ಬೆಂಗಳೂರು (ಸೆ.09):  ರಾಜ್ಯದಲ್ಲಿ ಮಂಗಳವಾರ ಕೊರೋನಾ ಹೆಮ್ಮಾರಿಗೆ 146 ಮಂದಿ ಬಲಿಯಾಗಿದ್ದು, ಹೊಸದಾಗಿ 8,225 ಮಂದಿ ಕೊರೋನಾ ಸೋಂಕಿತರಾಗಿದ್ದಾರೆ. ತನ್ಮೂಲಕ ರಾಜ್ಯದಲ್ಲಿನ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 4.12 ಲಕ್ಷ ತಲುಪಿದೆ.

ಕರೋನಾ ಸೋಂಕಿಗೆ ಮಂಗಳವಾರ 146 ಮಂದಿ ಬಲಿಯಾಗಿರುವುದು ಇದುವರೆಗಿನ ಎರಡನೇ ಗರಿಷ್ಠ ಸಾವಿನ ಪ್ರಮಾಣವಾಗಿದೆ. ಆಗಸ್ಟ್‌ 25 ರಂದು 148 ಮಂದಿ ಸೋಂಕಿಗೆ ಮೃತಪಟ್ಟಿದ್ದು ಇದುವರೆಗಿನ ದಾಖಲೆ. ರಾಜ್ಯದಲ್ಲಿ ಸದ್ಯ 96,918 ಸಕ್ರೀಯ ಕೊರೋನಾ ಪ್ರಕರಣಗಳಿದ್ದು ಇದರಲ್ಲಿ 784 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅಸ್ಪತ್ರೆಗಳ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೇ ವೇಳೆ ಮಂಗಳವಾರ 7,803 ಮಂದಿ ಕೊರೋನಾದಿಂದ ಮುಕ್ತರಾಗಿದ್ದಾರೆ. ಈ ಮೂಲಕ ಕೊರೋನಾ ಮುಕ್ತರಾದವರ ಒಟ್ಟು ಸಂಖ್ಯೆ 3.08 ಲಕ್ಷಕ್ಕೆ ಏರಿದೆ. ರಾಜ್ಯದಲ್ಲಿ ಮಂಗಳವಾರ 67,443 ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು ಈ ವರೆಗೆ ಒಟ್ಟು 34.61 ಲಕ್ಷ ಕೋವಿಡ್‌ ಟೆಸ್ಟ್‌ ಗಳನ್ನು ಮಾಡಿದಂತಾಗಿದೆ.

ದೇಶದ ಮೊಟ್ಟ ಮೊದಲ ಏರ್ ಆ್ಯಂಬುಲೆನ್ಸ್‌ಗೆ ಯಡಿಯೂರಪ್ಪ ಚಾಲನೆ

ಶಿವಮೊಗ್ಗ ಜಿಲ್ಲೆಯಲ್ಲಿನ ಮಂಗಳವಾರದ ಹೊಸ ಕೊರೋನಾ ಸೋಂಕಿನ ಪ್ರಕರಣಗಳ ಮಾಹಿತಿ ರಾಜ್ಯ ಆರೋಗ್ಯ ಇಲಾಖೆ ಹೊರಡಿಸುವ ದೈನಂದಿನ ಆರೋಗ್ಯ ಬುಲೆಟಿನ್‌ ನಲ್ಲಿ ಇರಲಿಲ್ಲ. ಆದರೆ ಶಿವಮೊಗ್ಗ ಜಿಲ್ಲಾಡಳಿತ ನೀಡಿರುವ ಮಾಹಿತಿಯ ಪ್ರಕಾರ ಅಲ್ಲಿ ಹೊಸದಾಗಿ 359 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಹಾಗೆಯೇ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಶಿವಮೊಗ್ಗದಲ್ಲಿ 6 ಮಂದಿ ಕೊರೋನಾಗೆ ಮಂಗಳವಾರ ಬಲಿಯಾಗಿದ್ದರೆ, ಶಿವಮೊಗ್ಗದ ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಕೊರೋನಾದಿಂದ 8 ಮಂದಿ ಸತ್ತಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ 55 ಮಂದಿಗೆ ಕೊರೋನಾದಿಂದ ಅಸು ನೀಗಿದ್ದಾರೆ. ಮೈಸೂರಿನಲ್ಲಿ 11, ಧಾರವಾಡ 8, ಉಡುಪಿ 7, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ, ತುಮಕೂರು ತಲಾ 6, ಹಾಸನ 5, ಹಾವೇರಿ, ಮಂಡ್ಯ, ಉತ್ತರ ಕನ್ನಡ ತಲಾ 4, ದಕ್ಷಿಣ ಕನ್ನಡ 3, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಗದಗ, ಕಲಬುರಗಿ, ಕೋಲಾರ, ರಾಯಚೂರು, ವಿಜಯಪುರ, ಯಾದಗಿರಿ ತಲಾ 2, ರಾಮನಗರ, ಬೀದರ್‌, ಬೆಂಗಳೂರು ಗ್ರಾಮಾಂತರ ತಲಾ 1 ಸಾವು ವರದಿಯಾಗಿದೆ.

ಕಲಬುರಗಿ: ಖಾಸಗಿ ವಿಮಾನ, ಏರ್‌ ಆ್ಯಂಬುಲೆನ್ಸ್‌ಗೆ ಅವಕಾಶ ...

ಬೆಂಗಳೂರಿನಲ್ಲಿ 3,102 ಹೊಸ ಕೊರೋನಾ ಕೇಸ್‌ ಗಳು ಪತ್ತೆಯಾಗಿವೆ. ಬಳ್ಳಾರಿ 404, ದಕ್ಷಿಣ ಕನ್ನಡ 374, ಶಿವಮೊಗ್ಗ 359, ಮೈಸೂರು 337, ಧಾರವಾಡ 318, ಮಂಡ್ಯ 273, ಕೊಪ್ಪಳ 269, ಉಡುಪಿ 250, ದಾವಣಗೆರೆ 240, ಬೆಳಗಾವಿ 230, ಬಾಗಲಕೋಟೆ 212, ಹಾಸನ 219, ರಾಯಚೂರು 209, ಕಲಬುರಗಿ 199, ಗದಗ 196, ಹಾವೇರಿ 165, ಚಿಕ್ಕಮಗಳೂರು 162, ತುಮಕೂರು 153, ಬೆಂಗಳೂರು ಗ್ರಾಮಾಂತರ 104, ಚಿಕ್ಕಬಳ್ಳಾಪುರ 82, ಯಾದಗಿರಿ 79, ವಿಜಯಪುರ 61, ಬೀದರ್‌ 52, ಚಾಮರಾಜ ನಗರ 42, ಕೋಲಾರ 30, ಕೊಡಗು 29, ರಾಮನಗರ 28, ಉತ್ತರ ಕನ್ನಡ 24, ಚಿತ್ರದುರ್ಗ 23 ಹೊಸ ಪ್ರಕರಣಗಳು ವರದಿಯಾಗಿವೆ.