Asianet Suvarna News Asianet Suvarna News

ಲೋಕಸಭಾ ಚುನಾವಣೆಗೆ ಬಿಜೆಪಿ ರಣತಂತ್ರ! 5 ವರ್ಷಗಳ ಬಳಿಕ ಕನ್ನಡಿಗರಿಗೆ ಬೆಳಗಾವಿ ಮೇಯರ್ ಸ್ಥಾನ!

ಬೆಳಗಾವಿ ಮಹಾನಗರ ಪಾಲಿಕೆಯ 22 ನೇ ಅವಧಿಗೆ ನೂತನ ಮೇಯರ್ ಆಗಿ ಸವಿತ ಕಾಂಬಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಆ ಮೂಲಕ 5 ವರ್ಷಗಳ ಬಳಿಕ ಬೆಳಗಾವಿ ಮಹಾನಗರಕ್ಕೆ ಕನ್ನಡ ಭಾಷಿಕರೊಬ್ಬರು ಮೇಯರ್ ಆಗಿದ್ದಾರೆ. 

Savita Kamble has been elected as the new mayor of Belagavi rav
Author
First Published Feb 15, 2024, 2:02 PM IST

ಬೆಳಗಾವಿ (ಫೆ.15):ಬೆಳಗಾವಿ ಮಹಾನಗರ ಪಾಲಿಕೆಯ 22 ನೇ ಅವಧಿಗೆ ನೂತನ ಮೇಯರ್ ಆಗಿ ಸವಿತ ಕಾಂಬಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಆ ಮೂಲಕ 5 ವರ್ಷಗಳ ಬಳಿಕ ಬೆಳಗಾವಿ ಮಹಾನಗರಕ್ಕೆ ಕನ್ನಡ ಭಾಷಿಕರೊಬ್ಬರು ಮೇಯರ್ ಆಗಿದ್ದಾರೆ. 

ಬಿಜೆಪಿಯ ಮೊದಲ ಕನ್ನಡ ಭಾಷಿಕ ಮೇಯರ್ ಎಂಬ ಕೀರ್ತಿಗೂ ಸವಿತಾ ಕಾಂಬಳೆ ಪಾತ್ರರಾದಂತಾಗಿದೆ. ಇದುವರೆಗೆ ಬಿಜೆಪಿಯಿಂದ ಕನ್ನಡ ಭಾಷಿಕರೊಬ್ಬರು ಮೇಯರ್ ಆಗಿರಲಿಲ್ಲ. ಪಾಲಿಕೆ ಮೇಯರ್ ಆಗಲು ಬಯಸಿದ್ದ ಮರಾಠಿ ಭಾಷಿಕ ಲಕ್ಷ್ಮಿ ರಾಥೋಡ್‌ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ ನೂತನ ಮೇಯರ್ ಆಗಿ ಸವಿತಾ ಕಾಂಬಳೆ ಹೆಸರು ಘೋಷಣೆ ಮಾಡಿದರು. ಪಾಲಿಕೆ ಸದಸ್ಯೆ ಆಗುವ ಮೊದಲು ಸವಿತಾ ಕಾಂಬಳೆ ವಿವಿಧ ಕಂಪನಿಗಳಲ್ಲಿ ಸಾಮಾನ್ಯ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದರು.

ಬೆಳಗಾವಿ: ಸಿದ್ದು ಸರ್ಕಾರದ ವಿರುದ್ಧ ಪ್ರತಿಭಟನೆ, 27 ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

ಲೋಕಸಭಾ ಚುನಾವಣೆಗೆ ಕನ್ನಡ ಭಾಷಿಕ, ಮರಾಠಿ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಕನ್ನಡ ಭಾಷಿಕರಾಗಿರುವ ಸಾಮಾನ್ಯ ಕಾರ್ಮಿಕ ಮಹಿಳೆಗೆ ಮೇಯರ್, ಉಪಮೇಯರ್ ಆಗಿ ಮರಾಠಿ ಭಾಷಿಕರಿಗೆ ನೀಡುವ ಮೂಲಕ ರಾಜಕೀಯ ಚಾಣಕ್ಷತನ ತೋರಿದೆ.  ಕೇಸರಿ ಪೇಠಾ ತೊಟ್ಟು ಪರಿಷತ್ ಸಭಾಭವನಕ್ಕೆ ಬಂದ ಬಿಜೆಪಿ ಸದಸ್ಯರು ಮೇಯರ್ ಚೇಂಬರ್‌ನಿಂದ ಬರುವಾಗ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ವಿಶೇಷವಾಗಿತ್ತು.  

Follow Us:
Download App:
  • android
  • ios