ಮಗಳು ಕೇಂದ್ರ ಮಂತ್ರಿ : ಕನಸು ಈಡೇರಿದ ಖುಷಿಯಲ್ಲಿ ಶೋಭಾ ತಾಯಿ
- ಸಂಸದೆಯಾಗಿರುವ ಮಗಳು ದೇಶಕ್ಕೆ ಒಮ್ಮೆಯಾದರೂ ಮಂತ್ರಿಯಾಗಬೇಕು ಅನ್ನೋ ಅಮ್ಮನ ಕನಸು ನನಸು
- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ತಾಯಿ ಪೂವಕ್ಕ ಅವರಿಗೆ ಖುಷಿಯೋ ಖುಷಿ
- ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಮಂತ್ರಿಯಾಗಿದ್ದು ನೋಡಿ ತುಂಬಾ ಖುಷಿಯಾಯ್ತು.
ಸಂದರ್ಶನ : ಡೆಲ್ಲಿ ಮಂಜು
ನವದೆಹಲಿ (ಜು.09): ಸಂಸದೆಯಾಗಿರುವ ಮಗಳು ದೇಶಕ್ಕೆ ಒಮ್ಮೆಯಾದರೂ ಮಂತ್ರಿಯಾಗಬೇಕು ಅನ್ನೋ ಅಮ್ಮನ ಕನಸು ಕೊನೆಗೂ ಈಡೇರಿತು. ಅಮ್ಮನಿಗೆ ಈಗ ಖುಷಿಯೋ ಖುಷಿ. ಹೀಗೆ ಖುಷಿಪಟ್ಟವರು ಬೇರಾರೂ ಅಲ್ಲ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ತಾಯಿ ಪೂವಕ್ಕ. ಈ ಸಂತೋಷದ ಸಂದರ್ಭದಲ್ಲಿ ಅವರು ಹಂಚಿಕೊಂಡ ಅನಿಸಿಕೆಗಳು ಹೀಗಿವೆ.
*ಮಗಳು ಮಂತ್ರಿಯಾಗಿದ್ದಕ್ಕೆ ಏನನಿಸಿತು?
ತುಂಬಾ ಖುಷಿಯಾಯ್ತು. ಹಿಂದೆ ರಾಜ್ಯದಲ್ಲಿ ಕೆಲಸ ಮಾಡಿದ್ದಾಳೆ. ಈಗ ಕೇಂದ್ರದಲ್ಲಿ ಕೆಲಸ ಮಾಡ್ತಾಳೆ.
ಅವಿಭಜಿತ ದ.ಕ. ಮೊದಲ ಕೇಂದ್ರ ಸಚಿವೆ ಕರಂದ್ಲಾಜೆ! ..
*ಮೋದಿ ಸರ್ಕಾರದಲ್ಲಿ ಮಗಳು ಮಂತ್ರಿಯಾಗ್ತಾಳೆ ಅಂಥ ಅಂದುಕೊಂಡಿದ್ರಾ?
ಈಗ ಮಂತ್ರಿ ಆಗುತ್ತಾಳೆ ಅಂತ ಅಂದುಕೊಂಡಿರಲಿಲ್ಲ. ಆದರೆ ಒಮ್ಮೆಯಾದರೂ ಮಗಳು ದೇಶಕ್ಕೆ ಮಂತ್ರಿ ಆಗಬೇಕು ಅಂಥ ಅಂದುಕೊಂಡಿದ್ದೆ. ಈಗ ಆ ಕನಸು ಈಡೇರಿದೆ. ಅದೂ ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಮಂತ್ರಿಯಾಗಿದ್ದು ನೋಡಿ ತುಂಬಾ ಖುಷಿಯಾಯ್ತು.
*ಮಗಳು ಈಗ ಕೇಂದ್ರಸಚಿವೆ, ಯಾವ್ಯಾವ ಕೆಲಸ ಮಾಡಲು ಸಲಹೆ ಕೊಡ್ತೀರಿ?
ನನ್ನ ಮಗಳು ರೈತರ ಪರವಾಗಿ, ರೈತರಿಗೆ ಅನುಕೂಲ ಆಗುವ ಕೆಲಸ ಮಾಡಬೇಕು. ಕರ್ನಾಟಕದ ಜನರ ಪ್ರೀತಿ ಆಕೆಯ ಮೇಲಿದೆ. ರಾಜ್ಯದ ರೈತರಿಗೂ ಒಳಿತಾಗುವ ಕೆಲಸ ಆಕೆ ಮಾಡಬೇಕು.