ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಗೆ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೇವಲ 8 ದಿನಗಳಲ್ಲೇ 3.63 ಕೋಟಿ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಚರಿಸಿದ್ದು, ನಾಲ್ಕೂ ನಿಗಮಗಳಿಗೆ 84.28 ಕೋಟಿ ರು. ಆದಾಯ ಖೋತಾ ಆಗಿದೆ.
ಬೆಂಗಳೂರು (ಜೂ.20) ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಗೆ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೇವಲ 8 ದಿನಗಳಲ್ಲೇ 3.63 ಕೋಟಿ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಚರಿಸಿದ್ದು, ನಾಲ್ಕೂ ನಿಗಮಗಳಿಗೆ 84.28 ಕೋಟಿ ರು. ಆದಾಯ ಖೋತಾ ಆಗಿದೆ.
ಯೋಜನೆ ಘೋಷಿಸಿದ ಮೊದಲ ದಿನವಾದ ಜೂನ್ 11 (ಭಾನುವಾರ) 5.71 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಅದಾದ ನಂತರದಿಂದ ಪ್ರತಿದಿನ ಸರಾಸರಿ 50 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಅದರಲ್ಲೂ ಜೂನ್ 15ರಿಂದ 18ರವರೆಗೆ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ನಾಲ್ಕು ದಿನಗಳಲ್ಲಿಯೇ 2.14 ಕೋಟಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಅದಕ್ಕಿಂತ ಹಿಂದಿನ ನಾಲ್ಕು ದಿನಗಳಲ್ಲಿ (ಜೂನ್ 11ರಿಂದ 14) 1.48 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ.
ಬಿಎಂಟಿಸಿ ಬಸ್ ಏರಿ ಪೊಲೀಸ್ ಆಯುಕ್ತರಿಂದ ಮಹಿಳಾ ಸುರಕ್ಷಾ ಜಾಗೃತಿ
ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚು:
ಉಚಿತ ಪ್ರಯಾಣ ಯೋಜನೆ ಜಾರಿ ಬಳಿಕ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣಿಸುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 3.63 ಕೋಟಿ ಮಹಿಳಾ ಪ್ರಯಾಣಿಕರ ಪೈಕಿ ಶೇ.40ಕ್ಕೂ ಹೆಚ್ಚಿನ ಮಹಿಳೆಯರು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಹದೇಶ್ವರ ಬೆಟ್ಟ, ಸವದತ್ತಿ ಸೇರಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣಿಸಿದ್ದಾರೆ. ಕೆಎಸ್ಸಾರ್ಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳ ಮೂಲಕ 2.38 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದರೆ. ಉಳಿದಂತೆ 1.25 ಮಹಿಳೆಯರು ಬೆಂಗಳೂರಿನ ವಿವಿಧ ಬಡಾವಣೆಗಳಿಗೆ ಬಿಎಂಟಿಸಿ ಬಸ್‌ಗಳ ಮೂಲಕ ತೆರಳಿದ್ದಾರೆ.
84 ಕೋಟಿ ಆದಾಯ ಖೋತಾ:
ಮಹಿಳಾ ಪ್ರಯಾಣಿಕರ ಸಂಚಾರದಿಂದಾಗಿ ನಾಲ್ಕೂ ನಿಗಮಗಳಿಗೆ 84.28 ಕೋಟಿ ರು. ಆದಾಯ ಖೋತಾ ಆಗಿದೆ. ಕೆಎಸ್ಸಾರ್ಟಿಗೆ ಅತಿ ಹೆಚ್ಚು 31.93 ಕೋಟಿ ರು. ಆದಾಯ ನಷ್ಟವಾಗಿದ್ದರೆ, ಬಿಎಂಟಿಸಿಗೆ 15.17 ಕೋಟಿ ರು., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 22.02 ಕೋಟಿ ರು ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 15.15 ಕೋಟಿ ರು. ಆದಾಯ ನಷ್ಟವಾಗಿದೆ.
ಯಾವ ನಿಗಮಕ್ಕೆ ಎಷ್ಟುನಷ್ಟ ನಿಗಮ ನಷ್ಟದ ಪ್ರಮಾಣ
- ಕೆಎಸ್‌ಆರ್‌ಟಿಸಿ 31.93 ಕೋಟಿ ರು.
- ಬಿಎಂಟಿಸಿ 15.17 ಕೋಟಿ ರು.
- ವಾಯುವ್ಯ ಕರ್ನಾಟಕ 22.02 ಕೋಟಿ ರು
- ಕಲ್ಯಾಣ ಕರ್ನಾಟಕ 15.15 ಕೋಟಿ ರು.
ಉಚಿತ ಬಸ್ ಪ್ರಯಾಣ: ಮಹಿಳೆಯರಿಗೆ ಶಕ್ತಿ ತಂದ ಫ್ರೀ ಸಂಚಾರ..!
ದಿನಾಂಕ ಮಹಿಳಾ ಪ್ರಯಾಣಿಕರ ಸಂಖ್ಯೆ ಆದಾಯ ಖೋತಾ
- ಜೂ. 11 5.71 ಲಕ್ಷ 1.40 ಕೋಟಿ ರು.
- ಜೂ. 12 41.64 ಲಕ್ಷ 8.83 ಕೋಟಿ ರು.
- ಜೂ. 13 51.52 ಲಕ್ಷ 10.82 ಕೋಟಿ ರು.
- ಜೂ. 14 50.17 ಲಕ್ಷ 11.51 ಕೋಟಿ ರು.
- ಜೂ. 15 54.05 ಲಕ್ಷ 12.37 ಕೋಟಿ ರು.
- ಜೂ. 16 55.09 ಲಕ್ಷ 12.45 ಕೋಟಿ ರು.
- ಜೂ. 17 54.30 ಲಕ್ಷ 12.88 ಕೋಟಿ ರು.
- ಜೂ. 18 51.48 ಲಕ್ಷ 13.99 ಕೋಟಿ ರು.
- ಒಟ್ಟು 3.63 ಕೋಟಿ 84.28 ಕೋಟಿ ರು.
