Asianet Suvarna News Asianet Suvarna News

ರಾಜ್ಯದಲ್ಲಿ 50ರ ಗಡಿ ದಾಟಿದ ಬ್ಲಾಕ್‌ ಫಂಗಸ್‌ ಸಾವು

* ಒಂದೇ ದಿನ 38 ಹೊಸ ಕೇಸ್‌ ಪತ್ತೆ, 4 ಮಂದಿ ಸಾವು
* ಇದುವರೆಗೆ 55 ಮಂದಿ ಸಾವು 
* 27 ಮಂದಿ ಚಿಕಿತ್ಸೆಯಿಂದ ಗುಣಮುಖ 
 

So Far 55 Black Fungus Patients Dies in Karnataka grg
Author
Bengaluru, First Published Jun 2, 2021, 7:29 AM IST

ಬೆಂಗಳೂರು(ಜೂ.02): ರಾಜ್ಯದಲ್ಲಿ ಮಂಗಳವಾರ ಸಂಜೆ ವೇಳೆಗೆ 1,409 ಮಂದಿಗೆ ಬ್ಲಾಕ್‌ ಫಂಗಸ್‌ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಅರ್ಧಶತಕದ ಗಡಿ ದಾಟಿ ಬರೋಬ್ಬರಿ 55 ಮಂದಿ ಮೃತಪಟ್ಟಿದ್ದಾರೆ.

ಮಂಗಳವಾರ ಬೆಳಗ್ಗೆ 8.45 ಗಂಟೆ ವೇಳೆಗೆ 1,370 ಮಂದಿಯಲ್ಲಿ ಸೋಂಕು ಉಂಟಾಗಿದ್ದು 51 ಮಂದಿ ಮೃತಪಟ್ಟಿದ್ದರು. ಉಳಿದಂತೆ 27 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಬಳಿಕ ಮಂಗಳವಾರ ಬೆಳಗ್ಗೆಯಿಂದ ಸಂಜೆ ವೇಳೆಗೆ ಬ್ಲಾಕ್‌ ಫಂಗಸ್‌ನಿಂದ ಬಳ್ಳಾರಿಯಲ್ಲಿ 3 ಹಾಗೂ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಾವು ವರದಿಯಾಗಿದೆ. ಅಲ್ಲದೆ ಬೆಳಗಾವಿಯಲ್ಲಿ 14, ಚಿತ್ರದುರ್ಗ11, ದಕ್ಷಿಣ ಕನ್ನಡ 5, ಬಳ್ಳಾರಿ 4, ಹಾವೇರಿ 2, ಬೀದರ್‌ ಹಾಗೂ ಉಡುಪಿಯಲ್ಲಿ ತಲಾ ಒಂದು ಸೋಂಕು ವರದಿಯಾಗಿದೆ. ಈ ಮೂಲಕ ಒಟ್ಟು ಸೋಂಕಿನ ಸಂಖ್ಯೆ 1,409ಕ್ಕೆ ಹಾಗೂ ಸಾವಿನ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ಬ್ಲ್ಯಾಕ್ ಫಂಗಸ್‌ಗೆ ಔಷಧಿ ಪೂರೈಕೆಯಾಗದಿದ್ದಕ್ಕೆ ವೈದ್ಯರಿಂದ ತೀವ್ರ ಆತಂಕ

ಈವರೆಗೆ ಬೆಂಗಳೂರಿನಲ್ಲಿ 557, ಧಾರವಾಡ 156, ಕಲಬುರಗಿ 104, ಬಾಗಲಕೋಟೆ 70, ರಾಯಚೂರು 46, ಶಿವಮೊಗ್ಗ 38, ಬೆಳಗಾವಿ 61, ಬೆಂಗಳೂರು ಗ್ರಾಮಾಂತರ 20, ವಿಜಯಪುರ 57, ದಕ್ಷಿಣ ಕನ್ನಡ 40, ಕೋಲಾರ 43, ಮೈಸೂರು 35, ದಾವಣಗೆರೆಯಲ್ಲಿ 26 ಮಂದಿಗೆ ಬ್ಲಾಕ್‌ ಫಂಗಸ್‌ ಸೋಂಕು ಉಂಟಾಗಿದೆ.
 

Follow Us:
Download App:
  • android
  • ios