Asianet Suvarna News Asianet Suvarna News

ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಆರೋಗ್ಯ ಸಚಿವ ಸಮದ್ ನಿಧನ

  • ರಾಮನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ  ಹಾಗೂ ಮಾಜಿ ಸಚಿವ ಎ.ಕೆ.ಅಬ್ದುಲ್ ಸಮದ್ ನಿಧನ
  • ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಬ್ದುಲ್ ಸಮದ್ ಅವರು, ಬೆಂಗಳೂರು ಬೆನ್ಸನ್ ಟೌನ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರು 
senior Congress leader abdul samad passes away snr
Author
Bengaluru, First Published Sep 7, 2021, 12:29 PM IST

 ರಾಮನಗರ (ಸೆ.07): ರಾಮನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ  ಹಾಗೂ ಮಾಜಿ ಸಚಿವ ಎ.ಕೆ.ಅಬ್ದುಲ್ ಸಮದ್(86), ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಬ್ದುಲ್ ಸಮದ್ ಅವರು, ಬೆಂಗಳೂರು ಬೆನ್ಸನ್ ಟೌನ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆ. 

ಮೃತರು ಪತ್ನಿ, ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬೆಂಗಳೂರಿನ ಖಬ್ರಸ್ಥಾನದಲ್ಲಿ  ಇಸ್ಲಾಂ ಧರ್ಮದ ಸಂಪ್ರದಾಯದಂತೆ ಇಂದು ಸಂಜೆ ನೆರವೇರಿಲಿದೆ. 

ಕೊಳ್ಳೆಗಾಲ ಶಾಸಕ ಎನ್‌ ಮಹೇಶ್‌ಗೆ ಪತ್ನಿ ವಿಯೋಗ

ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದ ಅಬ್ದುಲ್ ಸಮದ್ ಅವರು, ರಾಮನಗರ ಕ್ಷೇತ್ರದಿಂದ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಪರಾಜಿತರಾಗೊಂಡಿದ್ದರು.

1972ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಅಬ್ದುಲ್ ಸಮದ್ ಅವರು, (20978 ಮತ) ಪ್ರತಿಸ್ಪರ್ಧಿ ನ್ಯಾಷನಲ್ ಕಾಂಗ್ರೆಸ್ ಆರ್ಗನೈಸೇಶನ್ (ಎನ್ ಸಿಒ) ಅಭ್ಯರ್ಥಿ ಬಿ‌.ಪುಟ್ಟಸ್ವಾಮಯ್ಯ (26775) ಎದುರು 5797 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಆನಂತರ 1978ರ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಇಂದಿರಾ ) ಅಭ್ಯರ್ಥಿ ಯಾದ ಅಬ್ದುಲ್ ಸಮದ್ ಅವರು 27837 ಮತಗಳನ್ನು ಪಡೆದು ಜನತಾ ಪಕ್ಷದ ಅಭ್ಯರ್ಥಿ ಸಿ‌.ಬೋರಯ್ಯ ವಿರುದ್ಧ 6962 ಮತಗಳ ಅಂತರದಿಂದ ಗೆದ್ದು ರಾಮನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.

ಈ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ತದ ನಂತರ 1983ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷದ ಸಿ.ಬೋರಯ್ಯ( 45076) ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಅಬ್ದುಲ್ ಸಮದ್ ಅವರು  18876 ಮತಗಳಿಂದ ಸೋಲು ಅನುಭವಿಸಿದ್ದರು. ಆನಂತರ ರಾಜಕೀಯದಿಂದ ಅಂತರ ಕಾಯ್ದುಕೊಂಡ ಅಬ್ದುಲ್ ಸಮದ್ ,ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ.

Follow Us:
Download App:
  • android
  • ios