ಕೊಳವೆಬಾವಿಯಲ್ಲಿ ಸಿಲುಕಿರುವ ಮಗು ರಕ್ಷಣೆಗೆ ಕೇವಲ ಅರ್ಧ ಅಡಿ ಬಾಕಿ, ಕಲ್ಲು ಬಂಡೆಗಳೇ ಅಡ್ಡಿ!
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಇನ್ನು ಅರ್ಧ ಅಡಿಯಷ್ಟೇ ಬಾಕಿ ಇದೆ.
ವಿಜಯಪುರ (ಏ.4): ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಗುರುವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ ಮಗುವನ್ನು ಉಳಿಸುವ ಕಾರ್ಯಾಚರಣೆ 14 ಗಂಟೆ ಪೂರೈಸಿದೆ. 14 ಗಂಟೆಗಳಿಂದ ಮಗು ಅನ್ನ ನೀರು ಇಲ್ಲದೆ ನರಳಾಡುತ್ತಿದೆ. ಇದರ ಜೊತೆಗೆ ಮಗುವಿನ ಚಲನವಲನಗಳ ಬಗ್ಗೆ ಕ್ಯಾಮಾರದಲ್ಲಿ ಗಮನಿಸಲಾಗುತ್ತಿದ್ದು, ಮಗು ಕಾಲು ಅಲ್ಲಾಡಿಸುತ್ತಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ.
ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು, ರಕ್ಷಣಾ ಕಾರ್ಯಾಚರಣೆ ಆರಂಭ!
ಕೊಳವೆಬಾವಿಯ 16 ಅಡಿ ಆಳದಲ್ಲಿ ಮಗು ಸಿಲುಕಿದ್ದು, ಮಗುವಿನ ರಕ್ಷಣೆಗೆ 20 ಅಡಿಗಳಷ್ಟು ಡಿಗ್ಗಿಂಗ್ ಮಾಡಿ 5 ಅಡಿಗಳ ಮತ್ತೊಂದು ಸುರಂಗವನ್ನು ಕೊರೆಯಲಾಗುತ್ತಿದೆ. 4.5 ಅಡಿ ಕೊರೆದು ಆಗಿದ್ದು ಇನ್ನು ಮಗುವನ್ನು ತಲುಪಲು ಅರ್ಧ ಅಡಿಯಷ್ಟೇ ಬಾಕಿ ಇದೆ. ಕಲ್ಲು ಬಂಡೆಗಳು ಅಡ್ಡಿಯಾಗಿರುವ ಕಾರಣ ಕಾರ್ಯಾಚರಣೆ ತಡವಾಗುತ್ತಿದೆ. ಕಲ್ಲು ಬಂಡೆಗಳನ್ನ ಒಡೆದು SDRF ತಂಡ ಕಾರ್ಯಾಚರಣೆ ಮಾಡುತ್ತಿದೆ.
ದಾಖಲೆ ತೋರಿಸಿದರೂ ಹಣ ವಶಕ್ಕೆ ಪಡೆದ ಅಧಿಕಾರಿಗಳು, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪರದಾಟ!
ಅಗ್ನಿಶಾಮಕ ದಳ, ಬೆಳಗಾವಿ, ಕಲಬುರ್ಗಿಯಿಂದ ಆಗಮಿಸಿರುವ ಎರಡು SDRF ತಂಡ, ಕೊಳವೆ ಬಾವಿ ಕೊರೆಯುವ ನುರಿತರ ತಂಡಗಳಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿದ್ದು, ಎರಡು ಹಿಟ್ಯಾಚಿ, ಬ್ರೇಕರ್‌ಗಳ ಬಳಕೆ ಮಾಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಕಿಕ್ಕಿರಿದು ಜನ ಸೇರಿದ್ದಾರೆ.
ಮಗು ಸಾತ್ವಿಕ್ ಮುಜಗೊಂಡ ಬದುಕಿ ಬರಲೆಂದು ಇಡೀ ಊರಿನ ಜನ ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಂದೆ-ತಾಯಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವನ್ನು ಹೊರತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ವೈದ್ಯರ ತಂಡ, ಒಟ್ಟು ಮೂರು ಅಂಬುಲೆನ್ಸ್ ನಿಯೋಜನೆ ಸೇರಿ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.