ಲಿಂಗಾಯತ ಸಮಾಜ ಒಂದು ಪಂಥ; ಪ್ರತ್ಯೇಕ ಧರ್ಮ ಅಲ್ಲ: ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿಕೆ
ಲಿಂಗಾಯತ ಅನ್ನುವುದು ಒಂದು ಪಂಥ. ನಾವು ಈಗ ಪ್ರತ್ಯೇಕಧರ್ಮ ಅಂತ ಹೇಳಲ್ಲ. ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ
ಬೆಂಗಳೂರು (ಅ.22): ಕಾಂತರಾಜ್ ವರದಿ ಅವೈಜ್ಞಾನಿಕವಾಗಿ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಬಾರದೆಂದು ಮಹಾಸಭಾ ತಿರಸ್ಕರಿಸಿದೆ, ಸ್ವೀಕಾರಕ್ಕೆ ಅರ್ಹವಲ್ಲವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರ ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾ ಮುಖಂಡರ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಬಸವ ತತ್ವಗಳ ಬಗ್ಗೆ ಆಳವಾದ ನಂಬಿಕೆ ಇದೆ. ಲಿಂಗಾಯತ ಸಮಾಜದಲ್ಲಿ ನೂರಾರು ಪಂಗಡಗಳಿವೆ. ಸಮಾಜದ ಒಳ ಪಂಗಡಗಳಾದ ನೇಕಾರ, ಮಡಿವಾಳ, ಹೂಗಾರ, ಸಿಂಪಿ, ಮಾದರ ಸಮಗಾರರಿಗೆ ಲಿಂಗಾಯತ ಎಂದು ಬರೆಸುತ್ತಿಲ್ಲ. ಲಿಂಗಾಯತ ಅಂತ ಬರೆದರೆ ಒಬಿಸಿ ಮೀಸಲಾತಿ ಸಿಗ್ತಿಲ್ಲ. ಸುಪ್ರೀಂ, ಹೈಕೋರ್ಟ್ ತೀರ್ಪುಗಳಿವೆ. ಹಿಂದೂ ಮಡಿವಾಳ ಅಂದ್ರೂ ಮೀಸಲಾತಿ ಸಿಗಬೇಕು, ಲಿಂಗಾಯತ ಮಡಿವಾಳ ಅಂದರೂ ಒಬಿಸಿ ಮೀಸಲಾತಿ ಕೊಡಬೇಕು. ವೃತ್ತಿ ಆಧಾರಿತ ರಿಸರ್ವೇಶನ್ ಬೇಕು. ಹಿಂದೂ ಸಾದರ, ಹೂಗಾರಗೆ ಬ್ಯಾಕ್ ವರ್ಡ್ ಆಗ್ತಾರೆ. ಆದರೆ ಲಿಂಗಾಯತ ಸಾದರ, ಹೂಗಾರ ಪಾರ್ವಡ್ ಹೇಗಾಗ್ತಾರೆ? ಹೀಗಾಗಿ ಕಾಂತರಾಜ್ ವರದಿ ಜಾರಿಗೆ ತರುವುದು ಬೇಡ ಎಂದರು.
ವೀರಶೈವ ಲಿಂಗಾಯತ ಉಪ ಪಂಗಡಗಳು ಒಂದಾಗಬೇಕು: ಸಂಸದ ರಾಘವೇಂದ್ರ
ಲಿಂಗಾಯತ ಸಮಾಜ ಬದುಕಲು ಅವಕಾಶ ಕೊಡಿ:
ಎಲ್ಲ ಸಮಾಜಗಳಂತೆ ಲಿಂಗಾಯತ ಸಮಾಜ ಬದುಕಲಿಕ್ಕೆ ಅವಕಾಶ ಮಾಡಿಕೊಡಬೇಕು. ಅವರ ಅಭಿವೃದ್ಧಿಗೆ ಅವಕಾಶ ನೀಡಬೇಕು ಇಷ್ಟೇ ನಾವು ಸಿಎಂ ಗೆ ಕೇಳುವ ಬೇಡಿಕೆ. ಲಿಂಗಾಯತ ಎಲ್ಲಾ ಉಪಪಂಗಡಗಳು ಕೇಂದ್ರದ ಒಬಿಸಿಗೆ ಸೇರಿಸಬೇಕು. ಲಿಂಗಾಯತ ಸಮಾಜ ತುಂಬಾ ಹಿಂದುಳಿದಿದೆ. ಬೇಕಾದರೆ ನೀವು ಸರ್ವೆಯನ್ನ ಮಾಡಿಸಿ. ಹಿಂದುಳಿದಿದ್ದರೆ ನೀವು ಒಬಿಸಿ ಸ್ಥಾನ ಮಾನನೀಡಿ. ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸಿ ಆ ಮೂಲಕ ಸಾಮಾಜಿಕ ಅಸಮಾನತೆ ಹೋಗಲಾಡಿಸಿ. ಇದೇ ವಿಚಾರವಾಗಿ ಇಂದು ನಮ್ಮ ಸಭೆಯಲ್ಲಿ ಚರ್ಚೆಯಾಗಿದೆ. ನಮಗೆ ಯಾವ ರಿಯಾಯ್ತಿ ಬೇಡ ಎಲ್ಲ ಸಮಾಜಕ್ಕೆ ನೀಡುವಂತೆ ನಮಗೂ ಮೀಸಲಾತಿ ಕೊಡಿ. ಯಾರು ಅರ್ಹರಿದ್ದಾರೆ ಅವರಿಗೆ ಒಬಿಸಿ ಸ್ಥಾನಮಾನ ನೀಡಿ ಎಂದು ಒತ್ತಾಯಿಸಿದರು.
ನಾವು ಮೊದಲು ಹಿಂದೂ ಅನಂತರ ಲಿಂಗಾಯತ, ವೀರಶೈವ..; ತಮ್ಮ ಹೇಳಿಕೆ ಸಮರ್ಥಿಸಿಕೊಂಡ ವಚನಾನಂದ ಸ್ವಾಮೀಜಿ
ಜಾತಿಗಣತಿ ವರದಿಗೆ ವಿರೋಧ:
ಜಾತಿಗಣತಿ ವರದಿಯನ್ನು ನಮ್ಮ ಸಮುದಾಯ ವಿರೋಧಿಸುತ್ತಿದೆ. ಅದು ಸೋರಿಕೆ ಆಗಿದೆ ಅನ್ನೋದು ಗೊತ್ತಿಲ್ಲ ಆದರೆ ಸರ್ಕಾರದಿಂದ ಇನ್ನೂ ನಮ್ಮ ಮನಗೆ ಬಂದಿಲ್ಲ. ನಮ್ಮನ್ನ ಸರ್ವೇ ಮಾಡಿಲ್ಲ ಅಂತಾ ಮಾಹಿತಿ ಬಂದಿದೆ. ಅದರ ಆಧಾರದ ಮೇಲೆ ನಾವು ಕೇಳ್ತಿದ್ದೇವೆ. ಹೀಗಾಗಿ ವೈಜ್ಙಾನಿಕವಾಗಿ ವರದಿಯನ್ನ ಮಾಡಲಿ, ಅದನ್ನು ನಾವು ಒಪ್ಪುತ್ತೇವೆ. ನಮ್ಮ ಮಹಾಸಭಾ ತಾಲೂಕು ಮಟ್ಟದಲ್ಲಿ ಸರ್ವೇ ಮಾಡಿಸುತ್ತದೆ ಎಲ್ಲರ ಗಣತಿ ಮಾಡಿ ನಾವೇ ಸಿಡಿ ಮಾಡಿ ಸರ್ಕಾರಕ್ಕೆ ಕೊಡುತ್ತೇವೆ. ಲಿಂಗಾಯತ ಅನ್ನುವುದು ಒಂದು ಪಂಥ. ನಾವು ಈಗ ಪ್ರತ್ಯೇಕಧರ್ಮ ಅಂತ ಹೇಳಲ್ಲ. ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಅದನ್ನು ಕೇಂದ್ರಕ್ಕೆ ಬಿಟ್ಟಿದೆ. ರಾಜ್ಯ ಸರ್ಕಾರ ಜಾತಿ ಗಣತಿ ಅಂತ ಮಾಡಿಲ್ಲ. ಆರ್ಥಿಕ, ಸಮಾಜಿಕ ಸಮೀಕ್ಷೆ ಅಂತ ಮಾಡಿದ್ದಾರೆ. ಅವರು ಎಲ್ಲಾ ಕಡೆ ಸಮೀಕ್ಷೆ ಮಾಡಿಲ್ಲ ಅನ್ನೋದು ಮಾತು ಕೇಳಿಬಂದಿದೆ. ಸಿಸ್ಟಮೆಟಿಕ್ ಆಗಿ ಮಾಡಲಿ ನಮ್ಮ ಅಭ್ಯಂತರವಿಲ್ಲ. ವೈಜ್ಞಾನಿಕವಾಗಿ ಮಾಡುವುದು ನಾವು ಒಪ್ಪುತ್ತೇವೆ ಎಂದು ಪುನರುಚ್ಚರಿಸಿದರು.