Asianet Suvarna News Asianet Suvarna News

ಎಸ್‌.ಎಂ.ಕೃಷ್ಣ ಪೂರ್ಣ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಸದ್ಯ ಶ್ವಾಸಕೋಶದ ಸೋಂಕು ವಾಸಿಯಾಗಿದೆ. ಐಸಿಯುನಿಂದ ಸಾಮಾನ್ಯ ಹಾಸಿಗೆಗೆ ವರ್ಗಾಯಿಸಿ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ ಎಂದು ಖಚಿತವಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ: ಡಾ.ಸತ್ಯನಾರಾಯಣ 

SM Krishna Recovered Discharged from Hospital in Bengaluru grg
Author
First Published Oct 2, 2022, 12:30 AM IST

ಬೆಂಗಳೂರು(ಅ.02): ಶ್ವಾಸಕೋಶ ಸೋಂಕಿನ ಹಿನ್ನೆಲೆ ನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೆ.24ರಂದು ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ತಪಾಸಣೆ ನಡೆಸಿದ ಸಂದರ್ಭದಲ್ಲಿ ಶ್ವಾಸಕೋಶದ ಸೋಂಕು (ಶ್ವಾಸಕೋಶಕ್ಕೆ ಆಕ್ಸಿಜನ್‌ ಪ್ರಮಾಣ ಏರುಪೇರು) ಪತ್ತೆಯಾಗಿತ್ತು. ಹೀಗಾಗಿ, ಸತತ ಏಳು ದಿನ ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಯಿತು. 

ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಸ್ಪತ್ರೆಗೆ ದಾಖಲು

‘ಸದ್ಯ ಶ್ವಾಸಕೋಶದ ಸೋಂಕು ವಾಸಿಯಾಗಿದೆ. ಐಸಿಯುನಿಂದ ಸಾಮಾನ್ಯ ಹಾಸಿಗೆಗೆ ವರ್ಗಾಯಿಸಿ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ ಎಂದು ಖಚಿತವಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ’ ಎಂದು ಡಾ.ಸತ್ಯನಾರಾಯಣ ಅವರು ಮಾಹಿತಿ ನೀಡಿದ್ದಾರೆ.
 

Follow Us:
Download App:
  • android
  • ios