ಮೋದಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲೂ ಸರಿಯಾದ ಬೆಂಬ​ಲ ಇಟ್ಟುಕೊಂಡು ಇನ್ನು ಮೂರು ಬಾರಿ ಪ್ರಧಾನಿ ಆಗಬೇಕು. ಇಲ್ಲವಾದರೆ ಚೈನಾದವರೋ, ಪಾಕಿಸ್ತಾನದವರೋ ಬಂದು ಎಲ್ಲವನ್ನೂ ಹೊಡೆದುಕೊಂಡು ಹೋಗುತ್ತಾರೆ ಎಂದು ಡಾ. ಎಸ್‌.ಎಲ್‌.ಭೈರಪ್ಪ ಪುನರುಚ್ಚರಿಸಿದ್ದಾರೆ. 

ಮೈಸೂರು: ಐದು ವರ್ಷ ಅಧಿಕಾರಾವಧಿ ಪೂರೈಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮುಂದಿನ ಮೂರು ಅವಧಿಗೆ ಪ್ರಧಾನಿಯಾಗಬೇಕು. ಇಲ್ಲದಿದ್ದರೆ ದೇಶ ಉದ್ಧಾರವಾಗದು ಎಂದು ಕಾದಂಬರಿಕಾರ ಡಾ. ಎಸ್‌.ಎಲ್‌.ಭೈರಪ್ಪ ಪುನರುಚ್ಚರಿಸಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲೂ ಸರಿಯಾದ ಬೆಂಬ​ಲ ಇಟ್ಟುಕೊಂಡು ಇನ್ನು ಮೂರು ಬಾರಿ ಪ್ರಧಾನಿ ಆಗಬೇಕು. ಇಲ್ಲವಾದರೆ ಚೈನಾದವರೋ, ಪಾಕಿಸ್ತಾನದವರೋ ಬಂದು ಎಲ್ಲವನ್ನೂ ಹೊಡೆದುಕೊಂಡು ಹೋಗುತ್ತಾರೆ ಎಂದರು. ಇದೇವೇಳೆ ಕೊಡಗಿಗೆ ತಮಿಳುನಾಡು ನೆರವು ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಬರೆದ ಪತ್ರದ ಕುರಿತು ಮಾಧ್ಯಮಗಳು ಚರ್ಚಿಸಬೇಕಿತ್ತು. ಆದರೆ ಯಾಕೋ ಯಾರು ಚರ್ಚೆ ಮಾಡುತ್ತಿಲ್ಲ. ಜನಗಳಿಗೆ ಇದು ಬೇಕಿಲ್ಲ ಎಂದರು.

ಗುಜರಾತಿನಲ್ಲಿ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಪ್ರತಿಮೆ ನಿರ್ಮಾಣವನ್ನು ಕರ್ನಾಟಕದಲ್ಲೂ ಅನುಕರಿಸಲು ಮುಂದಾಗಿರುವ ಸರ್ಕಾರ ಕೆಆರ್‌ಎಸ್‌ ಅಣೆಕಟ್ಟು ಬಳಿ ಕಾವೇರಿ ಪ್ರತಿಮೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಮೊದಲು ರೈತರಿಗೆ ನೀಡಬೇಕಾದ ಹಣ ನೀಡಲಿ. ಪ್ರತಿಮೆ, ಡಿಸ್ನಿಲ್ಯಾಂಡ್‌ ನಿರ್ಮಾಣಕ್ಕೆ ರೈತರೇ ವಿರೋಧಿಸುತ್ತಾರೆ ಎಂದು ಅವರು ಹೇಳಿದರು.