Asianet Suvarna News Asianet Suvarna News

ಟಿಪ್ಪು ಜಯಂತಿ: ಸಿದ್ದುಗೆ ಶಿಲ್ಪಾ ಗಣೇಶ್ ಟಾಂಗ್!

ಇನ್ನೇನು ಟಿಪ್ಪು ಜಯಂತಿ ಮುಗಿಯಿತು, ಪರಿಸ್ಥಿತಿ ಶಾಂತಗೊಂಡಿತು ಎಂಬುವಷ್ಟರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ನಡುವೆ ಟ್ವೀಟ್ ವಾರ್ ಆರಂಭವಾಗಿದೆ.

Shila Ganesh Gives A Answer To Siddaramaiah s Tweet On Justifying Tipu Jayanthi
Author
Bangalore, First Published Nov 15, 2018, 12:40 PM IST

ಬೆಂಗಳೂರು[ನ.15]: ಟಿಪ್ಪು ಜಯಂತಿ ರಾಜ್ಯಾದ್ಯಂತ ಭಾರೀ ವಿವಾದಕ್ಕೀಡಾದ ವಿಚಾರ. ಒಂದು ಗುಂಪು ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಕರೆದರೆ, ಮತ್ತೊಂದು ಗುಂಪು ಆತನೊಬ್ಬ ಮತಾಂಧ ಎಂಬ ವಾದ ಮಾಡುತ್ತದೆ. ಟಿಪ್ಪು ಜಯಂತಿ ವಿಚಾರ ಅದೆಷ್ಟರ ಮಟ್ಟಿಗೆ ಕಿಚ್ಚು ಹಬ್ಬಿಸಿತ್ತೆಂದರೆ, ಕಳೆದ ಬಾರಿ ಇದರ ಕಾವಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದ. ಹೀಗಾಗೇ ಈ ಬಾರಿ ಟಿಪ್ಪು ಆಚರಣೆ ಸಂದರ್ಭದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು. ಇನ್ನೇನು ಟಿಪ್ಪು ಜಯಂತಿ ಮುಗಿಯಿತು, ಪರಿಸ್ಥಿತಿ ಶಾಂತಗೊಂಡಿತು ಎನ್ನುವಷ್ಟರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ನಡುವೆ ಟ್ವೀಟ್ ವಾರ್ ಆರಂಭವಾಗಿದೆ.

ಇದನ್ನೂ ನೋಡಿ: ಟಿಪ್ಪುವಿನ ಮೇಲೆ ಮೈಸೂರು ರಾಜಮಾತೆ ಮಾಡಿದ ಗಂಭೀರ ಆರೋಪವೇನು?

ಹೌದು ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಐದು ದಿನಗಳ ಹಿಂದೆ, ಟಿಪ್ಪು ಜಯಂತಿಯನ್ನು ಸಮರ್ಥಿಸುತ್ತಾ ಟ್ವೀಟ್ ಒಂದನ್ನು ಮಾಡಿದ್ದರು. ತಮ್ಮ ಟ್ವೀಟ್‌ನಲ್ಲಿ 'ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ. ಇಂತಹ ಮೊಂಡುವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ,ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟಿಷರ ವಿರುದ್ದ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತಾರೆ?' ಎಂದು ಪ್ರಶ್ನಿಸಿದ್ದರು.

ಸದ್ಯ ಸಿದ್ದರಾಮಯ್ಯರ ಈ ಪ್ರಶ್ನೆಗೆ ಟ್ವೀಟ್ ಮೂಲಕವೇ  ಉತ್ತರಿಸಿರುವ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ದೇಶವಿರೋಧಿ ಘೋಷಣೆ ಕೂಗುವುದು, ದೇಶ ದ್ರೋಹಿಗಳಿಗೆ ಜೈಕಾರ ಹಾಕುವುದು, ಬೆಂಬಲಿಸುವುದು, ಭಗವದ್ಗೀತೆ ಸುಡುವುದು, ಹಿಂದೂ ಧರ್ಮವನ್ನು-ದೇವರನ್ನು ಅವಮಾನಿಸುವುದು, ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವುದು, ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ, ಇತಿಹಾಸವೇ ಹೇಳಿರುವ ಮತಾಂಧನೊಬ್ಬನನ್ನು ಮತಾಂಧ ಎಂದರೆ, ನೀನು ಸಂವಿಧಾನ ವಿರೋಧಿ, ಕೋಮುಗಲಭೆಯ ಪ್ರಚೋದಕ, ಸಮಾಜ ಘಾತುಕ ಎಂದು ಹೇಳಿ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: ಬಿಎಸ್‌ವೈ ಹಾಳಾಗಲು ಕಾರಣವೇ ಇದು : ಈಶ್ವರಪ್ಪ

ಒಟ್ಟಾರೆಯಾಗಿ ಶಾಂತಗೊಂಡಿದ್ದ ಟಿಪ್ಪು ಜಯಂತಿ ವಿವಾದ  ಮತ್ತೆ ಟ್ವಿಟರ್ ವಾರ್ ಮೂಲಕ ಸದ್ದು ಮಾಡಿದೆ ಎನ್ನುವುದು ಸ್ಪಷ್ಟ. ಇನ್ನು ತಮಗೆ ಟಾಂಗ್ ನೀಡಿರುವ ಶಿಲ್ಪಾ ಗಣೇಶ್‌ ಮಾತಿಗೆ ಮಾಜಿ ಸಿಎಂ ಉತ್ತರಿಸಿ ಈ ವಾರ್ ಮುಂದುವರೆಸುತ್ತಾರಾ ಅಥವಾ ಸುಮ್ಮನಾಗಿ ಈ ವಿಚಾರವನ್ನು ಇಲ್ಲೇ ಕೈ ಬಿಡುತ್ತಾರಾ ಎಂಬುವುದು ಸದ್ಯಕ್ಕಿರುವ ಕುತೂಹಲ.

Follow Us:
Download App:
  • android
  • ios