ದೊಡ್ ಗೌಡ್ರು ಮೈಸೂರಿಂದ ಎಲೆಕ್ಷನ್ ನಿಲ್ತಾರಾ?: ಸಿದ್ದು ಕೋಪ ನೋಡಿ!
ಮೈಸೂರಿನಿಂದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಸ್ಪರ್ಧೆ?| ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ| ಮೈಸೂರಿನಿಂದ ದೇವೇಗೌಡ ಸ್ಪರ್ಧಿಸಲ್ಲ ಎಂದ ಸಿದ್ದರಾಮಯ್ಯ| ಮೈಕ್ ದೂರ ತಳ್ಳಿ ಕಾರು ಏರಿ ಹೊರಟ ಸಿದ್ದರಾಮಯ್ಯ|
ಮಲ್ಲಿಕಾರ್ಜನ ಹೊಸಮನಿ
ಬಾಗಲಕೋಟೆ(ಮಾ.05): ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮೈಸೂರಿನಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಉತ್ತರ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ದೇವೇಗೌಡರು ಮೈಸೂರಿನಿಂದ ಲೋಕಸಭೆ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದರು.
"
ದೇವೇಗೌಡರು ಮೈಸೂರಿನಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಸಚಿವ ಜಿಟಿಡಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿದ್ದರಾಮಯ್ಯ. ಈ ರೀತಿ ಯಾರು ಹೇಳಿದ್ದಾರೋ ಅವರನ್ನೇ ಕೇಳಿ ಎಂದು ಸಿಡಿಮಿಡಿಗೊಂಡರು.
ಆದರೂ ಪತ್ರಕರ್ತರು ಪಟ್ಟು ಬಿಡದೆ ಪ್ರಶ್ನೆ ಕೇಳಿದಾಗ ಮೈಕ್ ದೂರ ಸರಿಸಿ ಸಿದ್ದರಾಮಯ್ಯ ಕಾರಿನಲ್ಲಿ ಹೊರಟು ಹೋದರು.