ಸಿಂದಗಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶಿವಾನಂದ ಸೋಮಜಾಳ (55) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಜಯಪುರದಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಮಧ್ಯಾಹ್ನ ಸಮಾವೇಶ ಮುಗಿಸಿಕೊಂಡು ಸಿಂದಗಿಗೆ ವಾಪಸ್‌ ಆಗಿದ್ದರು. 

ವಿಜಯಪುರ (ಜ.21): ಸಿಂದಗಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶಿವಾನಂದ ಸೋಮಜಾಳ (55) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಜಯಪುರದಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಮಧ್ಯಾಹ್ನ ಸಮಾವೇಶ ಮುಗಿಸಿಕೊಂಡು ಸಿಂದಗಿಗೆ ವಾಪಸ್‌ ಆಗಿದ್ದರು. 

ರಾತ್ರಿ 9 ಗಂಟೆಯ ವೇಳೆಗೆ ಸಿಂದಗಿಯಲ್ಲಿ ಪರಿಚಯಸ್ಥರ ಮನೆಯಲ್ಲಿ ಮಾತನಾಡುತ್ತ ಕುಳಿತಿದ್ದಾಗ ಏಕಾಏಕಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆಗಾಗಲೆ ಅವರು ಕೊನೆಯುಸಿರೆಳೆದಿದ್ದರು. ಮಾಜಿ ಯೋಧರೂ ಆಗಿರುವ ಸಿಂದಗಿ ತಾಲೂಕಿನ ಸೋಮಜಾಳ ಗ್ರಾಮದ ಶಿವಾನಂದ ಅವರು, ಜೆಡಿಎಸ್‌ ಘೋಷಣೆ ಮಾಡಿದ್ದ ಅಭ್ಯರ್ಥಿಗಳ ಪೈಕಿ ಒಬ್ಬರು. 

ಬ್ಯಾಡಗಿ ಕ್ಷೇತ್ರದ ಮಾಜಿ ಸಚಿವ ಡಾ.ಎಚ್‌.ಡಿ.ಲಮಾಣಿ ವಿಧಿವಶ

16 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪುತ್ರ, ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಜ.18ರಂದು ಸಿಂದಗಿಯಲ್ಲಿ ಜೆಡಿಎಸ್‌ನ ಬೃಹತ್‌ ಸಮಾವೇಶ ಆಯೋಜಿಸಿದ್ದ ಶಿವಾನಂದ, ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವುದಾಗಿ ವೇದಿಕೆ ಮೇಲೆಯೇ ಕುಮಾರಸ್ವಾಮಿಗೆ ಮಾತು ಕೊಟ್ಟಿದ್ದರು.