ಬೆಂಗಳೂರು, [ಡಿ.02]: ತ್ರಿವಿಧ ದಾಸೋಹಿ..ನಡೆದಾಡೋ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ನಿನ್ನೆ [ಶನಿವಾರ]  ಜ್ವರದಿಂದ ಬಳಲುತ್ತಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸಿದ್ದು, ಲವಲವಿಕೆಯಿಂದಿದ್ದಾರೆ ಎಂದು ಬಿಜಿಎಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ

ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ನಿನ್ನೆ [ಶನಿವಾರ] ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳಿಗೆ, ಇಂದು [ಭಾನುವಾರ] ಕೂಡ ಡಾ.ರವೀಂದ್ರ ನೇತೃತ್ವದ‌ ತಂಡ ಅಲ್ಟ್ರಾಸೌಂಡ್, ಬ್ಲಡ್ ಚೆಕಪ್ ಸೇರಿ ವೈದ್ಯಕೀಯ ತಪಾಸಣೆ ನಡೆಸಿದರು.

ತಪಾಸಣೆ ವೇಳೆ  ಶ್ರೀಗಳಿಗೆ ಪಿತ್ತಕೋಶದಲ್ಲಿ ಸೋಂಕು ಕಂಡು ಬಂದ ಹಿನ್ನಲೆ ಬ್ಲಾಕ್ ಆಗಿದ್ದ ಸ್ಟಂಟ್ ಸ್ವಚ್ಛಗೊಳಿಸಿ, ಎಂಡೋಸ್ಕೋಪಿ ಮೂಲಕ ಮತ್ತೆರಡು ಸ್ಟಂಟ್ ಯಶಸ್ವಿಯಾಗಿ ಅಳವಡಿಸಲಾಗಿದೆ.

 ಶ್ರೀಗಳು ಮಠಕ್ಕೆ ಹೋಗಲು ಒತ್ತಾಯ ಮಾಡ್ತಿದ್ದು, ವಿಶ್ರಾಂತಿಯ ಅಗತ್ಯವಿರೋದ್ರಿಂದ ವೈದ್ಯರು ಆಸ್ಪತ್ರೆಯಲ್ಲೇ ಉಳಿಸಿಕೊಂಡಿದ್ದಾರೆ.