Asianet Suvarna News Asianet Suvarna News

ಆರೋಗ್ಯ ಸಚಿವರನ್ನ ಭೇಟಿಯಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

* ಆರೋಗ್ಯ ಸಚಿವ ಸುಧಾಕರ್ ಭೇಟಿಯಾದ ಸಚಿವೆ ಶಶಿಕಲಾ ಜೊಲ್ಲೆ
* ವಿಜಯಪುರದಲ್ಲಿ ಕೋವಿಡ್ ನಿರ್ವಹಣೆಗೆ ಮೂಲ ಸೌಕರ್ಯ ಕೊರತೆ ಹಿನ್ನಲೆ ಸಭೆ
* ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹೆಚ್ಚು ಬೆಡ್ ನೀಡಬೇಕು ಎಂದು ಮನವಿ 

shashikala jolle Meets Dr K Sudhakar Over Corona rbj
Author
Bengaluru, First Published May 17, 2021, 6:26 PM IST

ಬೆಂಗಳೂರು, (ಮೇ.17): ಆಧಾರ್ ಕಾರ್ಡ್ ಇಲ್ಲದೆ ಇರುವ ಹಿರಿಯ ನಾಗರಿಕರರಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದ್ದು ಶ್ರೀಘ್ರವೇ ಲಸಿಕೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಸೋಮವಾರ) ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಭೇಟಿದ ಅವರು, ಸಮಗ್ರ ಮಕ್ಕಳ ರಕ್ಷಣಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರನ್ನು ಕೋವಿಡ್ ಸೇನಾನಿಗಳೆಂದು ಭಾವಿಸಿ ಅವರಿಗೂ ಲಸಿಕೆಯನ್ನು ನೀಡಬೇಕು. ಹಾಗೂ ಹೈಕೋರ್ಟ್ ಆದೇಶದಂತೆ ಹಿರಿಯ ನಾಗರಿಕರಿಗೆ ಹಾಗೂ ವಿಕಲ ಚೇತನರಿಗೆ ಆದ್ಯತೆಯ ಮೇರೆಗೆ ವ್ಯಾಕ್ಸಿನ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಶಾಸಕರ ವೇತನ ಬಳಸುತ್ತಾ ಸರ್ಕಾರ? ಕೊರೋನಾ ಗೆದ್ದ ಅಮೆರಿಕ; ಮೇ.17ರ ಟಾಪ್ 10 ಸುದ್ದಿ!

ಇನ್ನೂ ಕೂಡ ಬೆಡ್ ಗಳು ಹೆಚ್ಚಾಗಬೇಕು.. ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹೆಚ್ಚು ಬೆಡ್ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಡಾ. ಸುಧಾಕರ್ ಸೌಲಭ್ಯಗಳನ್ನು ಹೆಚ್ಚಳ ಮಾಡುವ ಭರವಸೆ ನೀಡಿದ್ದಾರೆ ಎಂದರು.

ಆಕ್ಸಿಜನ್ ಕೊರತೆ ನೀಗಿಸಲು ಸೂಕ್ತ ಸೂಚನೆ ನೀಡಿದ್ದಾರೆ.  ಮುಂದಿನ ವಾರ ವಿಜಯಪುರಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಸುಧಾಕರ್ ಹೇಳಿದ್ದಾರೆ. ವಿಜಯಪುರದಲ್ಲಿ 32 ಖಾಸಗಿ ಆಸ್ಪತ್ರೆ ಕೈಜೋಡಿಸಿವೆ. ಮೂರನೇ ಅಲೆಗೂ ಸಿದ್ದತೆಗೆ ಮುಂದಾಗಿದ್ದೇವೆ. ಹೊಸ ತಾಲೂಕುಗಳಲ್ಲಿ ವೈದ್ಯಕೀಯ ವ್ಯವಸ್ಥೆಗೆ ಮನವಿ ಮಾಡಲಾಗಿದೆ... ಆರೋಗ್ಯ ಸಚಿವರು ಸೂಕ್ತ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

Follow Us:
Download App:
  • android
  • ios