ಮೋಸ ಮಾಡಿದ ಗಂಡ, ಇಪ್ಪತ್ತು ವರ್ಷ ಹಿರಿಯನನ್ನು ಮದುವೆಯಾದ ತುಮಕೂರಿನ ವಿವಾಹಿತೆ!
* ವೈರಲ್ ಆಗುತ್ತಿದೆ ತುಮಕೂರಿನ ದಂಪತಿಯ ಮದುವೆ ಫೋಟೋ'
* ತನಗಿಂತ ಇಪ್ಪತ್ತು ವರ್ಷ ಹಿರಿಯನನ್ನು ಮದುವೆಯಾದ ಮೇಘನಾ
* ಮದುವೆ ಹಿಂದಿನ ಕಾರಣವೂ ಅಷ್ಟೇ ವಿಚಿತ್ರ
ತುಮಕೂರು(ಅ.20): ಸೋಶಿಯಲ್ ಮೀಡಿಯಾದಲ್ಲಿ(Social Media) ಚಿತ್ರ ವಿಚಿತ್ರ ಪ್ರಕರಣಗಳು ವೈರಲ್ ಆಗುತ್ತವೆ. ಇವುಗಳಲ್ಲಿ ಮದುವೆ ಪ್ರಸಂಗಗಳೂ ಇರುತ್ತವೆ. ಮದುವೆ ಮಂಟಪದಲ್ಲಿ ನಡೆದ ಘಟನೆಯಿಂದ ಹಿಡಿದು, ವಧು-ವರನಿಗೆ ಸಂಬಂಧಿಸಿದ ಸಂಗತಿಗಳೂ ಸದ್ದು ಮಾಡುತ್ತವೆ. ಸದ್ಯ ತುಮಕೂರಿನಲ್ಲಿ(Tumakuru) ನಡೆದ ಮದುವೆಯೊಂದು ಭಾರೀ ಸದ್ದು ಮಾಡುತ್ತಿದ್ದು, ಮದುವೆ ಫೋಟೋಗಳು ವೈರಲ್ ಆಗಿವೆ. ಇಲ್ಲೊಬ್ಬ 25 ವರ್ಷದ ಯುವತಿ ತನಗಿಂತ 20ವರ್ಷ ಹಿರಿಯ ವ್ಯಕ್ತಿ ಜೊತೆ ಮದುವೆಯಾಗಿದ್ದಾಳೆ. ಇದರ ಹಿಂದಿನ ಕಾರಣವೂ ಅಷ್ಟೇ ಅಚ್ಚರಿ ಮೂಡಿಸಿದೆ.
ಹೌದು ತುಮಕೂರು ಜಿಲ್ಲೆ ಕುಣಿಗಲ್(Kunigal) ತಾಲೂಕಿನ ಸಂತೆಮಾವತ್ತೂರು ಗ್ರಾಮದ 25 ವರ್ಷ ವಯಸ್ಸಿನ ಮೇಘನಾ ಎಂಬಾಕೆಯೇ ತನಗಿಂತ ಇಪ್ಪತ್ತು ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾದವರು. ಇದೇ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಣ್ಣ ಎಂಬವರನ್ನು ಮದುವೆಯಾಗಿದ್ದಾಳೆ. 45 ವರ್ಷದ ಶಂಕರಣ್ಣಗೆ ಮದುವೆ ಆಗಿರಲಿಲ್ಲ. ಹೀಗಿರುವಾಗ ಮೇಘನಾ ಅವರ ಬಳಿಕ ತನನ್ನು ಮದುವೆಯಾಗುವಂತೆ ಕೇಳಿದ್ದಾರೆ. ಇದಕ್ಕೆ ಶಂಕರಣ್ಣನೂ ಒಪ್ಪಿಗೆ ಸೂಚಿಸಿದ್ದು, ಇಬ್ಬರೂ ಸಮೀಪದ ದೇವಾಲಯದ ಬಳಿ ಸರಳವಾಗಿ ಮದುವೆಯಗಿದ್ದಾರೆ. ಈ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಗೆ ಕಾರಣವೇನು?
ಲಭ್ಯವಾದ ಮಾಹಿತಿ ಅನ್ವಯ ಮೇಘನಾಗೆ ಮೂರು ವರ್ಷದ ಹಿಂದೆ ಮದುವೆಯಾಗಿದೆ. ಆದರೆ ಮದುವೆಯಾದ ಒಂದು ವರ್ಷದಲ್ಲಿ ಆಕೆಯ ಪತಿ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಆತನಿಗೆ ಅದಕ್ಕೂ ಮೊದಲೇ ಬೇರೊಬ್ಬನ ಜತೆ ಮದುವೆ ಆಗಿತ್ತಂತೆ, ಅಲ್ಲದೇ ಮನೆ ಬಿಟ್ಟು ಹೋದ ಗಂಡ ಮೇಘನಾಳನ್ನು ನೋಡಲು ಕೂಡಾ ಬಂದಿರಲಿಲ್ಲ. ಹೀಗಿರುವಾಗ ಕಳೆದೆರಡು ವರ್ಷದಿಂದ ಒಬ್ಬಂಟಿಯಾಗಿದ್ದ ಮೇಘನಾ ಬೇಸತ್ತು ಶಂಕರಣ್ಣನನ್ನು ಮದುವೆ ಆಗಿದ್ದಾಳೆ ಎನ್ನಲಾಗಿದೆ.
ಸದ್ಯ ಸೋಧಶಿಯಲ್ ಂಇಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ.