25 ವರ್ಷದ ಯುವತಿ ಕೈ ಹಿಡಿದಿದ್ದ 45 ವರ್ಷದ ಶಂಕರಣ್ಣ ಸೂಸೈಡ್!

* ದೇಶಾದ್ಯಂತ ಸಂಚಲನ ಮೂಡಿಸಿದ್ದ ತುಮಕೂರಿನ ಜೋಡಿ.

* 25 ವರ್ಷದ ಯುವತಿ ಕೈ ಹಿಡಿದಿದ್ದ 45 ವರ್ಷದ ಶಂಕರಣ್ಣ ಸೂಸೈಡ್.

* ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡ ವರ.

* ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿಯಲ್ಲಿ ಘಟನೆ.

Shankaranna 45 years man who married 25 year girl commits suicide in Tumakuru pod

ತುಮಕೂರು(ಮಾ.29): 25 ವರ್ಷದ ಯುವತಿ ಕೈ ಹಿಡಿದಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ಹೊಲದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶಂಕರಣ್ಣ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹುಲಿಯೂರು ದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ.

ಆತ್ಮಹತ್ಯೆಗೇನು ಕಾರಣ?

ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದಲ್ಲಿ ಕಳೆದ 6 ತಿಂಗಳ ಹಿಂದೆ ಮದುವೆಯೊಂದು ನಡೆದಿತ್ತು. 45 ವರ್ಷದ  ಶಂಕರಣ್ಞ ಜೊತೆ 25 ವರ್ಷದ ಮೇಘಾನ ಮದುವೆಯಾಗುವ ಮೂಲಕ ತುಮಕೂರಿನ ಈ ಜೋಡಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಆದರೆ ಕಳೆದೆರಡು ದಿನದಿಂದ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತ ಶಂಕರಣ್ಣ ಸೋಮವಾರ ಮನೆ ಬಿಟ್ಟು ಹೋಗಿದ್ದರೆನ್ನಲಾಗಿದೆ. ಆದರೆ ಇಂದು, ಮಂಗಳವಾರ ಬೆಳಗ್ಗೆ ಅವರ ತೋಟದಲ್ಲೇ ಮೃತದೇಹ ಪತ್ತೆಯಾಗಿದೆ. 

ತನಗಿಂತ ಇಪ್ಪತ್ತು ವರ್ಷ ಹಿರಿಯನನ್ನು ಮದುವೆಯಾದ ಮೇಘನಾ

ಮದುವೆ ಬಳಿಕವೂ ಈ ಜೋಡಿ ವಿಭಿನ್ನ ವಿಡಿಯೋಗಳ ಮೂಲಕ ಸಾಮಾಜಿಕ ಜಾಲಾತಾಣಗಳಲ್ಲೂ ಸದ್ದು ಮಾಡುತ್ತಿತ್ತು. ಆರಂಭದಲ್ಲಿ ಟ್ರೋಲ್ ಆಗಿದ್ದ ಈ ಜೋಡಿಯ ವಿಡಿಯೋಗಳನ್ನು ಅನೇಕರು ಇಷ್ಪಟ್ಟಿದ್ದರು. 

Shankaranna 45 years man who married 25 year girl commits suicide in Tumakuru pod

ಗಂಡ ಮೋಸ ಮಾಡಿದನೆಂದು 20 ವರ್ಷ ಹಿರಿಯನನ್ನು ಮದುವೆಯಾಗಿದ್ದ ಮೇಘನಾ

ಹೌದು ತುಮಕೂರು ಜಿಲ್ಲೆ ಕುಣಿಗಲ್(Kunigal)​ ತಾಲೂಕಿನ ಸಂತೆಮಾವತ್ತೂರು ಗ್ರಾಮದ 25 ವರ್ಷ ವಯಸ್ಸಿನ ಮೇಘನಾ ತನಗಿಂತ ಇಪ್ಪತ್ತು ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದರು. ಇದೇ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಣ್ಣ ಎಂಬವರನ್ನು ಮದುವೆಯಾಗಿದ್ದಳು. 45 ವರ್ಷದ ಶಂಕರಣ್ಣಗೆ ಮದುವೆ ಆಗಿರಲಿಲ್ಲ. ಹೀಗಿರುವಾಗ ಮೇಘನಾ ಅವರ ಬಳಿಕ ತನನ್ನು ಮದುವೆಯಾಗುವಂತೆ ಕೇಳಿದ್ದಾರೆ. ಇದಕ್ಕೆ ಶಂಕರಣ್ಣನೂ ಒಪ್ಪಿಗೆ ಸೂಚಿಸಿದ್ದರು, ಇಬ್ಬರೂ ಸಮೀಪದ ದೇವಾಲಯದ ಬಳಿ ಸರಳವಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಈ ಮದುವೆ ವಿಚಾರ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. 

ಮದುವೆಗೆ ಕಾರಣವೇನು?

ಲಭ್ಯವಾದ ಮಾಹಿತಿ ಅನ್ವಯ ಮೇಘನಾಗೆ ಮೂರು ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ ಮದುವೆಯಾದ ಒಂದು ವರ್ಷದಲ್ಲಿ ಆಕೆಯ ಪತಿ ಮನೆ ಬಿಟ್ಟು ಓಡಿ ಹೋಗಿದ್ದರು. ಆತನಿಗೆ ಅದಕ್ಕೂ ಮೊದಲೇ ಬೇರೊಬ್ಬನ ಜತೆ ಮದುವೆ ಆಗಿತ್ತಂತೆ, ಅಲ್ಲದೇ ಮನೆ ಬಿಟ್ಟು ಹೋದ ಗಂಡ ಮೇಘನಾಳನ್ನು ನೋಡಲು ಕೂಡಾ ಬರುತ್ತಿರಲಿಲ್ಲ.  ಹೀಗಿರುವಾಗ ಕಳೆದೆರಡು ವರ್ಷದಿಂದ ಒಬ್ಬಂಟಿಯಾಗಿದ್ದ ಮೇಘನಾ ಬೇಸತ್ತು ಆರು ತಿಂಗಳ ಹಿಂದೆ ಶಂಕರಣ್ಣನನ್ನು ಮದುವೆ ಆಗಿದ್ದಳು. 

 

Latest Videos
Follow Us:
Download App:
  • android
  • ios