ತುಮಕೂರು :  ಲಕ್ಷಾಂತರ ಭಕ್ತರ, ಶಿವಶರಣರ ಕಣ್ಣೀರ ಪ್ರಾರ್ಥನೆ ಕೊನೆಗೂ ಫಲಿಸಲೇ ಇಲ್ಲ. ವಯೋಸಹಜ ಅನಾರೋಗ್ಯ ದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹಿ, ಶತಮಾನದ ಸಂತ, ದೇಶದ ಅತ್ಯಂತ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ(111) ಭವದ ಬದುಕಿಗೆ ವಿದಾಯ ಹೇಳಿ ಶಿವನೆಡೆಗೆ ನಡೆದೇ ಬಿಟ್ಟರು. 

ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬೆಂಗಳೂರು -ತುಮಕೂರು ಹೆದ್ದಾರಿಯ ಟೋಲ್ ಗಳಲ್ಲಿ ವಾಹನಗಳಿಗೆ ಮಂಗಳವಾರ ಉಚಿತ ಪ್ರವೇಶ ಕಲ್ಪಿಸಿದೆ. 

ಶ್ರೀಗಳ ದರ್ಶನಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ಭಕ್ತಾದಿಗಳು ಮಠದತ್ತ ಪ್ರಯಾಣ ಬೆಳೆಸಿದ್ದಾರೆ. ಹಾಗಾಗಿ ಎನ್ ಎಚ್‌ಎಐ ಬೆಂಗಳೂರಿನಿಂದ ಕ್ಯಾತ ಸಂದ್ರದವರೆಗೆ ಟೋಲ್‌ಗಳಲ್ಲಿ ವಾಹನ ಗಳಿಗೆ ಉಚಿತ ಪ್ರವೇಶ ನೀಡಿದೆ.