ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ, ಬಾದಾಮಿಯ ಬನಶಂಕರಿಯಲ್ಲಿ ಪ್ರವೇಶ ನಿಶಿದ್ಧ

ಭಾನುವಾರ ಬೆಳಗ್ಗೆ ರಾಹುಗ್ರಸ್ತ ಸೂರ್ಯಗ್ರಹಣ ಹಿನ್ನಲೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ ನಡೆಯಲಿದೆ. 10.12 ರಿಂದ 1.15 ರವರೆಗೆ ರಾಹುಗ್ರಸ್ತ ಸೂರ್ಯಗ್ರಹಣವಾಗಲಿದ್ದು ದೇವಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದ 9.30 ವರೆಗೆ ಹೋಮ ನಡೆಯಲಿದೆ.

Solar eclipse on June 21st special pooja at Gavi Gangadhareshwara Temple

ಬೆಂಗಳೂರು(ಜೂ.19): ಭಾನುವಾರ ಬೆಳಗ್ಗೆ  ರಾಹುಗ್ರಸ್ತ ಸೂರ್ಯಗ್ರಹಣ ಹಿನ್ನಲೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ ನಡೆಯಲಿದೆ. 10.12 ರಿಂದ 1.15 ರವರೆಗೆ ರಾಹುಗ್ರಸ್ತ ಸೂರ್ಯಗ್ರಹಣವಾಗಲಿದ್ದು ದೇವಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದ 9.30 ವರೆಗೆ ಹೋಮ ನಡೆಯಲಿದೆ.

ಸೂರ್ಯಗ್ರಹಣ ಶಾಂತಿ ಹೋಮದಲ್ಲಿ ಭಕ್ತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಸಾಮಾಜಿಕ ಅಂತರವ ಕಾಯ್ದುಕೊಂಡು ಗವಹಿಸಬಹುದಾಗಿದೆ. 9.30 ಕ್ಕೆ ಹೋಮ ಪೂರ್ಣಾವಧಿಯಾದ ನಂತ್ರ  ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜೂ. 21 ಕ್ಕೆ ಈ ವರ್ಷದ ಮೊದಲ ಸೂರ್ಯ ಗ್ರಹಣ: ಮಾಡಬೇಕಾಗಿದ್ದೇನು? ಮಾಡಬಾರದ್ದೇನು?

10 ಗಂಟೆಯಿಂದ 2 ಗಂಟೆಯ ವರೆಗೆ ದೇವಸ್ಥಾನ ಕ್ಲೋಸ್ ಆಗಲಿದ್ದು, ಮಧ್ಯಾಹ್ನ 2 ಗಂಟೆಯಿಂದ ದೇವಸ್ಥಾನ ಶುಚಿಗೊಳಿಸುವ ಕಾರ್ಯ ಶುರುವಾಗಲಿದೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಸೂವರ್ಣನ್ಯೂಸ್ ಗೆ ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಗುರೂಜಿ ಮಾಹಿತಿ ನೀಡಿದ್ದಾರೆ.

ಸೂರ್ಯಗ್ರಹಣ ಹಿನ್ನೆಲೆ ಗ್ರಹಣದ ವೇಳೆ ನಾಡಿನ ಶಕ್ತಿ ಪೀಠ ಐತಿಹಾಸಿಕ ಬಾದಾಮಿಯ ಬನಶಂಕರಿ ದೇಗುಲ ಬಂದ್ ಇರಲಿದೆ. ಗ್ರಹಣ ಕಾಲ ಬೆಳಗ್ಗೆ 10:04 ರಿಂದ ಹಿಡಿದು ಮೋಕ್ಷ ಕಾಲ ಮದ್ಯಾಹ್ನ 1:28 ಈ ಅವಧಿಯಲ್ಲಿ ಮಾತ್ರ ಗಭ೯ಗುಡಿ ಪ್ರವೇಶ ನಿಷಿದ್ಧವಾಗಿದೆ. ಗ್ರಹಣ ಆರಂಭವಾಗುವವರೆಗೂ ಮೊದಲು ಭಕ್ತರಿಗೆ ದರ್ಶನ ಭಾಗ್ಯವಿದ್ದು, ಗ್ರಹಣದ ಸಂದರ್ಭದಲ್ಲಿ ಮಾತ್ರ ದೇವಿ ದರ್ಶನ ನಿಷಿದ್ಧವಾಗಿದೆ.

ಜ್ಯೋತಿಷ್ಯದಲ್ಲಿ ಗಣಗಳು ಹೇಳುತ್ತೆ ನಿಮ್ಮ ಗುಣ, ವಿವಾಹಕ್ಕೂ ಬೇಕು ಗಣ ಸಾಮ್ಯತೆ!

ಗ್ರಹಣದ ವೇಳೆ ಬನಶಂಕರಿ ದೇವಿಗೆ ಜಲಾಭಿಷೇಕ ಮಾತ್ರ ಮಾಡಲಿದ್ದು, ಗ್ರಹಣದ ಬಳಿಕ ದೇವಿಗೆ ಅಭಿಷೇಕ ಮತ್ತು ಅಲಂಕಾರ ಮಾಡಲಾಗುತ್ತದೆ. 
ಮಧ್ಯಾಹ್ನ 1:28ರ ಬಳಿಕ ಭಕ್ತರಿಗೆ ಎಂದಿನಂತೆ  ದೇವಿ ದರ್ಶನ ಭಾಗ್ಯ ಇರಲಿದೆ. ಬಾದಾಮಿ ಬನಶಂಕರಿ ದೇಗುಲದ ಟ್ರಸ್ಟ್ ಸದಸ್ಯ ಮಹೇಶ್ ಪೂಜಾರ ಸ್ಪಷ್ಟನೆ ನೀಡಿದ್ದಾರೆ.

Latest Videos
Follow Us:
Download App:
  • android
  • ios