ಬೆಂಗಳೂರು (ಸೆ.16):  ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಬರುವ ಜನವರಿ 27ರಂದು ಶಿಕ್ಷೆ ಅವಧಿ ಮುಗಿಸಿ ಬಿಡುಗಡೆಯಾಗಲಿದ್ದಾರೆ.

‘2020ರ ಆಗಸ್ಟ್‌ 14ಕ್ಕೆ ಶಶಿಕಲಾ ಬಿಡುಗಡೆಯಾಗಲಿದ್ದಾರೆ. ಮುಂದಿನ ಬೆಳವಣಿಗೆ ಕಾದು ನೋಡಿ’ ಎಂದು ಜುಲೈನಲ್ಲಿ ಬಿಜೆಪಿ ವಕ್ತಾರ ಆಶೀರ್ವಾದಮ್‌ ಆಚಾರಿ ಟ್ವೀಟ್‌ ಮಾಡಿದ್ದರು. ಈ ಹೇಳಿಕೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ಕಂಪನ ಮೂಡಿಸಿತ್ತು. ಆದರೆ ಆಗಸ್ಟ್‌ 14ರಂದು ಶಶಿಕಲಾ ಬಿಡುಗಡೆ ಆಗದೇ ಅವರ ಹೇಳಿಕೆ ಸುಳ್ಳಾಗಿತ್ತು.

ಜೈಲಿಂದ ಬಿಡುಗಡೆ ಬಳಿಕ ನೆಲೆಸಲು ಕಟ್ಟಿಸುತ್ತಿದ್ದ ಶಶಿಕಲಾ ಬಂಗಲೆ ಜಪ್ತಿ ...

ಇದರ ಬೆನ್ನಲ್ಲೇ ಈಗ 2021ರ ಜ.27ಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇರುವುದಾಗಿ, ಮಾಹಿತಿ ಹಕ್ಕು ಕಾಯ್ದೆಯಡಿ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಸಲ್ಲಿಸಿದ್ದ ಅರ್ಜಿಗೆ ಜೈಲಿನ ಮುಖ್ಯ ಅಧೀಕ್ಷಕ ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ ಶಶಿಕಲಾ ಅವರು ಜೈಲು ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಬಿಡುಗಡೆಯಾಗಲಿದ್ದಾರೆ ಎಂಬ ವದಂತಿಗೆ ತೆರೆ ಬಿದ್ದಿದೆ.

ಉಲ್ಲಂಘಿಸಿದರೆ ಜೈಲು ಮುಂದುವರಿಕೆ:  2021ರ ಜನವರಿ 27ಕ್ಕೆ ಶಶಿಕಲಾ ಅವರ ಸಜಾ ಅವಧಿ ಮುಗಿಯಲಿದೆ. ಕೋರ್ಟ್‌ ತೀರ್ಪಿನಂತೆ .10 ಕೋಟಿ ದಂಡ ಪಾವತಿ ಮಾಡದೆ ನಿಯಮ ತೀರ್ಪು ಉಲ್ಲಂಘಿಸಿದರೆ 2022ರ ಫೆ.27ವರೆಗೆ ಶಿಕ್ಷೆ ಮುಂದುವರೆಯಲಿದೆ ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ ಹ್ನಿನೆಲೆ:  ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್‌ ಸ್ವಾಮಿ ದಾಖಲಿಸಿದ್ದ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಶಿಕಲಾ ಅವರಿಗೆ 4 ವರ್ಷ ಸಜೆ ಮತ್ತು .10 ಕೋಟಿ ದಂಡ ವಿಧಿಸಿ ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. 2017ರ ಫೆ.15 ರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾ ಶಿಕ್ಷೆ ಅನುಭವಿಸುತ್ತಿದ್ದಾರೆ. ಪತಿ ನಟರಾಜನ್‌ ಅನಾರೋಗ್ಯದ ಕಾರಣ ನೀಡಿ 2017ರ ಅಕ್ಟೋಬರ್‌ ಹಾಗೂ 2018ರ ಮಾಚ್‌ರ್‍ನಲ್ಲಿ ತಲಾ ಐದು ದಿನಗಳು ಹಾಗೂ ಪತಿ ಮೃತಪಟ್ಟಾಗ 12 ದಿನಗಳು ಅವರು ಪೆÜರೋಲ್‌ ಪಡೆದಿದ್ದರು. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿದರೆ ಶಶಿಕಲಾ ಕೋರ್ಟ್‌ ವಿಧಿಸಿದ್ದ ಶಿಕ್ಷೆಯಲ್ಲಿ ಬಹುತೇಕ ಅವಧಿ ಪೂರ್ಣಗೊಳಿಸಿದ್ದಾರೆ. 4 ತಿಂಗಳು ಮಾತ್ರ ಬಾಕಿ ಇದೆ.