Asianet Suvarna News Asianet Suvarna News

Shivakumar Swamiji Death Anniversary ಸಿದ್ಧಗಂಗೆಯಲ್ಲಿ ನಡೆಯಬೇಕಿದ್ದ ದಾಸೋಹ ದಿನ ರದ್ದು

* ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೋನಾ 3ನೇ ಅಲೆ
* ದಾಸೋಹ ದಿನದ ಅದ್ದೂರಿ ಕಾರ್ಯಕ್ರಮ ರದ್ದು
* ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ನಡೆಯಬೇಕಿದ್ದ ದಾಸೋಹ ದಿನ

siddaganga mutt cancels dasoha day on shivakumar swamiji death anniversary  jan 21 rbj
Author
Bengaluru, First Published Jan 11, 2022, 7:51 PM IST

ತುಮಕೂರು, (ಜ.11): ಇದೇ ಜ. 21ರಂದು ಸಿದ್ಧಗಂಗೆಯಲ್ಲಿ (Siddaganga) ನಡೆಯಬೇಕಿದ್ದ ದಾಸೋಹ ದಿನವನ್ನು(Dasoha Day) ರದ್ದುಪಡಿಸಲಾಗಿದೆ. ಕೊರೋನಾ ಮೂರನೇ ಅಲೆ(Corona Third Wave) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಸಿದ್ದಗಂಗಾ ಮಠ(Siddaganga Mutt) ಈ ತೀರ್ಮಾನ ಕೈಗೊಂಡಿದೆ.

ಈ ಕುರಿತು ಇಂದು (ಜ.11)ಸುದ್ದಿಗಾರರಿಗೆ ಮಾಹಿತಿ ನೀಡಿದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು Siddalinga Seer), ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಮರಣಾರ್ಥ ನಡೆಯಬೇಕಿದ್ದ 3ನೇ ವರ್ಷದ ಪುಣ್ಯಸ್ಮರಣೆ(Shivakumar Swamiji Death Anniversary ) ದಿನವನ್ನು ಸರಳ ಪೂಜೆ, ಉತ್ಸವ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಶಿವಕುಮಾರ್ ಶ್ರೀ ಲಿಂಗೈಕ್ಯರಾದ ದಿನವನ್ನು 'ದಾಸೋಹ' ದಿನವನ್ನಾಗಿ ಆಚರಿಸಲು ಸುತ್ತೋಲೆ

ಜನವರಿ 21 ರಂದು ಶಿವಕುಮಾರ ಸ್ವಾಮಿಗಳ 3ನೇ ವರ್ಷದ ಪುಣ್ಯಸ್ಮರಣೆಯನ್ನು ದಾಸೋಹ ದಿನವನ್ನಾಗಿ ಆಚರಣೆ ಮಾಡಬೇಕು ಅಂತ ರಾಜ್ಯ ಸರ್ಕಾರ ಎಲ್ಲಾ ಇಲಾಖೆಗಳಿಗೆ ಆದೇಶ ನೀಡಿತ್ತು. ಆದರೆ ಕೋವಿಡ್ 3ನೇ ಅಲೆಯಿಂದಾಗಿ ಸಿದ್ದಗಂಗಾ ಮಠದಲ್ಲಿ ಸರಳ ಪೂಜೆ, ಉತ್ಸವ ಮಾಡಲು ನಿರ್ಧರಿಸಿದ್ದೇವೆ. ಸರ್ಕಾರದಿಂದಲೇ ದಾಸೋಹ ದಿನದ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಮಠದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮ ಇಲ್ಲ ಎಂದು ಮಾಹಿತಿ ನೀಡಿದರು.

ಅಂದು ಮಠದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ.  ಸರಳ ಪೂಜೆ, ಉತ್ಸವ ಮಾಡಲು ನಿರ್ಧರಿಸಲಾಗಿದೆ. ಭಕ್ತರು ಸಹಕರಿಸಬೇಕು ಎಂದು ಸಿದ್ದಲಿಂಗ ಶ್ರೀಗಳು ಮನವಿ ಮಾಡಿದರು.

Karnataka Covid Guidelines ಕರ್ನಾಟಕದಲ್ಲಿ ಮತ್ತಷ್ಟು ಟಫ್ ರೂಲ್ಸ್, ನಾಳೆಯಿಂದಲೇ (ಜ.12) ಜಾರಿಗೆ

ತ್ರಿವಿದ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ದಿನವಾದ ಜನವರಿ 21ನ್ನು ''ದಾಸೋಹ ದಿನ'' ವನ್ನಾಗಿ ಆಚರಿಸಲು ರಾಜ್ಯ ಸರ್ಕಾರ  ಆದೇಶ ಹೊರಡಿಸಿತ್ತು. ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಲಿಂಗೈಕ್ಯರಾದ ಶಿವಕುಮಾರ ಸ್ವಾಮೀಜಿ ಅವರ ಅಪೂರ್ವ ಸೇವೆಯನ್ನು ಸ್ಮರಿಸುವ ಸಲುವಾಗಿ ಜನವರಿ 21 ರಂದು ಸರ್ಕಾರದ ವತಿಯಿಂದ ದಾಸೋಹ ದಿನವೆಂದು ಆಚರಿಸಲು ನಿರ್ಧರಿಸಲಾಗಿದೆ. 

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ 2ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಈ ದಾಸೊಹ ದಿನದ ಘೋಷಣೆ ಮಾಡಿದ್ದರು. ಬಳಿಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಈ ದಾಸೋಹ ದಿನದ ಆಚರಣೆಗೆ ಕಳೆದ ಸೆಪ್ಟೆಂಬರ್ 4ರಂದು ಅಧಿಕೃತ ಸುತ್ತೋಲೆ ಹೊರಡಿಸಿದ್ದರು. 

ತುಮಕೂರು ಜಿಲ್ಲೆಯಲ್ಲಿ ಕೊರೋನಾ ಅಬ್ಬರ
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಲ್ಲಿ ಕೊರೋನಾ ಸ್ಪೋಟ.ವಾಗಿದೆ. ಒಂದೇ ಶಾಲೆಯ 38 ಮಕ್ಕಳಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಅಂಬೇಡ್ಕರ್ ವಸತಿ ಶಾಲೆಯಲ್ಲಿ 38 ಮಕ್ಕಳಿಗೆ ಪಾಸಿಟಿವ್ ದಢೃಪಟ್ಟಿದೆ. ಸಾಧನಾ ಪರೀಕ್ಷೆ ಬರೆಯಲು ಹೋಗಿದ್ದ ಬಾಲಕಿಗೆ ಕೊರೋನಾ ಪಾಸಿಟಿವ್ ಇತ್ತು. ಆ ಬಾಲಕಿಯಿಂದ ಶಾಲೆಯ ಇತರ ಮಕ್ಕಳಿಗೂ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.

220 ಮಕ್ಕಳಿರುವ ಶಾಲೆ ಇದಾಗಿದ್ದು. ಎಲ್ಲಾ ಮಕ್ಕಳಿಗೂ ಕೊರೋನಾ ಟೆಸ್ಟ್ ಮಾಡಿಸಲಾಗಿದೆ ಎಂದು ಮಕ್ಕಳಿಗೆ ಕೊರೋನಾ ಪರೀಕ್ಷೆ ಮಾಡಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. 

Follow Us:
Download App:
  • android
  • ios