*  ಹೊಸಕೋಟೆಯಲ್ಲಿ 600 ಕೋಟಿ ರು. ಭೂಮಿ ಸ್ವಾಹಾ*  ರಘುನಾಥ್‌ ರಾವ್‌ ಮಲ್ಕಾಪೂರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶೋಕ್‌*  ಶಾಸಕರ ಮನವಿಯ ಮೇರೆಗೆ ಪ್ರಕರಣ ಎಸಿಬಿ ತನಿಖೆ 

ಬೆಂಗಳೂರು(ಫೆ.17):  ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿ ಶಾಂತನಪುರ ಗ್ರಾಮದಲ್ಲಿ ಸುಮಾರು 600 ಕೋಟಿ ರು.ಮೌಲ್ಯದ 200 ಎಕರೆ ಜಮೀನನ್ನು(Land) ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ತನಿಖೆಗೆ ಒಪ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌(R Ashok) ತಿಳಿಸಿದರು.

ಬಿಜೆಪಿಯ(BJP) ರಘುನಾಥ್‌ ರಾವ್‌ ಮಲ್ಕಾಪೂರೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಂತನಪುರ ಗ್ರಾಮದ ಸರ್ವೆ ನಂಬರ್‌ 9ರ 200 ಎಕರೆ ಜಮೀನು ಮೂಲತಃ ಸರ್ಕಾರಿ ಖರಾಬು ಜಮೀನಾಗಿದ್ದು, ಗ್ರಾಮದಲ್ಲಿ 50 ಮಂದಿ ಪರಿಶಿಷ್ಟ ಜಾತಿ(Scheduled Caste) ಮತ್ತು ಪಂಗಡದ ಜನರಿಗೆ ತಲಾ ನಾಲ್ಕು ಎಕರೆಯಂತೆ ಮಂಜೂರು ಮಾಡಲಾಗಿತ್ತು. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ಬಲವಂತವಾಗಿ ಹೊರಹಾಕಿ ಭೂ ಕಬಳಿಕೆ ಮಾಡಿರುವುದು ಕಂಡು ಬಂದಿದೆ. ಜಮೀನಿನ ಮೌಲ್ಯ ಸುಮಾರು 600 ಕೋಟಿ ರು. ಆಗಿದೆ. ಈ ಕುರಿತು 6 ಪ್ರಕರಣಗಳು ದಾಖಲಿಸಲಾಗಿದೆ. ಸದ್ಯ ಶಾಸಕರ ಮನವಿಯ ಮೇರೆಗೆ ಪ್ರಕರಣವನ್ನು ಎಸಿಬಿ ತನಿಖೆಗೆ ಒಪ್ಪಿಸಲಾಗುತ್ತದೆ ಎಂದು ತಿಳಿಸಿದರು.

ಕೇಸರಿ ಶಾಲಿಗೂ, ಹಿಜಾಬ್​ಗೂ ನಮ್ಮ ವಿರೋಧವಿದೆ ಎಂದ ಸಚಿವ ಅಶೋಕ್

14 ಜಿಲ್ಲೆಗಳಲ್ಲಿ ಗ್ರಾಮಲೆಕ್ಕಿಗರ ಹುದ್ದೆ ನೇರ ನೇಮಕಾತಿ ಆರಂಭ: ಅಶೋಕ್‌

ವಿಧಾನಪರಿಷತ್ತು: ಗ್ರಾಮಲೆಕ್ಕಿಗ ಹುದ್ದೆ ಭರ್ತಿಗೆ 14 ಜಿಲ್ಲೆಗಳಿಗೆ ಅನುಮತಿ ನೀಡಿದ್ದು, ಶೇ.30ಕ್ಕಿಂತ ಹೆಚ್ಚಿನ ಹುದ್ದೆ ಖಾಲಿ ಇದ್ದ ಜಿಲ್ಲೆಗಳಲ್ಲಿ ನೇರ ನೇಮಕಾತಿ(Recruitment) ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಕಂದಾಯ ಇಲಾಖೆ(Department of Revenue) ಖಾಲಿ ಹುದ್ದೆಗಳ ಕುರಿತು ಬಿಜೆಪಿ ಸದಸ್ಯ ಎಸ್‌.ವಿ. ಸಂಕನೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಂದಾಯ ಇಲಾಖೆಯಲ್ಲಿ ಮಂಜೂರಾದ 2,645 ಹುದ್ದೆಗಳಲ್ಲಿ 1,482 ಮಾತ್ರ ಭರ್ತಿಯಾಗಿವೆ. ಅಗತ್ಯವಿರುವ ಗ್ರೂಪ್‌ ಸಿ ವೃಂದದ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲಾಗುತ್ತಿದೆ. 14 ಜಿಲ್ಲೆಗಳಿಗೆ ಭರ್ತಿಗೆ ಅನುಮತಿ ನೀಡಿದ್ದು, ಉಳಿದ ಜಿಲ್ಲೆಗಳಲ್ಲಿ ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮತಿ ಕೋರಲಾಗಿದೆ. ಯಾವ ಜಿಲ್ಲೆಗಳಲ್ಲಿ ಶೇ.30ಕ್ಕಿಂತ ಹೆಚ್ಚಿನ ಗ್ರಾಮ ಲೆಕ್ಕಿಗ ಹುದ್ದೆ ಖಾಲಿ ಇರುತ್ತದೆಯೋ ಅಲ್ಲಿ ನೇರ ನೇಮಕಾತಿ ಮೂಲಕ ಭರ್ತಿಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬೆರಳಚ್ಚುಗಾರರು, ವಾಹನ ಚಾಲಕರು, ಡಿ ಗ್ರೂಪ್‌ ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ. ಖಾಲಿ ಉಳಿದಿರುವ ತಹಶೀಲ್ದಾರ್‌ ಗ್ರೇಡ್‌ 2 ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲಾಗುವುದು. ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಅನುಕಂಪದ ಆಧಾರದ ಮೇಲೆ ತುಂಬಲಾಗುತ್ತಿದ್ದು, ನೇರ ನೇಮಕಾತಿಗೂ ಕೆಪಿಎಸ್‌ಸಿ ಮೂಲಕ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಿದ್ದುಗೆ ಟೀಕಿಸುವ ಚಟ, ಅಹಂಕಾರ: ಅಶೋಕ್‌ ಕಿಡಿ

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೆ ಎಲ್ಲದಕ್ಕೂ ಒಂದು ಪ್ರತಿಕ್ರಿಯೆ ನೀಡಬೇಕು ಎಂಬ ಚಟ ಹಾಗೂ ಹೆಚ್ಚು ಬಜೆಟ್‌ ಮಂಡಿಸಿದ್ದೇನೆ ಎಂಬ ಅಹಂ ಇದೆ. ಹೀಗಾಗಿ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುವ ಅವರು ಬಸವರಾಜ ಬೊಮ್ಮಾಯಿ(Basavaraj Bommai) ಅವರ ಸರ್ಕಾರದ ಸಾಧನೆಗಳನ್ನು ವಿನಾಕಾರಣ ಟೀಕಿಸಿದ್ದಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿರುಗೇಟು ನೀಡಿದ್ದರು. 

Basavaraj Bommai: ಗಾಂಧೀಜಿ ಆದರ್ಶ ದೇಶದ ಆಧಾರ ಸ್ತಂಭ, ಬದುಕು ದಾರಿದೀಪ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ತಮಗೆ ದೊರೆತ ಆರು ತಿಂಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದರೂ ಯಾವುದೇ ಜನಪರ ಕೆಲಸ ಮಾಡಿಲ್ಲ. ಹೀಗಾಗಿಯೇ ಜನರು ಕಾಂಗ್ರೆಸ್‌(Congress) ಪಕ್ಷವನ್ನು ತಿರಸ್ಕರಿಸಿ ಕೇವಲ 78 ಸ್ಥಾನ ನೀಡಿದರು. ಅದರಲ್ಲೂ 17 ಮಂದಿ ಕಾಂಗ್ರೆಸ್‌ ಬಿಟ್ಟು ಹೊರ ಬಂದರು ಎಂದು ಕಿಡಿ ಕಾರಿದ್ದರು. 

ಕಾಂಗ್ರೆಸ್‌ ಶಾಸಕರು ಪಕ್ಷ ಬಿಟ್ಟ ಬಗ್ಗೆ ಕಾಂಗ್ರೆಸ್‌ ಸತ್ಯ ಶೋಧನಾ ಸಮಿತಿಯಿಂದ ತನಿಖೆ ಮಾಡಿಸಬೇಕಿತ್ತು. ಸಮಿತಿ ಮಾಡಿ ಏಕೆ ಕಾಂಗ್ರೆಸ್‌ ಬಿಟ್ಟರು ಎಂಬುದು ತಿಳಿಯಬೇಕಿತ್ತು. ಇದೀಗ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಕೂಡ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಈಗಲಾದರೂ ಕಾಂಗ್ರೆಸ್‌ ಬುದ್ಧಿ ಕಲಿಯಲಿ ಎಂದರು.