Asianet Suvarna News Asianet Suvarna News

ರಾಜ್ಯದ ಈವರೆಗಿನ ಕೊಳವೆಬಾವಿ ದುರಂತದಲ್ಲಿ ವಿಜಯಪುರವೇ ಟಾಪ್, ಬದುಕಿ ಬಂದಿದ್ದು ಒಬ್ಬಾಕೆ ಮಾತ್ರ!

ರಾಜ್ಯದಲ್ಲಿ ಕೊಳವೆಬಾವಿ ದುರಂತ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಒಟ್ಟು 8 ಕೊಳವೆಬಾವಿ ದುರಂತಗಳು ನಡೆದಿದೆ. ವಿಪರ್ಯಾಸವೆಂದರೆ ವಿಜಯಪುರದಲ್ಲೇ ಹೆಚ್ಚು.

Several borewells were tragic in Karnataka's highest incident  at Vijayapura gow
Author
First Published Apr 4, 2024, 9:27 AM IST

ವಿಜಯಪುರ (ಏ.4): ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಗುರುವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಮಗುವನ್ನು ಉಳಿಸುವ ಕಾರ್ಯಾಚರಣೆ  16 ಗಂಟೆ ಪೂರೈಸಿದೆ. 16 ಗಂಟೆಗಳಿಂದ ಮಗು ಅನ್ನ ನೀರು ಇಲ್ಲದೆ 16 ಅಡಿ ಆಳದಲ್ಲಿ ಮಗು ನರಳಾಡುತ್ತಿದೆ. ಇದರ ಜೊತೆಗೆ ಮಗುವಿನ ಚಲನವಲನಗಳ ಬಗ್ಗೆ ಕ್ಯಾಮಾರದಲ್ಲಿ ಗಮನಿಸಲಾಗುತ್ತಿದ್ದು, ಮಗು ಕಾಲು ಅಲ್ಲಾಡಿಸುತ್ತಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ. ಮಗುವನ್ನು ಹೊರ ತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು, ವೈದ್ಯರ ತಂಡ, ಆಂಬುಲೆನ್ಸ್‌ಗಳು ಸ್ಥಳದಲ್ಲಿ ಜಮಾಯಿಸಿದೆ.

ಕೊಳವೆಬಾವಿಯಲ್ಲಿ ಸಿಲುಕಿರುವ ಮಗು ರಕ್ಷಣೆಗೆ ಕೇವಲ ಅರ್ಧ ಅಡಿ ಬಾಕಿ, ಕಲ್ಲು ಬಂಡೆಗಳೇ ಅಡ್ಡಿ!

ರಾಜ್ಯದಲ್ಲಿ ಕೊಳವೆಬಾವಿ ದುರಂತ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಒಟ್ಟು 8 ಕೊಳವೆಬಾವಿ ದುರಂತಗಳು ನಡೆದಿದೆ. 2000 ನೇ ಇಸವಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ , ದಾವಣಗೆರೆ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 8 ಪ್ರಕರಣಗಳು ನಡೆದಿದೆ. ಆದರೆ ಬದುಕಿ ಬಂದಿದ್ದು ಮಾತ್ರ ಕೇವಲ ಒಂದು ಘಟನೆ. ಇಲ್ಲಿ ರಾಜ್ಯದಲ್ಲಿ ನಡೆದ ಕೊಳವೆಬಾವಿ ದುರಂತದ ಪಟ್ಟಿ ನೀಡಲಾಗಿದೆ. 

  • 2000 ಇಸವಿಯಲ್ಲಿ ದಾವಣಗೆರೆಯಲ್ಲಿ  ಬೋರ್‌ವೆಲ್ ದುರಂತ ಸಂಭವಿಸಿತ್ತು. ಕರಿಯ ಎಂಬ ಬಾಲಕ ಆಟವಾಡುತ್ತಿದ್ದ ವೇಳೆ ಕೊಳವೆ ಬಾವಿಯೊಳಗೆ ಬಿದ್ದಿದ್ದ . ಎಷ್ಟೆ ಪ್ರಯತ್ನ ನಡೆಸಿದರೂ ಕರಿಯನನ್ನು ಬದುಕುಳಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.
  • ಇನ್ನೂ 2007ರ ಏ.27 ರಂದು ರಾಯಚೂರು ಜಿಲ್ಲೆಯ ಮಾನ್ವಿಯ ನೀರಮಾನವಿಯಲ್ಲಿ ಮತ್ತೊಂದು ದುರಂತ ಸಂಭವಿಸಿತ್ತು. ಇಲ್ಲಿ ಸಂದೀಪ್ ಎನ್ನುವ ಬಾಲಕ ತೆರೆದ ಕೊಳವೆ ಬಾವಿಯೊಳಗೆ ಬಿದ್ದದ್ದ. ಈತನನ್ನು ರಕ್ಷಸಿಲು ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಸಂದೀಪ್ ಕೊಳವೆಬಾವಿಯಿಂದ ಹೊರಬಂದಿದ್ದು ಮಾತ್ರ ಶವವಾಗಿ.
  • 2008ರ ಸೆಪ್ಟೆಂಬರ್'ನಲ್ಲಿ ವಿಜಯಪುರದ ಇಂಡಿಯ ದೇವರನಿಂಬರಗಿಯಲ್ಲಿ  ಕಾಂಚನಾ ಎಂಬ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ತೋಟದ ಮನೆಯಲ್ಲಿ ಆಟವಾಡುವಾಡುತ್ತಿದ್ದಾಗ ಕೊಳವೆಬಾವಿಗೆ ಬಿದ್ದಿದ್ದಳು. ಈ ಬಾಲಕಿ ಕೂಡ ಕೊಳವೆ ಬಾವಿಯಿಂದ ಹೊರ ಬಂದಿದ್ದು ಶವವಾಗಿಯೆ.
  • 2008ರಲ್ಲಿ ಬಾಗಲಕೋಟೆ ತಾಲೂಕಿನ ಸಿಕ್ಕೇರಿಯಲ್ಲೂ ಕೊಳವೆಬಾವಿ ದುರಂತ ಸಂಭವಿಸಿತ್ತು. ಇಲ್ಲಿ 20 ವರ್ಷದ ಕಲ್ಲವ್ವ ಎಂಬುವವರು ಕೊಳವೆ ಬಾವಿಗೆ ಬಿದ್ದಿದ್ದರು ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದಳು ಕಲ್ಲವ್ವ. ಸುರಂಗ ಕೊರೆದು ಕಲ್ಲವ್ವಳನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು. ಆಗ ಅವಳಿಗೆ ಬದುಕಿ ಬಂದ ಫ್ರಿನ್ಸ್‌ ಅಂತ ಹೆಸರು ಕೊಡಲಾಗಿತ್ತು.
  • 2009ರಲ್ಲಿ ವಿಜಯಪುರ ಜಿಲ್ಲೆಯ ಈಗಿನ ಚಡಚಣ ತಾಲೂಕಿನ ದೇವರನಿಂಬರಗಿಯಲ್ಲಿ ಕಾಂಚಣಾ ಎಂಬ ಹೆಣ್ಣು ಮಗು ಕೊಳವೆ ಬಾವಿಯಲ್ಲಿ ಬಿದ್ದಿತ್ತು. ಬರೋಬ್ಬರಿ  ಹತ್ತು ದಿನ ಕಾರ್ಯಾಚರಣೆ ನಡೆಸಿದರೂ  ಉಳಿಸಿಕೊಳ್ಳಲಾಗಲಿಲ್ಲ. ಆಗ ಎನ್‌ಡಿಆರ್‌ಎಫ್‌ ತಂಡ, ಹಟ್ಟಿ ಚಿನ್ನದ ಗಣಿ ತಂಡ ಹತ್ತು ದಿನ ಕಾರ್ಯಾಚರಣೆ ನಡೆಸಿತ್ತು.

ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು, ರಕ್ಷಣಾ ಕಾರ್ಯಾಚರಣೆ ಆರಂಭ!

  • 2014 ಜೂನ್ 17ರಂದು ವಿಜಯಪುರ ಜಿಲ್ಲೆಯ ನಾಗತಾನ ಹಳ್ಳಿಯ ನಾಗಠಾಣ ಸಮೀಪದಲ್ಲಿ ಇಂಥಾದೊಂದು ದುರಂತ ಸಂಭವಿಸತ್ತು. ಅಕ್ಷತಾ ಎಂಬ ಬಾಲಕಿ ಅಟ್ಟಿಸಿಕೊಂಡು ಬಂದ ನಾಯಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕೊಳವೆಬಾವಿಗೆ ಬಿದ್ದಿದ್ದಳು. ಯಾದಗಿರಿಯಿಂದ ಕೂಲಿಗೆ ಬಂದಿದ್ದ ಹನುಮಂತ ಪಾಟೀಲ ಎಂಬುವವರ ಮೂರು ವರ್ಷದ ಅಕ್ಷತಾಳನ್ನು ಕಾಪಾಡಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.
  • ಆಗಸ್ಟ್ 4, 2014 ಬಾಗಲಕೋಟೆಯ ಸೂಳಿಕೇರಿ ಗ್ರಾಮದಲ್ಲಿ ದುರಂತ ಸಂಭವಿಸಿತ್ತು. 6 ವರ್ಷದ ತಿಮ್ಮಣ್ಣ ಅನ್ನೋ ಬಾಲಕ ಆಟವಾಡುತ್ತ 350 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ, ತಿಮ್ಮಣ್ಣನೂ ಕೂಡ ಬದುಕಿ ಬರಲಿಲ್ಲ.
  • ಏಪ್ರಿಲ್ 23 2017ರಂದು ಬೆಳಗಾವಿಯ ಅಥಣಿ ತಾಲೂಕಿನ ಝಂಜರವಾಡಿ ಗ್ರಾಮದಲ್ಲಿ 4 ವರ್ಷದ ಕಾವೇರಿ ಕೊಳವೆ ಬಾವಿಯೊಳಗೆ ಬಿದ್ದು ಸಾವನ್ನಪ್ಪಿದ್ದಳು. ವಾರ ಕಾಲ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ರೈತರು ಕೃಷಿ ನೀರಿಗಾಗಿ ಕೊಳವೆಬಾವಿ ಕೊರೆಸುವುದು ಸಾಮಾನ್ಯವಾಗಿದೆ. ಆದರೆ ನೀರು ಸಿಗದೇ ಇದ್ದಾಗ ಅದನ್ನು ಮುಚ್ಚುವುದು ಅಷ್ಟೇ ಮುಖ್ಯವಾಗಿದೆ. ಕೆಲ ಕಡೆಗಳಲ್ಲಿ ನೀರು ಬರದಾದಾಗ ನೊಂದ ರೈತರು  ಮುಚ್ಚುವ ಗೋಜಿಗೆ ಹೋಗುವುದಿಲ್ಲ.  ಹೀಗಾಗಿಯೇ ಇಂತಹ ದುರಂತಗಳು ನಡೆಯುತ್ತಿವೆ. ಈ ರೀತಿಯ ಘಟನೆಗಳು ನಡೆದಿರುವ ಬಗ್ಗೆ ಗೊತ್ತಿದ್ದರೂ ಅವುಗಳನ್ನು ಮುಚ್ಚಲು ಮನಸ್ಸು ಮಾಡುವುದಿಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ.

Follow Us:
Download App:
  • android
  • ios