ಸ್ಯಾಂಕಿ ಮೇಲ್ಸೇತುವೆ: ಪ್ರಿಯಾಂಕ್‌ ಖರ್ಗೆ -ಅಶ್ವತ್ಥ ನಾರಾಯಣ ನಡುವೆ ಜಟಾಪಟಿ!

ನಗರದ ಮಲ್ಲೇಶ್ವರದಲ್ಲಿ ಬೃಹತ್‌ ಮರಗಳನ್ನು ಕಡಿದು ಅವೈಜ್ಞಾನಿಕವಾಗಿ ನಿರ್ಮಿಸಲು ಮುಂದಾಗಿರುವ ಸ್ಯಾಂಕಿ ಮೇಲ್ಸೇತುವೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದ ಸಾರ್ವಜನಿಕರ ಮೇಲೆ ಎಫ್‌ಐಆರ್‌ ದಾಖಲಿಸಿ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ, ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ನಡುವೆ ಜಟಾಪಟಿ ನಡೆದಿದೆ.

Sankey Flyover issue Argument between Priyank and Ashwattha bengaluru rav

ಬೆಂಗಳೂರು (ಏ.3) : ನಗರದ ಮಲ್ಲೇಶ್ವರದಲ್ಲಿ ಬೃಹತ್‌ ಮರಗಳನ್ನು ಕಡಿದು ಅವೈಜ್ಞಾನಿಕವಾಗಿ ನಿರ್ಮಿಸಲು ಮುಂದಾಗಿರುವ ಸ್ಯಾಂಕಿ ಮೇಲ್ಸೇತುವೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದ ಸಾರ್ವಜನಿಕರ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ. ಸಚಿವ ಡಾಅಶ್ವತ್ಥ ನಾರಾಯಣ(Dr CN Ashwath Narayana) ಸೋಲಿನ ಭೀತಿಯಿಂದ ಸರ್ವಾಧಿಕಾರಿ ಧೋರಣೆ ಮೆರೆಯುತ್ತಿದ್ದು, ಪೊಲೀಸರ ಮೂಲಕ ದೌರ್ಜನ್ಯ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ.

ಭಾನುವಾರ ಮಲ್ಲೇಶ್ವರ(Malleshwar)ದ ಕಾಂಗ್ರೆಸ್‌ ಅಭ್ಯರ್ಥಿ ಅನೂಪ್‌ ಅಯ್ಯಂಗಾರ್‌(Anoop Iyengar) ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ(Priyank kharge) ಅವರು, ಮುಖ್ಯಮಂತ್ರಿ ಬೊಮ್ಮಾಯಿ(CM Basavaraj Bommai) ಹೇಳುತ್ತಿರುವಂತೆ ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಜಾರಿ ಮಾಡಲಾಗುತ್ತಿದೆ. ಅಲ್ಲಿಯ ರೀತಿ ಯಾರೂ ಸರ್ಕಾರದ ವಿರುದ್ಧ ಮಾತನಾಡಬಾರದು, ಪ್ರಶ್ನಿಸಬಾರದು, ಪ್ರತಿಭಟಿಸಬಾರದು ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂಬ ಸಂದೇಶವನ್ನು ಅಶ್ವತ್ಥ ನಾರಾಯಣ ಮೂಲಕ ಕಳುಹಿಸುತ್ತಿದೆ ಎಂದು ಕಿಡಿ ಕಾರಿದರು.

ಜೆಡಿಎಸ್‌ ಕಾರ‍್ಯಕರ್ತರಿಗೆ ಪೊಲೀಸರ ಕಿರುಕುಳ ಸಹಿಸುವುದಿಲ್ಲ: ಎಚ್‌ಡಿಕೆ

22 ಸಾವಿರ ಜನ ಸಹಿ ಹಾಕಿರುವ ಅರ್ಜಿಯಲ್ಲಿ ಸ್ಯಾಂಕಿ ಮೇಲ್ಸೆತುವೆ ರಸ್ತೆ ಅಗಲೀಕರಣ ಬೇಡ ಎಂದು ಹೇಳಿದ್ದಾರೆ. ಎರಡು ಸಾವಿರ ಶಾಲಾ ಮಕ್ಕಳು ಬೊಮ್ಮಾಯಿ ಅಂಕಲ್‌ಗೆ ಪತ್ರ ಬರೆದು ಈ ಯೋಜನೆಯಿಂದ ಪರಿಸರ ನಾಶವಾಗಲಿದೆ, ನಮ್ಮ ಶಾಲೆಗೆ ತೊಂದರೆಯಾಗಲಿದೆ ಎಂದು ಮನವಿ ಸಲ್ಲಿಸಿದ್ದಾರೆ. ಆದರೂ ಮುಖ್ಯಮಂತ್ರಿಗಳು ಅವರ ಮನವಿಗೆ ಕಿವಿಗೊಟ್ಟಿಲ್ಲ ಎಂದು ಟೀಕಿಸಿದರು.

ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಇಲ್ಲದೆ ಯೋಜನೆ ಮಾಡಲಾಗಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿಲ್ಲ. ಜತೆಗೆ 2020ರ ಸಮಗ್ರ ಸಂಚಾರ ಯೋಜನೆ ನೀತಿಗೆ ವಿರುದ್ಧವಾಗಿದೆ. 40 ಪರ್ಸೆಂಟ್‌ ಕಮಿಷನ್‌ಗಾಗಿ ಈ ಯೋಜನೆ ಆರಂಭಿಸಲಾಗಿದೆ. ಇದರ ವಿರುದ್ಧ ಮೌನ ರಾರ‍ಯಲಿ ನಡೆಸಿದ ಮಲ್ಲೇಶ್ವರದ 70 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ಕೇಸು ರದ್ದು ಭರವಸೆ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಭ್ರಷ್ಟಯೋಜನೆ ಹಾಗೂ ಸುಳ್ಳು ಕೇಸ್‌ ವಜಾ ಮಾಡುತ್ತೇವೆ. ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಪೊಲೀಸ್‌ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ನಮ್ಮ ಸರ್ಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

ಕಾನೂನು ವ್ಯವಸ್ಥೆಗೆ ಧಕ್ಕೆ ಆಗಿದ್ದಕ್ಕೆ ಪೊಲೀಸ್‌ ಕೇಸ್‌: ಸಚಿವರ ಸ್ಪಷ್ಟನೆ

-ಭೂ ಸಾರಿಗೆ ಪ್ರಾಧಿಕಾರಯಿಂದ ನಿರ್ಮಾಣ: ನಾರಾಯಣ

ಸ್ಯಾಂಕಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ಯೋಜನೆ ವಿಚಾರದಲ್ಲಿ ತಮ್ಮ ನಿರ್ಧಾರ ಏನೂ ಇಲ್ಲ. ಆದರೂ, ಕಾಂಗ್ರೆಸ್‌ ನಾಯಕ ಪ್ರಿಯಾಂಕ ಖರ್ಗೆ ರಾಜಕೀಯ ಗಿಮಿಕ್‌ ಮಾಡುತ್ತಿದ್ದಾರೆ. ಚಿತ್ತಾಪುರದ ರಾಜಕೀಯವನ್ನು ಮಲ್ಲೇಶ್ವರಗೆ ತರುವ ದುಸ್ಸಾಹಸ ಮಾಡುತ್ತಿದ್ದಾರೆ ಎಂದು ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ ಕಿಡಿ ಕಾರಿದ್ದಾರೆ.

ಈ ಯೋಜನೆ ವಿರುದ್ಧ ರಾರ‍ಯಲಿ ನಡೆಸಿದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿರುವುದಕ್ಕೂ ತಮಗೂ ಸಂಬಂಧವಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಾಗ ಅವರು ತಮ್ಮ ಕರ್ತವ್ಯ ನಿರ್ವಹಿಸಿರುತ್ತಾರೆ. ಇಷ್ಟಕ್ಕೂ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಹೈಕೋರ್ಚ್‌ ಸ್ಪಷ್ಟಸೂಚನೆ ನೀಡಿರುವುದು ಇವರ ಗಮನಕ್ಕೆ ಬರದಿರುವುದು ದುರಂತ ಎಂದು ಅವರು ಟೀಕಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಿತ ಮೇಲ್ಸೇತುವೆಯ ಅಂತಿಮ ನಿರ್ಧಾರವನ್ನು ಜನಾಭಿಪ್ರಾಯಕ್ಕೆ ಸ್ಪಂದಿಸಿ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರಕ್ಕೆ (ಬಿಎಂಎಲ್‌ಟಿಎ) ವಹಿಸಲಾಗಿದೆ. ಇದರಲ್ಲಿ ತಮ್ಮ ನಿರ್ಧಾರ ಏನೂ ಇಲ್ಲ ಎಂಬುದು ಪ್ರಿಯಾಂಕ್‌ ಖರ್ಗೆ ಅವರಿಗೂ ಗೊತ್ತಿದೆ. ಆದರೂ ಅವರು ರಾಜಕೀಯ ಗಿಮಿಕ್‌ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮೇಲ್ಸೇತುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಎನ್‌ಜಿಒಗಳ ಜತೆ ಮಾತನಾಡಿ ಅಭಿಪ್ರಾಯಗಳನ್ನು ಆಲಿಸಿದ್ದೇನೆ. ಅವರ ಸಲಹೆ ಪ್ರಕಾರ ಬಿಬಿಎಂಪಿಯು ಬಿಎಂಎಲ್‌ಟಿಎಗೆ ವಹಿಸಿದೆ. ಈ ಸತ್ಯ ಗೊತ್ತಿದ್ದರೂ ಮಲ್ಲೇಶ್ವರದಲ್ಲಿ ಮೂಲೆಗುಂಪಾಗಿರುವ ಕಾಂಗ್ರೆಸ್‌ ಆಧಾರರಹಿತ ಆರೋಪ ಮಾಡುತ್ತಿದೆ. ಕಾಂಗ್ರೆಸ್‌ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಚುನಾವಣೆ ಘೋಷಣೆಯಾದ ಕೂಡಲೇ ಈ ನಾಟಕ ಶುರು ಮಾಡಿಕೊಂಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

Bengaluru: ₹3332 ಕೋಟಿ ಆಸ್ತಿ ತೆರಿಗೆ ವಸೂಲಿ ಬಿಬಿಎಂಪಿ ದಾಖಲೆ

ಮಲ್ಲೇಶ್ವರದ ಹೆಸರು ಹಾಳು ಮಾಡಲು ಖರ್ಗೆ ಈಗ ಟೀಮ… ಕಟ್ಟಿಕೊಂಡು ಹೊರಟಿದ್ದಾರೆ. ಆದರೆ ಇದಕ್ಕೆ ಜನರೇ ತಕ್ಕ ಉತ್ತರ ಕೊಡುತ್ತಾರೆ. ಯೋಜನೆಯಿಂದ ಸ್ಯಾಂಕಿ ಕೆರೆಗೆ ಧಕ್ಕೆ ಉಂಟುಮಾಡುವ ಪ್ರಶ್ನೆಯೇ ಇಲ್ಲ. ತಮ್ಮ ನೇತೃತ್ವದಲ್ಲಿ ಮಲ್ಲೇಶ್ವರ ಕ್ಷೇತ್ರವನ್ನು ಮುಂದಿನ ಮೂರು ದಶಕಗಳ ದೂರದೃಷ್ಟಿಇಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ ಎಂದರು.

Latest Videos
Follow Us:
Download App:
  • android
  • ios