ತುಮಕೂರು :  ಸಿದ್ಧಗಂಗಾ ಮಠದ ಶಿವೈಕ್ಯ ಶಿವಕುಮಾರ ಸ್ವಾಮೀಜಿಯವರು ತಮ್ಮ ಹಸ್ತಾಕ್ಷರದಲ್ಲಿ ಬರೆದ ಕೊನೆಯ ಪತ್ರವೊಂದು ಇದೀಗ ಮಠದಲ್ಲಿ ದಾಖಲೆಯಾಗಿ ಸಂರಕ್ಷಿಸಲ್ಪಡುತ್ತಿದೆ.

ಡಾ.ಶಿವಕುಮಾರ ಸ್ವಾಮೀಜಿ 2018ರ ನವೆಂಬರ್‌ 8 ರಂದು ತಮ್ಮ ಕೈ ಬರಹದಲ್ಲಿ 2019 ರ ಜನವರಿಯಲ್ಲಿ ನಡೆಯಲಿದ್ದ ಸಿದ್ಧರಾಮ ಜಯಂತಿಗೆ ಶುಭ ಹಾರೈಸಿ ಪತ್ರವೊಂದನ್ನು ಬರೆದಿದ್ದರು. ಅದು ಅವರ ಜೀವಮಾನದಲ್ಲಿ ಬರೆದ ಕೊನೆಯ ಪತ್ರವಾಗಿದೆ.

2019ರ ಜನವರಿ 14-15ರಂದು ಶ್ರೀ ಗುರು ಸಿದ್ಧರಾಮೇಶ್ವರ ಜಯಂತಿಯು ಗುಬ್ಬಿ ತಾಲೂಕು ಗವಿಮಠದಲ್ಲಿ ನಡೆಯಲಿದೆ. ಸಮಾರಂಭವು ಯಶಸ್ವಿಯಾಗಲಿ. ಈ ಸಂದರ್ಭದಲ್ಲಿ ಹೊರತರಲಿರುವ ಸಿದ್ಧರಾಮ ಸ್ಮರಣ ಸಂಚಿಕೆ ಸುಂದರವಾಗಿ ಹೊರಬರಲಿ ಎಂದು ಶುಭ ಕೋರುತ್ತೇನೆ’ ಎಂದು ಶ್ರೀ ಶಿವಕುಮಾರ ಸ್ವಾಮೀಜಿ ಪತ್ರ ಬರೆದಿದ್ದರು.