Asianet Suvarna News Asianet Suvarna News

ಸಾರಿಗೆ ಬಂದ್: ಸಚಿವರೇ ವಿದ್ಯಾರ್ಥಿಗಳು PU ಎಕ್ಸಾಂಗೆ ಹೋಗುವುದೇಗೆ..?

9 ಜಿಲ್ಲೆಗಳಲ್ಲಿ ಸಾರಿಗೆ ಬಂದ್ ಮಾಡಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುವುದೇಗೆ..?  ಎಕ್ಸಾಂ ಸೆಂಟರ್‌ಗೆ ಬರೋದ್ಹೇಗೆ..?  ಸರ್ಕಾರಿ ಶಾಲೆ ಓದುತ್ತಿರುವ ಬಡ ಪರೀಕ್ಷಾರ್ಥಿಗಳು ಏನ್ಮಾಡ್ಬೇಕು?  ಶಿಕ್ಷಣ ಸಚಿವರು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು.

Second PUC students in trouble Over transportation suspended In 9 District
Author
Bengaluru, First Published Mar 22, 2020, 4:15 PM IST

ಬೆಂಗಳೂರು, (ಮಾ.22): ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಬದುಕಿನ ಮಹತ್ವದ ಘಟ್ಟ. ಇನ್ನೇನು ಒಂದೇ ಪರೀಕ್ಷೆ ಬಾಕಿ ಇದೆ. ಅದು ಸೋಮವಾರ ನಡೆಯಲಿದೆ.

"

ಆದ್ರೆ, ಮತ್ತೊಂದೆಡೆ 9 ಜಿಲ್ಲೆಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹಾಗಾದ್ರೆ, ಈ ಒಂಭತ್ತು ಜಿಲ್ಲೆಗಳ ಪಿಯುಸಿ ವಿದ್ಯಾರ್ಥಿಗಳು ಏನ್ಮಾಡ್ಬೇಕು?. 

Breaking: ಕರ್ನಾಟಕದ ಈ 9 ಜಿಲ್ಲೆಗಳು ಲಾಕ್‌ಡೌನ್‌ಗೆ ರಾಜ್ಯ ಸರ್ಕಾರ ಆದೇಶ

ತರಾತುರಿಯಲ್ಲಿ ಈ ರೀತಿ ತೀರ್ಮಾನ ಕೈಗೊಂಡರೇ ಸಾರಿಗೆ ಬಸ್‌ಗಳನ್ನೇ ಅವಲಂಬಿಸುರುವ  ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಲಿದೆ. ರಾಜ್ಯದ ಸಚಿವರುಗಳು ಒಂದೊಂದು ತೀರ್ಮಾನ ತೆಗೆದುಕೊಂಡು ವಿದ್ಯಾರ್ಥಿಗಳ ಜತೆ ಆಟ ಆಡುತ್ತಿದ್ದಾರಾ..? ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿರುವ ಹೀಗೇಕೆ ತೆಪ್ಪಗೆ ಕೂತಿದ್ದಾರೆ.

ಸಾರಿಗೆ ಬಂದ್ ಮಾಡುವುದರಿಂದ ಗ್ರಾಮೀಣ ಭಾಗದ ಪಿಯು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹೋಗಿ ಹೇಗೆ ಪರೀಕ್ಷೆ ಬರೆಯಬೇಕು. ಇದಕ್ಕೆ ಯಾವ ಸಚಿವರು ಉತ್ತರಿಸುತ್ತಾರೆ.

ಸಚಿವರುಗಳ ನಡುವಿನ ಜಟಾಪಟಿಯಿಂದಾಗಿ ಪಿಯುಸಿ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಬಸ್ ಇರುತ್ತೋ ಇಲ್ಲವೋ ಎನ್ನುವ ಭಯದಲ್ಲಿ ಇದ್ದಾರೆ.

ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುವುದೇಗೆ..?  ಎಕ್ಸಾಂ ಸೆಂಟರ್‌ಗೆ ಬರೋದ್ಹೇಗೆ..?  ಸರ್ಕಾರಿ ಶಾಲೆ ಓದುತ್ತಿರುವ ಬಡ ಪರೀಕ್ಷಾರ್ಥಿಗಳು ಏನ್ಮಾಡ್ಬೇಕು?  

ಪಿಯು ವಿದ್ಯಾರ್ಥಿಗಳಿ ಭವಿಷ್ಯದಲ್ಲಿ ಆಟ ಆಡುವುದನ್ನ ಬಿಟ್ಟು, ಈ ಬಗ್ಗೆ ಬೇಗ ಅಂತಿಮ ನಿರ್ಧಾರವನ್ನ ಸರ್ಕಾರ ಪ್ರಕಟಿಸಬೇಕು. 

Follow Us:
Download App:
  • android
  • ios