ಚಿತ್ರದುರ್ಗ ಶರಣ ಸಂಸ್ಕೃತಿ ಉತ್ಸವ: ಮುರುಘಾ ಮಠದಲ್ಲಿ ಮೈನೆವರೇಳಿಸಿದ ಮಹಿಳಾ ಜಂಗಿ ಕುಸ್ತಿ!

ಕುಸ್ತಿ ಅಂದ್ರೆ ಸಾಕು ಮೈಸೂರು ದಸರಾ ನೆನಪಾಗುತ್ತೆ. ಆದ್ರೆ ಮಧ್ಯ ಕರ್ನಾಟಕದ ಮಿನಿ ದಸರಾ ಎಂದೇ ಖ್ಯಾತಿ ಪಡೆದಿರೋ ಕೋಟೆನಾಡು ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವದಲ್ಲಿ ಈ ಬಾರಿ ನಡೆದ ಜಯದೇವ ಜಂಗಿ‌ ಕುಸ್ತಿ ಕಾಳಗ ನೆರೆದಿದ್ದ ಪ್ರೇಕ್ಷಕರನ್ನು ಕಣ್ಮನ ಸೆಳೆಯಿತು.

Sharana Samskruthi Utsav 2024 women participate in Sri Jayadeva Jangi Kusti chitradurga rav

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ ಅ.13): ಕುಸ್ತಿ ಅಂದ್ರೆ ಸಾಕು ಮೈಸೂರು ದಸರಾ ನೆನಪಾಗುತ್ತೆ. ಆದ್ರೆ ಮಧ್ಯ ಕರ್ನಾಟಕದ ಮಿನಿ ದಸರಾ ಎಂದೇ ಖ್ಯಾತಿ ಪಡೆದಿರೋ ಕೋಟೆನಾಡು ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವದಲ್ಲಿ ಈ ಬಾರಿ ನಡೆದ ಜಯದೇವ ಜಂಗಿ‌ ಕುಸ್ತಿ ಕಾಳಗ ನೆರೆದಿದ್ದ ಪ್ರೇಕ್ಷಕರನ್ನು ಕಣ್ಮನ ಸೆಳೆಯಿತು.

 ನಾವೇನು ಯಾರಿಗಿಂತ ಕಮ್ಮಿ ಇಲ್ಲ ಎಂದು ಒಬ್ಬರಿಗೊಬ್ಬರು ವಿಶೇಷ ಪಟ್ಟುಗಳನ್ನು ಹಾಕುತ್ತಾ ನೆಲಕ್ಕೆ ಹುರುಳಿಸ್ತಿರೋ ಮಹಿಳಾ ಕುಸ್ತಿ ಪಟುಗಳು. ಚಿತ್ರದುರ್ಗದ ಮುರುಘಾ ಮಠದ ಜಯದೇವ ಜಂಗಿ ಕುಸ್ತಿ ಕಾಳಗದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮಹಿಳಾ ಕುಸ್ತಿ ಪಟು ಗಳಿಗೆ ಅವಕಾಶ ಕಲ್ಪಿಸಿದ್ದು, ರಾಜ್ಯದ ಸುಮಾರು ೧೦ಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸಿ ಕುಸ್ತಿಯಲ್ಲಿ ಭಾಗಿಯಾಗಿದ್ದರು. ನಾವು ಯಾರಿಗೂ ಕಡಿಮೆ ಇಲ್ಲ ಎಂದು ಜನರಿಗೆ ತಿಳಿಯಬೇಕು. ಜೊತೆಗೆ ಮಹಿಳೆಯರು ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ದೃಷ್ಟಿಕೋನದಿಂದ ನಾವು ಕುಸ್ತಿಯಲ್ಲಿ ಪಳಗಿದ್ದೇವೆ. ರಾಜ್ಯದ ನಾನಾ ಕಡೆ ಭಾಗವಹಿಸಿದ್ದೆವು, ಆದ್ರೆ ಮುರುಘಾ ಮಠದ ಜಂಗಿ ಕುಸ್ತಿಯಲ್ಲಿ ಇದೇ‌ ಮೊದಲ ಬಾರಿ ಅಖಾಡಕ್ಕೆ ಇಳಿದ್ದೇವೆ ತುಂಬಾ ಉತ್ಸುಕರಾಗಿದ್ದೇವೆ ಎಂದು ಮಹಿಳಾ ಕುಸ್ತಿ ಪಟು ತಿಳಿಸಿದರು.

Sharana Samskruthi Utsav 2024 women participate in Sri Jayadeva Jangi Kusti chitradurga rav

WATCH: ಗ್ಲಾಸ್ ಒಡೆದ ಬಸ್ ಬೆಂಗಳೂರಿಗೆ ಓಡಿಸಿ ಹಣ ಮಾಡಲು ನಿಂತ ಖಾಸಗಿ ಟ್ರಾವೆಲ್ಸ್ ಮಾಲಿಕ!

ಸುಮಾರು ವರ್ಷಗಳಿಂದಲೂ ಮುರುಘಾ ಮಠದಲ್ಲಿ ಜಯದೇವ ಜಂಗಿ ಕುಸ್ತಿ‌ ನಡೆಸಲಾಗ್ತಿದೆ. ದೇಶದ ನಾನಾ ಭಾಗಗಳಿಂದಲೂ ಕುಸ್ತಿಪಟುಗಳು ಆಗಮಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ತಾರೆ. ಈ ಬಾರಿ ಜಯದೇವ ಗುರುಗಳ ೧೫೦ನೇ ವರ್ಷದ ಜಯಂತೋತ್ಸವ ಹಿನ್ನೆಲೆ, ಈ ಬಾರಿ ಕುಸ್ತಿಯನ್ನು ವಿಜೃಂಭಣೆಯಿಂದ ನಡೆಸಲಾಗ್ತಿದೆ. ಮಹಾರಾಷ್ಟ್ರ, ಕೇರಳ,‌ ತಮಿಳುನಾಡು, ಸೋಲಾಪುರ್, ಸಾಂಗ್ಲಿ ಇನ್ನಿತರ ಭಾಗಗಳಿಂದಲೂ ಕುಸ್ತಿ ಪಟುಗಳಿ ಆಗಮಿಸಿದ್ದಾರೆ. ಮಠದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಈ ಬಾರಿ ಅಚ್ಚುಕಟ್ಟಾಗಿ ನಡೆದಿದೆ ಇದಕ್ಕೆಲ್ಲಾ‌ ನಮ್ಮ ಭಕ್ತಾಧಿಗಳೇ‌ ಕಾರಣ ಅಂತಾರೆ‌ ಶ್ರೀಗಳು.

ಒಟ್ಟಾರೆ ನಶಿಸಿ ಹೋಗ್ತಿರೋ ದೇಶೀಯ ಕ್ರೀಡೆಗಳು ಅಲ್ಲಲ್ಲಿ ಉಸಿರಾಡ್ತಿವೆ ಅಂದ್ರೆ ಅದು ನಮ್ಮೆಲ್ಲರ ಸೌಭಾಗ್ಯ ಎಂದೇ ಭಾವಿಸಬೇಕು. ಇನ್ನಾದ್ರು ಸರ್ಕಾರಗಳು ದೇಶೀಯ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಳೆಸಬೇಕಿದೆ.

Latest Videos
Follow Us:
Download App:
  • android
  • ios