Asianet Suvarna News Asianet Suvarna News

ವಿರೋಧಿಗಳ ಟೀಕೆಗೆ ಕೆಲಸದ ಮೂಲಕ ಉತ್ತರ ಕೊಡುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ: ಬಿಎಲ್ ಸಂತೋಷ್

ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಅನುಭವಕ್ಕೆ ಬರುವ ಸತ್ಯ ಆಗಿದ್ದು, ಭಾರತವನ್ನು ಎಲ್ಲರೂ ಹೆಮ್ಮೆ ಪಡುವಂತೆ ನಿರ್ಮಿಸುತ್ತಿದ್ದಾರೆ. ದೇಶದ ಅಭಿವೃದ್ಧಿ ವಿಚಾರದಲ್ಲಿ ಯಾರು ಏನೇ ಟೀಕಿಸಿದರೂ ಕೆಲಸ ಮೂಲಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಸ್‌.ಸಂತೋಷ್‌ ಹೇಳಿದ್ದಾರೆ.

Santosh Ji speech at the release of Atma Nirbhar Bharat Modi at bengaluru rav
Author
First Published Mar 7, 2023, 11:34 AM IST | Last Updated Mar 7, 2023, 11:36 AM IST

ಬೆಂಗಳೂರು (ಮಾ.7) : ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಅನುಭವಕ್ಕೆ ಬರುವ ಸತ್ಯ ಆಗಿದ್ದು, ಭಾರತವನ್ನು ಎಲ್ಲರೂ ಹೆಮ್ಮೆ ಪಡುವಂತೆ ನಿರ್ಮಿಸುತ್ತಿದ್ದಾರೆ. ದೇಶದ ಅಭಿವೃದ್ಧಿ ವಿಚಾರದಲ್ಲಿ ಯಾರು ಏನೇ ಟೀಕಿಸಿದರೂ ಕೆಲಸ ಮೂಲಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಸ್‌.ಸಂತೋಷ್‌(BL Santosh) ಹೇಳಿದ್ದಾರೆ.

ಸೋಮವಾರ ನಗರದ ಎಫ್‌ಕೆಸಿಸಿಐನಲ್ಲಿ ನಡೆದ ಸಮೃದ್ಧ ಸಾಹಿತ್ಯ ಪ್ರಕಾಶನ ಹೊರತಂದಿರುವ ಬಿಜೆಪಿ ವಕ್ತಾರ ಪ್ರಕಾಶ್‌ ಶೇಷರಾಘವಚಾರ್‌ ರಚಿತ ‘ಆತ್ಮನಿರ್ಭರ ಭಾರತ-ಮೋದಿ(Bharata-Narendra Modi) ಇದ್ದರೆ ಎಲ್ಲವೂ ಸಾಧ್ಯ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬರವಣಿಗೆ ಎಂಬುದು ಆತ್ಮನಿರ್ಭರ ಭಾರತ(Atma nirbhar Bharata) ಕೃತಿ ಲೇಖಕ ಪ್ರಕಾಶ್‌ ಶೇಷರಾಘವಚಾರ್‌(Prakash Shesharaghavachar) ಅವರ ಕುಟುಂಬದಲ್ಲಿಯೇ ಇದೆ. ಪ್ರಧಾನಿ ನರೇಂದ್ರಮೋದಿ(PM Narendra Modi) ಕುರಿತು ಬರೆಯಲಾಗಿದ್ದರೂ ಅವರ ಕುರಿತಂತೆ ಎಲ್ಲವನ್ನೂ ಬರೆಯುವುದು ಸುಲಭವಲ್ಲ. ಮೋದಿ ಅವರು ಒಂದು ಅನುಭವಕ್ಕೆ ಬರುವ ಸತ್ಯ ಎಂದರು.

 

ಉರಿ ಬಿಸಿಲಿಗೆ ತತ್ತರಿಸಿದ ಹಲವು ರಾಜ್ಯ, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಮೋದಿ ಅವರು ವಿಶ್ವ ನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ. ಅವರ ಬಗ್ಗೆ ಕೊಂಕು ಮಾತನಾಡುವವರ ನಡುವೆ ಬೆಳೆದು ನಿಂತಿರುವ ಕುರಿತು ಈ ಪುಸ್ತಕದಲ್ಲಿ ತಕ್ಕ ಉತ್ತರ ನೀಡಲಾಗಿದೆ. ರಷ್ಯಾ ಮತ್ತು ಉಕ್ರೇನ್‌ ಯುದ್ಧದ ವೇಳೆಯಲ್ಲಿ ಆಲ್ಲಿರುವ ಭಾರತದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕರೆತರಲಾಗಿದೆ. ಇದರಿಂದ ರಾಜಕಾರಣಕ್ಕೂ ಗೌರವವನ್ನೂ ತಂದುಕೊಟ್ಟಿದ್ದಾರೆ. ಜನಧನ ಯೋಜನೆ, ಫಿಟ್‌ ಇಂಡಿಯಾ, ಆಯುಷ್ಮಾನ್‌ ಭಾರತ್‌ ಸೇರಿದಂತೆ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕಾರ್ಯಕರ್ತರಾಗಿ ಹೇಗಿದ್ದರೋ, ಈಗಲೂ ಅದೇ ರೀತಿಯಾಗಿ ನರೇಂದ್ರ ಮೋದಿ ಜೀವನ ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌(Vishweshwar Bhat)ಮಾತನಾಡಿ, ಆತ್ಮನಿರ್ಭರ ಭಾರತ ಕೃತಿಯ ಲೇಖಕ ಪ್ರಕಾಶ್‌ ಶೇಷರಾಘವಚಾರ್‌ ಅವರು ಸುಂದರವಾದ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದಲ್ಲಿ ಆತ್ಮನಿರ್ಭರ ಭಾರತದ ಹಲವು ಮುಖಗಳನ್ನು ತೆರೆದಿಡಲಾಗಿದೆ. ಮಹಾತ್ಮ ಗಾಂಧೀಜಿ, ಜವಾಹರ್‌ಲಾಲ್‌ ನೆಹರು, ಲೋಹಿಯಾ ಸೇರಿದಂತೆ ಹಲವು ಮಂದಿ ಬರೆಯುವುದನ್ನು ರೂಢಿಸಿಕೊಂಡಿದ್ದರು. ಆದರೆ, ಇತ್ತೀಚೆಗಿನ ದಿನದಲ್ಲಿ ರಾಜಕೀಯ ಪಕ್ಷದ ನಾಯಕರು ಬರೆಯುವುದನ್ನು ಮರೆಯುತ್ತಿದ್ದಾರೆ. ಬೇರೆಯವರ ಕೈಯಲ್ಲಿ ಬರೆಯಿಸಿ ಅಥವಾ ನೀವೇ ಬರೆದುಕೊಳ್ಳಿ ಎಂದು ಹೇಳುವವರು ಇದ್ದಾರೆ ಎಂದು ತಿಳಿಸಿದರು.

Namma Metro: ಕೆ.ಆರ್‌ಪುರ-ವೈಟ್‌ಫೀಲ್ಡ್‌ ಮೆಟ್ರೋಗೆ ಮೋದಿ ಚಾಲನೆ?

ಲೇಖಕ ಪ್ರಕಾಶ್‌ ಶೇಷರಾಘವಚಾರ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕುರಿತು ಬರೆಯಲು ಒಂದು ಪುಸ್ತಕವಾಗುವುದಿಲ್ಲ. ಎಷ್ಟುಬರೆದರೂ ಅದು ಕಡಿಮೆಯೇ ಎಂಬುದು ನನ್ನ ಅಭಿಪ್ರಾಯ. ಬಡವರು, ಮಧ್ಯಮವರ್ಗದವರ ಅಭಿವೃದ್ಧಿಗಾಗಿ, ರೈತರ ಒಳಿತಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆತ್ಮನಿರ್ಭರ ಭಾರತಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

Latest Videos
Follow Us:
Download App:
  • android
  • ios