follow Us:
Download App:
  • android
  • ios