ಸಿದ್ದು ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ| ಸಂತೋಷ್‌ ಸ್ವಿಚ್‌ ಒತ್ತಿದ್ರೆ ನಳಿನ್‌ ಡ್ಯಾನ್ಸ್‌ ಎಂದಿದ್ದ ಸಿದ್ದರಾಮಯ್ಯಗೆ ಕಟೀಲ್‌ ವ್ಯಂಗ್ಯ| 

ಮಂಡ್ಯ[ಅ.19]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯರು, ಜ್ಞಾನಿಗಳು, ಪಂಡಿತರು, ಸ್ವಲ್ಪ ಇತಿಹಾಸವನ್ನೀ ಅಧ್ಯಯನ ಮಾಡಿದ್ದಾರೆ. ಅದಕ್ಕಾಗಿ ವೀರ ಸಾವರ್ಕರ್‌ಗೆ ಭಾರತ ರತ್ನ ಕೊಡುವ ವಿಚಾರದಲ್ಲಿ ಎಗ್ಗಿಲ್ಲದೇ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಂತೋಷ್‌ ಸ್ವಿಚ್‌ ಒತ್ತಿದ್ರೆ ನಳಿನ್‌ ಡ್ಯಾನ್ಸ್‌: ಸಿದ್ದರಾಮಯ್ಯ

ಶುಕ್ರವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್‌ ಕುಮಾರ್‌ ಕಟೀಲ್‌ಗೆ ಜ್ಞಾನವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಎಲ್ಲೂ ಕೂಡ ಜ್ಞಾನಿ ಎಂದು ಹೇಳಿಕೊಂಡಿಲ್ಲ. ಸಿದ್ದರಾಮಯ್ಯ ಭ್ರಮೆಯಲ್ಲೇ ಮಾತನಾಡಿದ್ದಾರೆ ಎಂದು ಟೀಕಿಸಿದರು.

ಮಾಹಿತಿ ಇಲ್ಲದೆ ಬಾಲಿಶ ಹೇಳಿಕೆ ನೀಡಬಾರದು: ಕಟೀಲ್‌ಗೆ ಸಿದ್ದು ತಿರುಗೇಟು

ಪುರಾಣದಲ್ಲಿ ಬಹಳ ಜ್ಞಾನವಂತರು, ಪಂಡಿತರು ಇದ್ದರು. ರಾವಣ ಕೂಡ ಒಬ್ಬ ಜ್ಞಾನವಂತ, ಪಂಡಿತನಾಗಿದ್ದ ಎನ್ನುವ ಮೂಲಕ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ರಾವಣನಿಗೆ ಹೋಲಿಕೆ ಮಾಡಿದರು.