ದಿಲ್ಲಿಗೆ ಬಂದಿದ್ದ ಸಿದ್ದರಾಮಯ್ಯ ಅವರಿಗೆ ಪತ್ರಕರ್ತರು ‘ಸೀತಾರಾಮ ಕಲ್ಯಾಣ ಹೇಗಿದೆ’ ಎಂದು ಕೇಳಿದಾಗ ಉತ್ತರ ಕೊಡದ ಸಿದ್ದು, ಸುಮ್ಮನೆ ಅತ್ತಿತ್ತ ನೋಡುತ್ತಿದ್ದರು. ಆಗ ಪತ್ರಕರ್ತರೊಬ್ಬರು, ‘ಸಮ್ಮಿಶ್ರ ಸರ್ಕಾರ ಇದ್ದ ಹಾಗಿದೆ ಅಲ್ವಾ? ಸರಿಯಾಗಿ ನಡೆಯದೇ ಇದ್ದರೂ ಕೂಡ ಹೊಗಳಬೇಕು’ ಎಂದಾಗ ಪಕ್ಕದಲ್ಲಿ ಇದ್ದ ಜಮೀರ್‌ ಅಹ್ಮದ್‌, ಥಮ್ಸ್‌ ಅಪ್‌ ಮಾಡುತ್ತಾ ‘ಬರೋಬರ್‌ ಬೋಲಾ ಸಾಹಬ್' ಎಂದರು.

ಆದರೆ ಸಿದ್ದು ಬಾಯಿಯಿಂದ ಮಾತ್ರ ಚಿತ್ರದ ಬಗ್ಗೆ ಒಂದು ವಾಕ್ಯವೂ ವಿಮರ್ಶೆ ಬರಲಿಲ್ಲ. ಆಗ ಪತ್ರಕರ್ತರು ಜಮೀರ್‌ ಭಾಯಿಗೆ, ‘ಹೇಗಿದೆ ನಿಮ್ಮ ಮಿತ್ರನ ಮಗನ ಚಿತ್ರ’ ಎಂದಾಗ ಥಟ್ಟನೆ ಉತ್ತರಿಸಿದ ಜಮೀರ್‌, ‘ಪುರಾನಾ ದೋಸ್‌್ತ ಸಾಹಬ್‌’ ಎಂದರು. ಆಗ ಮಾತನಾಡಿದ ಸಿದ್ದು, ‘ಪಾಲಿಟಿಕ್ಸ್‌ನಲ್ಲಿ ಯಾರೂ ಸ್ನೇಹಿತರಲ್ಲ, ಶತ್ರುಗಳೂ ಅಲ್ಲ ನಡೀರಿ’ ಎಂದು ಎದ್ದು ಹೊರಟರು.

[ಪ್ರಶಾಂತ್ ನಾತುರವರ 'ಇಂಡಿಯಾ ಗೇಟ್' ಅಂಕಣದ ಆಯ್ದ ಭಾಗ)