7400 ಕೋಟಿ ವೆಚ್ಚದಲ್ಲಿ ಸರ್ಕಾರದಿಂದಲೇ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್‌: ಡಿ.ಕೆ.ಶಿವಕುಮಾರ್

'ಬೆಂಗಳೂರು ಕೇಂದ್ರ ಭಾಗದಲ್ಲಿ ಸ್ಕೈಡೆಕ್‌ ನಿರ್ಮಿಸಲು ಸೂಕ್ತ ಸ್ಥಳ ಲಭ್ಯವಾಗಿಲ್ಲ. ಹೀಗಾಗಿ ನೈಸ್ ರಸ್ತೆ ಬಳಿಯ ಹೆಮ್ಮಿಗೆಪುರದಲ್ಲಿ ಸರ್ಕಾರದ ವತಿಯಿಂದಲೇ 7400 ಕೋಟಿ ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಿಸಲು ನಿರ್ಧರಿಸಲಾಗಿದೆ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 
 

Skydeck in Hemmigepura by Govt at a cost of 7400 crores Says DCM DK Shivakumar gvd

ಬೆಂಗಳೂರು (ಜು.28): 'ಬೆಂಗಳೂರು ಕೇಂದ್ರ ಭಾಗದಲ್ಲಿ ಸ್ಕೈಡೆಕ್‌ ನಿರ್ಮಿಸಲು ಸೂಕ್ತ ಸ್ಥಳ ಲಭ್ಯವಾಗಿಲ್ಲ. ಹೀಗಾಗಿ ನೈಸ್ ರಸ್ತೆ ಬಳಿಯ ಹೆಮ್ಮಿಗೆಪುರದಲ್ಲಿ ಸರ್ಕಾರದ ವತಿಯಿಂದಲೇ 7400 ಕೋಟಿ ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಿಸಲು ನಿರ್ಧರಿಸಲಾಗಿದೆ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಬೆಂಗಳೂರು ಶಾಸಕರ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಈ ಮೊದಲು ಕಂಠೀರವ ಕ್ರೀಡಾಂಗಣದ ಬಳಿ ನಿರ್ಮಾಣ ಮಾಡಲು ಪ್ರಸ್ತಾಪ ಸಿದ್ಧಪಡಿಸಲಾ ಗಿತ್ತು. ಆದರೆ ಸಂಚಾರ ದಟ್ಟಣೆ ಮತ್ತಿತರ ಸಮಸ್ಯೆಯಾಗುವ ಹಿನ್ನೆಲೆ ಯಲ್ಲಿ ಕಾರ್ಯಸಾಧುವಲ್ಲ ಎಂದು ತೀರ್ಮಾನಿಸಲಾಯಿತು. ಅಂತಿಮವಾಗಿ ಪಾರ್ಕಿಂಗ್ ವ್ಯವಸ್ಥೆಗೂ ಸೇರಿ 25 ಎಕರೆ ಜಮೀನು ಅಗತ್ಯವಿರುವು ದರಿಂದ ನೈಸ್ ರಸ್ತೆ ಬಳಿ ನಿರ್ಮಿಸಲು ನಿರ್ಧರಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲೇ ಇದಕ್ಕೆ ಅಂಗೀ ಕಾರ ನೀಡಲಾಗುವುದು' ಎಂದು ಹೇಳಿದರು.

350 ಮೀಟರ್ ಉದ್ದದ ಸೈಡೆಕ್: ಸೈಡೆಕ್ ನಿರ್ಮಾಣಕ್ಕೆ 10 ಜಾಗಗಳನ್ನು ಗುರುತಿಸಲಾಗಿತ್ತು. ವೀಕ್ಷಣಾ ಗೋಪುರ 350ಮೀಟರ್ (ಸ್ಕೈಡೆಕ್) ಎತ್ತರನಿರ್ಮಿಸಲಿ ರುವ ಕಾರಣ 20 ಕಿ.ಮೀ. ವ್ಯಾಪ್ತಿಯಲ್ಲಿ ಸ್ಕೈ ನಿರ್ಮಿಸದಂತೆ ಐಎಎಫ್‌ಐರ್‌ ಫೋರ್ಸ್, ಎಚ್‌ಎಎಲ್ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಣದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಶಾಸಕ ರೊಂದಿಗೆ ವಿಕೃತವಾಗಿ ಚರ್ಚಿಸಿ ನೈಸ್ ರಸ್ತೆಯ ಬಳಿ ನಿರ್ಮಾಣಮಾಡಲುತೀರ್ಮಾನಿಸಿದ್ದೇವೆ. ನೈಸ್‌ಕಂಪನಿ ಜತೆ ಸಮಾಲೋಚಿಸಿ ಜಾಗ ಪಡೆದು ನಿರ್ಮಾಣ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ 'ಮುಡಾ ಹಗರಣ ತಪ್ಪು' ಗ್ಯಾರಂಟಿ ಒಪಿಕೊಳ್ತಾರೆ: ವಿಜಯೇಂದ್ರ ವಿಶೇಷ ಸಂದರ್ಶನ

ಎಸ್ಟೀಮ್ ಮಾಲ್-ಸಿಲ್ಕ್ ಬೋ‌ ಸುರಂಗ: ಪೂರ್ವ-ಪಶ್ಚಿಮ ಬೆಂಗಳೂರು ಸಂಪರ್ಕಿಸಲು ಟನಲ್ ನಿರ್ಮಾಣಕ್ಕೂ ಚಿಂತನೆ ಶಾಸಕರಿಗೆ ಸುರಂಗ ಮಾರ್ಗದ ರಸ್ತೆ (ಟನಲ್ ರಸ್ತೆ) ಬಗ್ಗೆಯೂ ಮನವರಿಕೆ ಮಾಡಿಕೊಡಲಾಗಿದೆ. ಮೊದಲ ಹಂತದಲ್ಲಿ ಎಸ್ಟೀಮ್ ಮಾಲ್‌ನಿಂದ ಸಿಬೋರ್ಡ್‌ವರೆಗೆ 18.50 ಕಿ.ಮೀ. ಉದ್ದದ ಟನಲ್ ರಸ್ತೆ ನಿರ್ಮಿಸಲಿದ್ದು, ಮುಂದಿನ ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಲಾಗುವುದು. ಜತೆಗೆ ಪೂರ್ವ ಹಾಗೂ ಪಶ್ಚಿಮ ಬೆಂಗಳೂರು ಸಂಪರ್ಕಿಸಲು ಟನಲ್ ರಸ್ತೆ ನಿರ್ಮಿಸುವ ಬಗ್ಗೆಯೂ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ತಿಳಿಸಿದ್ದೇವೆ ಎಂದರು. ಇದೇ ವೇಳೆ ನೈಸ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಯವರೆಗೆ ಮೆಟ್ರೋ ಕಾರಿಡಾರ್‌ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕಿಸುವ ಮೆಟ್ರೋ ಕಾರಿಡಾರ್‌ ಮಾಡಲು ಈಗಾಗಲೇ ಮುಂದಾಗಿದ್ದೇವೆ ಎಂದು ತಿಳಿಸಿದರು.

4 ದಿಕ್ಕಿನಲ್ಲಿ ಕಸ ಹಾಕಲು ತಲಾ 100 ಎಕರೆ ಜಾಗ: ಕಸ ವಿಲೇವಾರಿಗೆ ಬೆಂಗಳೂರಿನ ಹೊರ ವಲಯದ 4 ಕಡೆ ಜಾಗ ತಲಾ 100 ಎಕರೆಯಷ್ಟು ಜಮೀನು ಗುರು ತಿಸಲು ನಿರ್ಧರಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಸರ್ಕಾರ ಜಮೀನು ಗುರುತಿಸಬೇಕು. ಇಲ್ಲದಿದ್ದರೆ ಖಾಸಗಿಯವರಿಂದ ಜಾಗ ಖರೀದಿ ಮಾಡಿ ಕಸ ವಿಲೇವಾರಿ ಘಟಕವನ್ನು ನಿರ್ಮಿಸಲು ತೀರ್ಮಾ ನಿಸಲಾಗಿದೆ. ಕಸ ವಿಲೇವಾರಿ ಮಾಡುವ ಸ್ಥಳದ ಸುತ್ತ ಗೋಡೆಗಳನ್ನು ನಿರ್ಮಿಸಿ, ಸ್ಥಳೀಯರಿಗೆ ಸಮಸ್ಯೆಯಾ ಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

70ನೇ ವಯಸ್ಸಲ್ಲಿ ಸ್ಕೂಲಿಗೆ ಹೋದ್ರಾ ಸೂಪರ್​ಸ್ಟಾರ್?: ಮೊಮ್ಮಗನ ಜೊತೆ ಸ್ಕೂಲಿಗೆ ಹೋದ ರಜನಿಕಾಂತ್

ಮೆಟ್ರೋ ಮಾರ್ಗದ ಎಲ್ಲಾ ಕಡೆ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ: ರಾಗಿಗುಡ್ಡದ ಮಾದರಿ ಬೆಂಗಳೂರಾದ್ಯಂತ ಮುಂದೆ ಮೆಟ್ರೊ ಮಾರ್ಗನಿರ್ಮಿಸುವ ಕಡೆಯಲ್ಲೆಲ್ಲಾ ಡಬಲ್ ಡೆಕ್ಕರ್‌ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದುಡಿ.ಕೆ.ಶಿವಕುಮಾರ್‌ ಹೇಳಿದರು. ಬೆಂಗಳೂರಿನಲ್ಲಿ ಸದ್ಯ ಭೂ ಸ್ವಾಧೀನ ಮಾಡಲು ಆಗುವುದಿಲ್ಲ. ಹಾಗಾಗಿ ಎಲ್ಲಾ ಕಡೆ ಡಬಲ್ ಡೆಕ್ಕರ್‌ ಮಾಡಲು ತೀರ್ಮಾನ ಮಾಡಿದ್ದೇವೆ. ಇದರ ವೆಚ್ಚವನ್ನು ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಪಾಲುದಾರಿಕೆಯಲ್ಲಿ ಜಂಟಿಯಾಗಿ ಭರಿಸಲಿವೆ ಎಂದು ಹೇಳಿದರು.

Latest Videos
Follow Us:
Download App:
  • android
  • ios