Asianet Suvarna News Asianet Suvarna News

ಲಸಿಕೆ ಇಲ್ಲದೇ ಅಭಿಯಾನ ಆರಂಭಿಸಿದ ಸಿಎಂ: ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಸರ್ಕಾರ ಕೊರೋನಾ ಮಹಾಮಾರಿಯನ್ನ ಗಂಭೀರವಾಗಿ ಪರಿಗಣಿಸಿಲ್ಲ| ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೇ, ಈ ಪರಿಸ್ಥಿತಿ ಬರುತ್ತಿರಲಿಲ್ಲ| ವೈರಸ್‌ಅನ್ನು ತಡೆಗಟ್ಟಲು ಸರ್ಕಾರ ಯಾವುದೇ ತಯಾರಿ ಮಾಡಿಕೊಂಡಿಲ್ಲ| ಪೋಲಿಯೊ ಅಭಿಯಾನದ ರೀತಿಯಲ್ಲಿ ವ್ಯಾಕ್ಸಿನ್ ಅಭಿಯಾನ ಆರಂಭವಾಗಬೇಕು: ಸಿದ್ದರಾಮಯ್ಯ| 

Siddaramaiah Slam CB BS Yediyurappa grg
Author
Bengaluru, First Published May 1, 2021, 2:30 PM IST

ಬೆಂಗಳೂರು(ಮೇ.01): ಜನರಿಗೆ ಸಹಾಯ ಮಾಡುವುದು ನಮ್ಮ ಸಂಕಲ್ಪವಾಗಿದೆ. ಕೋವಿಡ್ ಬಗ್ಗೆ ಸರ್ಕಾರಕ್ಕೆ ಸಲಹೆಯನ್ನು ಕೊಟ್ಟಿದ್ದೇವೆ. ಅವರಿಗೆ ಸಹಕಾರವನ್ನೂ ಕೊಡುತ್ತಿದ್ದೇವೆ. ಇದೀಗ ಆ್ಯಂಬುಲೆನ್ಸ್‌ಗಳಿಗೆ ಚಾಲನೆ ಕೊಟ್ಟಿದ್ದೇವೆ. ನಿನ್ನೆ ನಾನು ಆಕ್ಸಿಜನ್‌ಗೆ ಫೋನ್ ಮಾಡಿದ್ದೆ, ನನ್ನ ಮನೆಗೆ ಆ್ಯಂಬುಲೆನ್ಸ್ ಬರಲು 40 ನಿಮಿಷ ಆಯ್ತು. ಹಾಗಾಗಿ ಆ್ಯಂಬುಲೆನ್ಸ್ ಗೆ ಚಾಲನೆ ಕೊಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಶಿಯಲ್ ಮಿಡಿಯಾ ವಾರ್ ರೂಂ ಮಾಡಿದ್ದೇವೆ. ರಾಜ್ಯದ ಪ್ರತಿಯೊಂದು ಊರುಗಳಿಗೂ ನಾವು ತಲುಪುತ್ತೇವೆ. ಸೋಶಿಯಲ್ ಮಿಡಿಯಾ ವಾರಿಯರ್ಸ್‌ಗಳನ್ನ ನೇಮಿಸಿಕೊಳ್ಳುತ್ತೇವೆ. ತತ್ವ ಸಿದ್ಧಾಂತವಿರುವ ಯಾರೇ ಬಂದರೂ ಆಹ್ವಾನ. ಸೇವಾ ಮನೋಭಾವ ಇರುವವರು ಬರಬಹುದು. ಮಿಸ್ಡ್ ಕಾಲ್ ಕೊಟ್ಟರೆ ನೋಂದಣಿ ಮಾಡಿಕೊಳ್ಳಲಾಗುತ್ತದೆ. ನೊಂದ ಜನರ ಧ್ವನಿಯಾಗುವವರಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

"

ರೆಮಿಡಿಸಿವಿರ್‌ಗೆ ಹಾಹಾಕಾರ: ಬಿಜೆಪಿ ಸಂಸದರಿಗೆ ಹೇಗೆ ಸಿಕ್ತು ಈ ಔಷಧಿ, ಡಿಕೆಶಿ ಫುಲ್‌ ಗರಂ

ಇದೇ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರ ಕೊರೋನಾ ಮಹಾಮಾರಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೇ, ಈ ಪರಿಸ್ಥಿತಿ ಬರುತ್ತಿರಲಿಲ್ಲ. ವೈರಸ್‌ಅನ್ನು ತಡೆಗಟ್ಟಲು ಸರ್ಕಾರ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಒಂದು ಕೋಟಿ ಲಸಿಕೆಯನ್ನ ಆರ್ಡರ್ ಮಾಡಿದ್ದೇವೆ ಎಂದು ಹೇಳುತ್ತಾರೆ. ರಾಜ್ಯಕ್ಕೆ ಆರೂವರೆ ಕೋಟಿ ವ್ಯಾಕ್ಸಿನ್ ಬೇಕು. ಅದು ಕೂಡ ಈ ತಿಂಗಳ ಕೊನೆಯಲ್ಲಿ ವ್ಯಾಕ್ಸಿನ್ ಸಿಗುತ್ತದೆ. ಇದು ನನಗೆ ಇರುವ ಮಾಹಿತಿಯಾಗಿದೆ. ಪೋಲಿಯೊ ಅಭಿಯಾನದ ರೀತಿಯಲ್ಲಿ  ವ್ಯಾಕ್ಸಿನ್ ಅಭಿಯಾನ ಆರಂಭವಾಗಬೇಕು. ದೇಶದಾದ್ಯಂತ ಅಭಿಯಾನ ಆಗಬೇಕು. ಎರಡು ಡೋಸ್ ಪ್ರತಿಯೊಬ್ಬರಿಗೂ ಹಾಕಲೇ ಬೇಕು. ಯಾರಿಗೆ ಅಗತ್ಯವಿದೆ ಅವರಿಗೆಲ್ಲ ವ್ಯಾಕ್ಸಿನ್ ಹಾಕಬೇಕು. ಇದನ್ನು ಸರ್ಕಾರ ಮಾಡಲೇ ಬೇಕು ಎಂದು ಆಗ್ರಹಿಸಿದ್ದಾರೆ. 

ಬೇಜವಾಬ್ದಾರಿಯಿಂದ ಹೇಳಿಕೆ ನೀಡುವ ಪ್ರಧಾನಿ ಮೋದಿ

ವೈಫಲ್ಯ ಕಂಡಿರುವ ಸರ್ಕಾರಗಳಿವು. ಪ್ರಧಾನಿ ನರೇಂದ್ರ ಮೋದಿ ಬೇಜವಾಬ್ದಾರಿಯಿಂದ ಹೇಳಿಕೆ ಕೊಡುತ್ತಾರೆ. 162 ಯೂನಿಟ್‌ಗಳಿಗೆ ಟೆಂಡರ್ ಕರೆದಿದ್ದಾರೆ. ಎಂಟು ತಿಂಗಳಲ್ಲಿ ಕೇವಲ ಮೂವತ್ತು ಯೂನಿಟ್‌ಗಳು ಕೆಲಸ ಶುರು ಮಾಡಿವೆ. 162 ರಲ್ಲಿ ಕೇವಲ 30 ಯೂನಿಟ್ ಗಳು ಕೆಲಸ ಶುರು ಮಾಡಿವೆ. ಪ್ರಧಾನಿ ಅವರು ಆರು ಕೋಟಿ ವ್ಯಾಕ್ಸಿನ್ ಬೇರೆ ದೇಶಕ್ಕೆ ಕಳಿಸಿದ್ದಾರೆ. ಇದೀಗ ನಮ್ಮ ದೇಶದಲ್ಲೇ ವ್ಯಾಕ್ಸಿನ್ ಇಲ್ಲ. ನನ್ನ ಬಾಮೈದನಿಗೆ ರೆಮಿಡಿಸಿವರ್ ಔಷಧಿ ಸಿಕ್ಕಿಲ್ಲ. ನಾನು ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಅವರಿಗೆ ಫೋನ್ ಮಾಡಿ‌ ಕೇಳಬೇಕಾಯ್ತು. ಬಿಜೆಪಿ ಸಂಸದ ಉಮೇಶ್‌ ಜಾಧವ್‌ ರೆಮಿಡಿಸಿವರ್ ಬಂದು ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತಾರೆ. ನಾನು ಕೂಡ ವ್ಯಾಕ್ಸಿನ್ ತೆಗೆದುಕೊಂಡು ಹೋಗ್ತೇನೆ ನನಗೂ ಅನುಮತಿ ಕೊಡಿ. ಯಾರು ಎಂಪಿಗೆ ಅನುಮತಿ ಕೊಟ್ಟಿದ್ದು?. ಡ್ರಗ್ ಕಂಟ್ರೋಲ್ ಅನುಮತಿ ಹೇಗೆ ಅನುಮತಿ ನೀಡಿದ್ರು ಅಂತ ಸಿಎಂ ಬಿ.ಎಸ್‌.ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಸತ್ತವರ ಅಂಕಿ ಅಂಶಗಳ ಬಗ್ಗೆಯೂ ಸಹ ಸುಳ್ಳು ಹೇಳುತ್ತಾರೆ. ಎಚ್ಚರ ತೆಗೆದುಕೊಳ್ಳಲಿ ಎಂದು ನಾವು ಹೇಳುತ್ತೇವೆ. ಸರ್ಕಾರ ಜೊತೆ ಫೈಟ್ ಮಾಡುತ್ತಿಲ್ಲ. ನಿನ್ನೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಫೋನ್ ಮಾಡಿದ್ದೇನೆ. ಆದರೆ, ಹೆಲ್ತ್ ಮಿನಿಸ್ಟರ್ ಫೋನ್‌ಗೆ ಸಿಗಲ್ಲ. ಹೀಗಾಗಿ ಜನರಿಗೆ ಕಾಂಗ್ರೆಸ್ ಸಹಾಯ ಮಾಡುತ್ತದೆ. ಕಾಂಗ್ರೆಸ್ ಕಚೇರಿಯಿಂದ ಸಹಾಯ ಇದ್ದೇ ಇರುತ್ತದೆ. ಹಿಂದೆಯೂ ಮಾಡಿದ್ದೇವೆ, ಈಗಲೂ ಮಾಡುತ್ತೇವೆ. ಜನರ ಜೊತೆ ನಾವು ನಿಲ್ಲುತ್ತೇವೆ. ವಾರ್ ರೂಮ್ ಮಾಡಿದ್ದೇವೆ. ಆಂಬುಲೆನ್ಸ್ ವ್ಯವಸ್ಥೆಯನ್ನ ಮಾಡಿದ್ದೇವೆ. ನಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕೊರೋನಾ ವಿರುದ್ಧ ಹೋರಾಟ: ಕಾಂಗ್ರೆಸ್ಸಿಂದ ಬೆಂಗಳೂರಿಗೆ 10 ಆ್ಯಂಬುಲೆನ್ಸ್‌

ವ್ಯಾಕ್ಸಿನ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಗುಂಪಿನಿಂದ ದೂರ ಉಳಿಯಿರಿ. ಲಾಕ್‌ಡೌನ್‌ಗೆ ಸಹಕಾರ ನೀಡಬೇಕು. ಡಿಕೆಶಿ ಹೇಳಿದ್ದಾರೆ, ಆರ್ಥಿಕ ಪ್ಯಾಕೇಜ್ ಕೇಳಿದ್ದಾರೆ. ನಾನೂ ಕೂಡ ಒತ್ತಾಯ ಮಾಡುತ್ತೇನೆ. ಸರ್ಕಾರ ಆರ್ಥಿಕ ಪ್ಯಾಕೇಜ್ ಕೊಡಬೇಕು. ಸರ್ಕಾರದಲ್ಲಿ ಕತ್ತಿ ಅಂತಹ ಮಂತ್ರಿಗಳಿದ್ದಾರೆ. ಮಂತ್ರಿಗಳ ಆಗೋಕೆ ಯೋಗ್ಯರಲ್ಲ ಅವರು ಎಂದು ಹೇಳುವ ಮೂಲಕ ಸಚಿವ ಉಮಶ್‌ ಕತ್ತಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಯಡಿಯೂರಪ್ಪ ಲಸಿಕೆ ಇಲ್ಲದೇ ಇಂದು ಅಭಿಯಾನ ಆರಂಭಿದ್ದಾರೆ. ಸುಮ್ನೆ ಫೋಟೋಗೋಸ್ಕರ ಮಾಡಿದ್ದಾರೆ. ಮಾಧ್ಯಮದವರು ತೋರಿಸ್ತಾರೆ ಅಂತ ಹೀಗೆ ಮಾಡಿದ್ದಾರೆ. ಲಸಿಕೆಯೇ ಇಲ್ಲ, ಮೇ ಅಂತ್ಯದವರೆಗೂ ಲಸಿಕೆ ಸಿಗಲ್ಲ, ನಾನು ಹೇಳುತ್ತಿರುವುದು ಸತ್ಯ. ಈ ಬಗ್ಗೆ ನಾನು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ. ನಿನ್ನೆ ಆರೋಗ್ಯ ಸಚಿವ ಡಾ. ಸುಧಾಕರ್ ಏನಂತ ಹೇಳಿದ್ದಾರೆ? ಲಸಿಕೆ ಇಲ್ಲ ಅಂತಾ ಹೇಳಿದ್ದಾರೆ. ಪ್ರಧಾನಿ ಹೆಸರು ಎಳೆದು ತರಬೇಡಿ ಅಂತ ಸಿಎಂ ಹೇಳ್ತಾರೆ. ಮೋದಿ ಏನಾಗಿದ್ದಾರೆ?. ಅವರನ್ನ ಕೇಳದೆ ಯಾರನ್ನ ಕೇಳಬೇಕು? ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios