ಆಗಸ್ಟ್ ಬಳಿಕ ಶಾಲೆ, ಕಾಲೇಜು ಆರಂಭಕ್ಕೆ ಚಿಂತನೆ
ಕೊರೋನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ಶಾಲೆ-ಕಾಲೇಜುಗಳನ್ನು ಮುಂದಿನ ತಿಂಗಳು ಕಳೆದ ಬಳಿಕ ಹಂತಹಂತವಾಗಿ ಪ್ರಾರಂಭಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ತುಮಕೂರು(ಜು.03): ಕೊರೋನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ಶಾಲೆ-ಕಾಲೇಜುಗಳನ್ನು ಮುಂದಿನ ತಿಂಗಳು ಕಳೆದ ಬಳಿಕ ಹಂತಹಂತವಾಗಿ ಪ್ರಾರಂಭಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಆಗಸ್ಟ್ ತಿಂಗಳ ಬಳಿಕ ಶಾಲೆಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.ಮೊದಲು ಪದವಿ ಪೂರ್ವ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸಲಾಗುವುದು. ಬಳಿಕ ಪ್ರಾಥಮಿಕ ಶಾಲೆ ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ವಿಶೇಷ ಬಸ್ ಮೂಲಕ ಪರೀಕ್ಷೆಗೆ ಹಾಜರಾದ ಕೇರಳದ 367 ವಿದ್ಯಾರ್ಥಿಗಳು
ಇದೇವೇಳೆ ಸಂಕಷ್ಟಕ್ಕೊಳಗಾಗಿರುವ ಅನುದಾನರಹಿತ ಸಂಸ್ಥೆಯ ಶಿಕ್ಷಕರ ಸಂಬಳ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರ ಪ್ರತಿನಿಧಿಗಳನ್ನು ಕರೆದುಕೊಂಡು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇವೆ.
ಆರಂಭವಾಯ್ತು ರೈಲು ಖಾಸಗೀಕರಣ,ಭುಗಿಲೆದ್ದ ವಿಶ್ವಕಪ್ ಫಿಕ್ಸಿಂಗ್ ಪ್ರಕರಣ; ಜು.2ರ ಟಾಪ್ 10 ಸುದ್ದಿ!
ರಾಜ್ಯದ ಪರಿಸ್ಥಿತಿ ಸುಧಾರಿಸಿದ ಮೇಲೆ ಇದರ ಬಗ್ಗೆ ಯೋಚನೆ ಮಾಡುವುದಾಗಿ ತಿಳಿಸಿದರು. ಶಿಕ್ಷಣ ಸಂಸ್ಥೆಗಳು ಬಡ್ಡಿರಹಿತ ಸಾಲ ಕೊಡಿಸುವಂತೆ ಮನವಿ ಮಾಡಿದ್ದು, ಅದನ್ನು ಕೂಡ ಹಣಕಾಸು ಇಲಾಖೆ ಪರಿಶೀಲನೆ ನಡೆಸುತ್ತಿದೆ. ಶಿಕ್ಷಣ ಇಲಾಖೆಯಿಂದಲೇ ಇವರಿಗೆ ಸಹಾಯ ಮಾಡುವ ಮಾರ್ಗ ಹುಡುಕುತ್ತಿರುವುದಾಗಿ ತಿಳಿಸಿದರು.