ಉಡುಪಿ (ನ.19): ಒಂದು ಕಾಲದಲ್ಲಿ ಬಹಳ ಬೇಡಿಕೆ ಇದ್ದು, ಇತ್ತೀಚೆಗೆ ಬೇಡಿಕೆ ಕಳೆದುಕೊಂಡು ವಿನಾಶದ ಅಂಚಿನಲ್ಲಿರುವ ಉಡುಪಿ ಕೈಮಗ್ಗ ಸೀರೆಗಳಿಗೆ ಇಲ್ಲಿನ ಸಂಸದೆ ರಾಷ್ಟ್ರಮಟ್ಟದಲ್ಲಿ ಪ್ರಚಾರ ಕೊಟ್ಟಿದ್ದಾರೆ.

 ದೀಪಾವಳಿಯ ಪ್ರಯುಕ್ತ ಸಂಸದೆ ಶೋಭಾ ಕರಂದ್ಲಾಜೆ ಉಡುಪಿಯ ಕೈಮಗ್ಗದ ಸೀರೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಬಿಜೆಪಿಯ ಸ್ಮೃತಿ ಇರಾನಿ, ಮನೇಕಾ ಗಾಂಧಿ, ಶೆಫಾಲಿ ವೈದ್ಯ, ಮೀನಾಕ್ಷಿ ಲೇಖಿ, ದೇಬಶ್ರೀ ಚೌಧುರಿ, ಡಿಎಂಕೆ ಸಂಸದೆ ಕನಿಮೋಳಿ ಅವರಿಗೂ ಉಡುಗೊರೆಯಾಗಿ ನೀಡಿದ್ದಾರೆ.

ಅಕ್ರಮ ಮಾಡೋದ್ರಲ್ಲಿ ಡಿ.ಕೆ.ಸಹೋದರರು ನಿಸ್ಸೀಮರು: ಶೋಭಾ ಕರಂದ್ಲಾಜೆ .

 ಸೀರೆಗಳ ಅಂದಚಂದಕ್ಕೆ ಮನಸೋತಿರುವ ಈ ನಾಯಕಿಯರು ಟ್ವೀಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.