ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದು, ಈ ವಾರದ ಕೊನೆಯಲ್ಲಿ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ.

ತುಮಕೂರು[ಡಿ.18]: ಹದಿಮೂರು ದಿನಗಳಿಂದ ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಬೈಪಾಸ್‌ ಮಾದರಿಯ ಚಿಕಿತ್ಸೆಗೆ ಒಳಗಾಗಿದ್ದ ಸಿದ್ಧಗಂಗಾ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದು, ವಾರಾಂತ್ಯದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

ಸ್ಪೆಷಲ್‌ ವಾರ್ಡ್‌ಗೆ ಶಿಫ್ಟ್‌ ಆಗಿದ್ದ ಶ್ರೀಗಳಿಗೆ ಮತ್ತೆ ಸೋಂಕು ತಗುಲಬಾರದೆಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಮತ್ತೆ ಐಸಿಯುಗೆ ಸೇರಿಸಲಾಗಿತ್ತು. ಸೋಮವಾರ ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಶ್ರೀಗಳು ಕುರ್ಚಿ ಮೇಲೆ ಕುಳಿತುಕೊಂಡಿದ್ದರು. ಮೂರು ನಿಮಿಷ ವಾಕಿಂಗ್‌ ಕೂಡಾ ಮಾಡಿದರು.

ಸದ್ಯ ಅವರಿಗೆ ಗ್ಲೂಕೋಸ್‌ ರೂಪದಲ್ಲಿ ಆಹಾರ ನೀಡಲಾಗುತ್ತಿದ್ದು, ಮಂಗಳವಾರದಿಂದ ಮತ್ತೆ ದ್ರವ ರೂಪದ ಆಹಾರ ನೀಡಲು ನಿರ್ಧರಿಸಲಾಗಿದೆ. ಡಿಎಂಕೆ ಮುಖಂಡ ಅಳಗಿರಿ ಅವರು ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.