ಕೇಂದ್ರ ಸಚಿವ ಅನಂತ ಕುಮಾರ್ ನಿಧನಕ್ಕೆ ಎಲ್ಲೆಡೆಯಿಂದ ಅಶ್ರುತರ್ಪಣ ಹರಿದು ಬರುತ್ತಿದ್ದರೆ, ಮಂಗಳೂರು ಮುಸ್ಲಿಮ್ ಎಂಬ ಫೇಸ್‌ಬುಕ್ ಪೇಜಿನಲ್ಲಿ ವಿಕೃತಿ ಮೆರೆಯಲಾಗಿದೆ.

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ನವೆಂಬರ್ 12ರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ದೇಶದ ಎಲ್ಲೆಡೆಯಿಂದ ಮೃತರಿಗೆ ಸಂತಾಪ ಸೂಚಿಸುತ್ತಿದ್ದರೆ, ಮಂಗಳೂರು ಮುಸ್ಲಿಮ್ ಎಂಬ ಫೇಸ್‌ಬುಕ್ ಪೇಜ್ ವಿಕೃತಿ ಮೆರೆದಿದೆ.

Add Asianetnews Kannada as a Preferred SourcegooglePreferred

'ಜಾತಿ ರಾಜಕಾಣ ಕುತಂತ್ರಿ ಬ್ರಾಹ್ಮಣ ಅನಂತ್ ಕುಮಾರ್ ಮೇಲೆ ಹೋಗಿಯೂ ಜಾತಿ ವಿಷ ಬಿತ್ತ ಬೇಡ..' ಎಂದು ಕುಹಕವಾಡಿದ್ದು, ಅವರನ್ನು 'ಕೋಮುವಾದಿ' ಎಂದು ಕರೆದಿರುವುದು ದುರಂತ.

'ಜಾತಿ ಜಾತಿ ರಾಮ ರಾಮ ಅನ್ನುತ್ತಲೇ ಹೊಗೆ ಹಾಕಿ ಕೊಂಡ ಕೋಮುವಾದಿ ಅನಂತ್ ಕುಮಾರ್..' ಎಂದು 'ಮತ್ತೆ ಹುಟ್ಟಿ ಬರಬೇಡಿ,' ಎಂದು ಪೋಸ್ಟ್ ಮಾಡಲಾಗಿದೆ.

ಮಂಗಳೂರು ಮುಸ್ಲಿಮ್ ಪೇಜಿನ ಫೇಸ್‌ಬುಕ್‌ ಪೇಜಿನಲ್ಲಿ ಪೋಸ್ಟ್ ಮಾಡಿರುವ ಈ ಪೋಸ್ಟಿಗೆ ಹಲವು ಟೀಕೆಗಳು ವ್ಯಕ್ತವಾಗಿವೆ.