ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು ಹೃದಯಾಘಾತದಿಂದ ವಿಧಿವಶ
ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು(54 ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನವರಾದ ಶೇಖರ್ ಅಜೆಕಾರು ಇಂದು ಬೆಳಗ್ಗೆ ಮನೆಯಲ್ಲಿರುವಾಗ ಕುಸಿದು ಬಿದ್ದಿದ್ದರು. ಕುಟುಂಬದವರು ತಕ್ಷಣ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಆ ವೇಳೆಗೆ ಉಸಿರು ಚೆಲ್ಲಿದ್ದ ಶೇಖರ್ ಅಜೆಕಾರು.
ಉಡುಪಿ (ಅ.31) ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು(54 ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನವರಾದ ಶೇಖರ್ ಅಜೆಕಾರು ಇಂದು ಬೆಳಗ್ಗೆ ಮನೆಯಲ್ಲಿರುವಾಗ ಕುಸಿದು ಬಿದ್ದಿದ್ದರು. ಕುಟುಂಬದವರು ತಕ್ಷಣ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಆ ವೇಳೆಗೆ ಉಸಿರು ಚೆಲ್ಲಿದ್ದ ಶೇಖರ್ ಅಜೆಕಾರು.
ಮುಂಬೈನ 'ಕರ್ನಾಟಕ ಮಲ್ಲ' ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಪತ್ರಿಕಾ ವೃತ್ತಿ ಆರಂಭಿಸಿದ್ದ ಅವರು ಮಂಗಳೂರಿನ ಜನವಾಹಿನಿ, ಉಷಾಕಿರಣ- ಪ್ರಜಾವಾಣಿ -ಕನ್ನಡಪ್ರಭ, ಡೈಜಿ ವರ್ಲ್ಡ್- ಕುಂದಪ್ರಭ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಇತ್ತೀಚೆಗೆ ಪತ್ರಿಕೆಗಿಂತ ಸಾಹಿತ್ಯ ಚಟುವಟಿಕೆಗಳಲ್ಲೂ ಪೂರ್ಣವಾಗಿ ತೊಡಗಿಕೊಂಡಿದ್ದ ಶೇಖರ್ ಅಜೆಕಾರು.
35 ವರ್ಷದ ಪ್ರಖ್ಯಾತ ಸೀರಿಯಲ್ ನಟಿ ಹಠಾತ್ ನಿಧನ, ಇಂಡಸ್ಟ್ರೀಗೆ ಶಾಕ್!
ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸ್ಥಾಪಕರಾಗಿದ್ದ ಅಜೇಕಾರು ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು. ಕಾರ್ಯಕ್ರಮ ಸಂಘಟನೆ ಮೂಲಕ ಸಾಧಕರಿಗೆ, ಸಾಹಿತಿಗಳಿಗೆ ಮನೆಯಂಗಳದಲ್ಲಿ ಸನ್ಮಾನ
ಬೆಂಗಳೂರು ಪತ್ರಕರ್ತರ ವೇದಿಕೆ ಮೂಲಕ ನಿರಂತರ ಕಾರ್ಯಕ್ರಮಗಳ ಮೂಲಕ ಸಾಧಕರಿಗೆ, ಸಾಹಿತಿಗಳಿಗೆ ಮನೆಯಂಗಳದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಇನ್ನೊಂದು ವಿಶೇಷವೆಂದರೆ ಶೇಖರ್ ಕಂಬಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು ಆ ಕುರಿತು ಸರಣಿ ಪುಸ್ತಕಗಳನ್ನು ಬರೆದಿದ್ದಾರೆ.
ಕೋವಿಡ್‌ಗೆ ತುತ್ತಾದವರು ಕಠಿಣ ಕೆಲಸ ಮಾಡಬೇಡಿ: ಕೇಂದ್ರ ಆರೋಗ್ಯ ಸಚಿವ
ಉತ್ತಮ ಪತ್ರಕರ್ತನಾಗಿ ಸೃಜನಶೀಲ ಸಾಹಿತಿಯಾಗಿ ಗುರುತಿಸಿಕೊಂಡಿ ಅವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಸೇರಿ ಹಲವಾರು ಪ್ರಶಸ್ತಿ, ಕೃಷಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿ, ಪುತ್ರನನ್ನು ಅಗಲಿದ್ದಾರೆ.