Asianet Suvarna News Asianet Suvarna News

ಸ್ನೇಹಿತರ ಒತ್ತಡಕ್ಕೆ ಮಣಿದು 75ನೇ ಹುಟ್ಟುಹಬ್ಬ: ಸಿದ್ದರಾಮಯ್ಯ

*  ಇದು ಶಕ್ತಿಪ್ರದರ್ಶನ ಅಲ್ಲ: ವಿಪಕ್ಷ ನಾಯಕ ಸ್ಪಷ್ಟನೆ
*  ನಾನು ಯಾರ ವಿರುದ್ಧ ಶಕ್ತಿ ಪ್ರದರ್ಶನ ಮಾಡಲಿ?
*  ವಾಸ್ತವವಾಗಿ ನನಗೆ ಜನ್ಮದಿನಾಂಕ ಗೊತ್ತಿಲ್ಲ 
 

Siddaramaiah Talks Over His 75th Birthday Celebration grg
Author
Bengaluru, First Published Jul 3, 2022, 4:30 AM IST | Last Updated Jul 3, 2022, 4:30 AM IST

ಬೆಂಗಳೂರು(ಜು.03):  ನಾನು ಈವರೆಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ ನಾನು 75ನೇ ವರ್ಷದ ಮೈಲುಗಲ್ಲು ಪೂರೈಸುತ್ತಿರುವುದರಿಂದ ಸ್ನೇಹಿತರು, ಹಿತೈಷಿಗಳ ಒತ್ತಾಯದ ಮೇರೆಗೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದು ಶಕ್ತಿ ಪ್ರದರ್ಶನವೂ ಅಲ್ಲ ಏನೂ ಅಲ್ಲ, ನಾನು ಯಾರ ವಿರುದ್ಧ ಶಕ್ತಿ ಪ್ರದರ್ಶನ ಮಾಡಲಿ ಎಂದೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಸಮಾರಂಭಕ್ಕೆ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌ ಸೇರಿ ಎಲ್ಲರೂ ಆಗಮಿಸುತ್ತಿದ್ದಾರೆ. ಬಿಜೆಪಿಯವರೂ ಸೇರಿದಂತೆ ರಾಜ್ಯದ ಜನತೆಗೂ ಆಹ್ವಾನ ನೀಡುತ್ತಿದ್ದೇನೆ ಎಂದರು.

ಸಿದ್ದರಾಮೋತ್ಸವ: ಹುಟ್ಟುಹಬ್ಬದ ನೆಪದಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರ ಸಿದ್ದು?

ನನ್ನ ಹುಟ್ಟುಹಬ್ಬದ ಕಾರ್ಯಕ್ರಮದ ಬಗ್ಗೆ ಬಿಜೆಪಿಯವರು ಹೊಟ್ಟೆಉರಿಯಿಂದ ವಿವಿಧ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ. ಸಿದ್ದು ಹಾಸ್ಯೋತ್ಸವ ಎಂದಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರು 77ನೇ ಹುಟ್ಟುಹಬ್ಬ ಆಚರಿಸಿಕೊಂಡಾಗ ನಾನೂ ಹೋಗಿದ್ದೆ. ಅವರ ಹುಟ್ಟುಹಬ್ಬ ಆಚರಣೆ ಬಗ್ಗೆ ಇವರು ಏಕೆ ಟೀಕೆ ಮಾಡಲಿಲ್ಲ? ಸಚಿವ ಅಶೋಕ್‌ ಪುಟಗಟ್ಟಲೇ ಜಾಹಿರಾತು ನೀಡಿ ಹುಟ್ಟಹಬ್ಬ ಆಚರಣೆ ಮಾಡಿಕೊಂಡಿದ್ದರ ಬಗ್ಗೆ ಏನು ಹೇಳುತ್ತಾರೆ? ಹೊಟ್ಟೆಕಿಚ್ಚು, ದುರುದ್ದೇಶದಿಂದ ರಾಜಕೀಯ ವೈರಿಗಳು ಈ ರೀತಿ ಟೀಕೆ ಮಾಡುತ್ತಾರೆ. ಇದಕ್ಕೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಕಿಡಿಕಾರಿದರು.

ವಾಸ್ತವವಾಗಿ ನನಗೆ ಜನ್ಮದಿನಾಂಕ ಗೊತ್ತಿಲ್ಲ. 1984ರಲ್ಲಿ ನಾನು ಮೊದಲ ಬಾರಿಗೆ ಸಚಿವನಾದ ದಿನದಿಂದಲೂ ಸಹ ನಾನು ಎಂದೂ ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಹಿಂದೆ 12ನೇ ತಾರೀಖು ಆಚರಣೆ ಮಾಡಿಕೊಳ್ಳುತ್ತಿದ್ದೆ. ಆದರೆ ಶಾಲೆಯ ದಾಖಲೆಗಳಲ್ಲಿ ಆ.3 ಎಂದು ಇರುವುದರಿಂದ ಈಗ ಆ.3ರಂದು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. 2022ರ ಆ.3ಕ್ಕೆ ನನಗೆ 75 ವರ್ಷ ತುಂಬಲಿದೆ. ಇದೊಂದು ವಿಶೇಷ ಸಂದರ್ಭ ಎಂದು ನನ್ನ ಸ್ನೇಹಿತರು, ಹಿತೈಷಿಗಳು ಸೇರಿ ಜನ್ಮದಿನ ಆಚರಣೆ ಮಾಡುತ್ತಿದ್ದಾರೆ. ಅವರ ಒತ್ತಾಯಕ್ಕೆ ಮಣಿದು ನಾನೂ ಸಹ ಒಪ್ಪಿದ್ದೇನೆ ಎಂದರು.

ಬಿಟಿ ಲಲಿತಾ ನಾಯಕ್‌ಗೆ ಕೊಲೆ ಬೆದರಿಕೆ ಪತ್ರ, ಟಾರ್ಗೆಟ್ ಲಿಸ್ಟ್‌ನಲ್ಲಿ ಮಾಜಿ ಸಿಎಂ ಹೆಸರು!

ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ನೀವು ಹೋಗಿದ್ದಿರಿ ಅವರೂ ನಿಮ್ಮ ಹುಟ್ಟುಹಬ್ಬಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಹುಟ್ಟುಹಬ್ಬ ಆಚರಣೆಗೆ ಆರ್‌.ವಿ. ದೇಶಪಾಂಡೆ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಯಾರಾರ‍ಯರನ್ನು ಆಹ್ವಾನಿಸಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ನಾನು ಮಾಧ್ಯಮದ ಮೂಲಕ ಬಿಜೆಪಿಯವರೂ ಸೇರಿದಂತೆ ರಾಜ್ಯದ ಜನತೆ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ ಎಂದು ಹೇಳಿದರು.

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

5 ಲಕ್ಷ ಜನರನ್ನು ಸೇರಿಸಿ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಸಿದ್ದರಾಮಯ್ಯ 75ನೇ ಜನ್ಮದಿನ ಆಚರಣೆ ಮಾಡುವ ಬಗ್ಗೆ ‘ಕನ್ನಡಪ್ರಭ’ ಜೂ.28ರಂದೇ ವಿಶೇಷ ವರದಿ ಪ್ರಕಟಿಸಿತ್ತು.
 

Latest Videos
Follow Us:
Download App:
  • android
  • ios