Bengaluru: ₹3332 ಕೋಟಿ ಆಸ್ತಿ ತೆರಿಗೆ ವಸೂಲಿ ಬಿಬಿಎಂಪಿ ದಾಖಲೆ
ಪ್ರಸಕ್ತ ಆರ್ಥಿಕ ವರ್ಷ ಮುಕ್ತಾಯಕ್ಕೆ ಬಿಬಿಎಂಪಿಯ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ .3,332.72 ಕೋಟಿಗೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು .250 ಕೋಟಿ ಹೆಚ್ಚು ಸಂಗ್ರಹವಾಗಿದೆ. ಕಳೆದ 2021-22ನೇ ಸಾಲಿನಲ್ಲಿ .3,088 ಕೋಟಿ ಸಂಗ್ರಹವಾಗಿತ್ತು. 2022-23ನೇ ಸಾಲಿನಲ್ಲಿ .3,332.72 ಕೋಟಿ ಸಂಗ್ರಹವಾಗಿದೆ.
ಬೆಂಗಳೂರು (ಏ.3) : ಪ್ರಸಕ್ತ ಆರ್ಥಿಕ ವರ್ಷ ಮುಕ್ತಾಯಕ್ಕೆ ಬಿಬಿಎಂಪಿಯ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ .3,332.72 ಕೋಟಿಗೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು .250 ಕೋಟಿ ಹೆಚ್ಚು ಸಂಗ್ರಹವಾಗಿದೆ. ಕಳೆದ 2021-22ನೇ ಸಾಲಿನಲ್ಲಿ .3,088 ಕೋಟಿ ಸಂಗ್ರಹವಾಗಿತ್ತು. 2022-23ನೇ ಸಾಲಿನಲ್ಲಿ .3,332.72 ಕೋಟಿ ಸಂಗ್ರಹವಾಗಿದೆ.
ಅಧಿಕ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿತಯಾರಿಸಿ ವಸೂಲಿ ಮಾಡುವುದು. ಕಂದಾಯ ವಸೂಲಿ ಅಧಿಕಾರಿಗಳಿಗೆ ನಿರ್ದಿಷ್ಟಗುರಿ ನೀಡುವುದು. ಬೆಸ್ಕಾಂ ಸೇರಿದಂತೆ ವಿವಿಧ ಸಾರ್ವಜನಿಕ ಇಲಾಖೆಗೆ ನೀಡಿದ ದಾಖಲೆ ಆಧರಿಸಿ ಪರಿಶೀಲಿಸುವುದು ಸೇರಿದಂತೆ ವಿವಿಧ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ವಸೂಲಿ ಹೆಚ್ಚಳವಾಗಿದೆ. ಜತೆಗೆ, ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಗೆ ಇರುವ ವ್ಯವಸ್ಥೆಯ ಸುಧಾರಣೆ, ತೆರಿಗೆ ವಸೂಲಿಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿ, ಸನ್ಮಾನಿಸಲು ಮುಂದಾಗಿರುವುದು ಸಹ ತೆರಿಗೆ ಹೆಚ್ಚಳಕ್ಕೆ ಕಾರಣವಾಗಿದೆ.
ಬಿಬಿಎಂಪಿಯಿಂದ ವಿಧಾನಸೌಧಕ್ಕೆ ಸಿಗುತ್ತಾ ಪ್ರಮೋಷನ್..!?
ಗುರಿ ಮುಟ್ಟದ ಸಂಗ್ರಹ:
2021-22ನೇ ಸಾಲಿನಲ್ಲಿ .4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯ ಪೈಕಿ .3,088 ಕೋಟಿ ಸಂಗ್ರಹಿಸಿತ್ತು. 2022-23ರಲ್ಲಿ .4,189 ಕೋಟಿ ಆಸ್ತಿ ತೆರಿಗೆ ವಸೂಲಿ ಗುರಿ ಹಾಕಿಕೊಂಡಿತ್ತು. .3,332.72 ಕೋಟಿ ಸಂಗ್ರಹಿಸಲು ಬಿಬಿಎಂಪಿಗೆ ಸಾಧ್ಯವಾಗಿದೆ.
ಆಸ್ತಿ ತೆರಿಗೆ ವಸೂಲಿಗೆ ತೆಗೆದುಕೊಂಡ ಹಲವು ಕ್ರಮಗಳಿಂದ ಸಂಗ್ರಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ .250 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಮುಂದಿನ ವರ್ಷದಲ್ಲಿ ಡ್ರೋನ್ ಸರ್ವೆ, ಸ್ಥಳ ಪರಿಶೀಲನೆ ನಡೆಸುವುದು ಸೇರಿದಂತೆ ಮತ್ತಷ್ಟುಕ್ರಮಗಳ ಮೂಲಕ ಇನ್ನಷ್ಟುಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮ ವಹಿಸುತ್ತೇವೆ.
-ಡಾಆರ್.ಎಲ್.ದೀಪಕ್, ವಿಶೇಷ ಆಯುಕ್ತ, ಬಿಬಿಎಂಪಿ ಕಂದಾಯ ವಿಭಾಗ
ಎಚ್‌ಎಎಲ್‌ನಿಂದ ₹92 ಕೋಟಿ ವಸೂಲಿ
ಎಚ್‌ಎಎಲ್ ಸಂಸ್ಥೆ(HAL Company)ಯು ಸುಮಾರು 13ರಿಂದ 14 ವರ್ಷದಿಂದ ಬಿಬಿಎಂಪಿ(BBMP)ಗೆ ಆಸ್ತಿ ತೆರಿಗೆ ಪಾವತಿ ಮಾಡಿರಲಿಲ್ಲ. ಹೀಗಾಗಿ ಒಂದೇ ಬಾರಿಗೆ ಆಸ್ತಿ ತೆರಿಗೆ ಪಾವತಿಗೆ ಬಡ್ಡಿ ಪ್ರಮಾಣ ಇಳಿಕೆ ಮಾಡಿ ಪಾವತಿಸಲು ಅವಕಾಶ ಮಾಡಿಕೊಟ್ಟಹಿನ್ನೆಲೆಯಲ್ಲಿ .92 ಕೋಟಿ ಪಾವತಿ ಮಾಡಿದ್ದಾರೆ. ಬಿಬಿಎಂಪಿಯ ಇತಿಹಾಸದಲ್ಲಿ ಮೊದಲ ಬಾರಿಗೆ .92 ಕೋಟಿ ಆಸ್ತಿ ತೆರಿಗೆ ಒಂದೇ ಬಾರಿಗೆ ವಸೂಲಿ ಆಗಿರುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗ್ಳೂರಲ್ಲಿ ಮತದಾನ ಜಾಗೃತಿಗೆ ಸೆಲೆಬ್ರೆಟಿಗಳ ಎಂಟ್ರಿ..!
ವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ (ಕೋಟಿ .)
ವಲಯ ಸಂಗ್ರಹ
- ಬೊಮ್ಮನಹಳ್ಳಿ 352.57
- ದಾಸರಹಳ್ಳಿ 95.46
- ಪೂರ್ವ 588.05
- ಮಹದೇವಪುರ 952.73
- ಆರ್‌ಆರ್‌ನಗರ 220.16
- ದಕ್ಷಿಣ 481.19
- ಪಶ್ಚಿಮ 356.50
- ಯಲಹಂಕ 286.06
- ಒಟ್ಟು 3,332.72
ಕಳೆದ ಐದು ವರ್ಷ ತೆರಿಗೆ ಸಂಗ್ರಹ ವಿವರ
ವರ್ಷ ಗುರಿ ಸಂಗ್ರಹ (ಕೋಟಿಗಳಲ್ಲಿ)
- 2018-19 .3,100 .2,529
- 2019-20 .3,500 .2,659
- 2020-21 .3,500 .2,860
- 2021-22 .4,000 .3,089
- 2022-23 .4,189 .3,332
ಶೇ.5 ರಷ್ಟುರಿಯಾಯಿತಿ
ಆರ್ಥಿಕ ವರ್ಷದ ಮೊದಲ ತಿಂಗಳು ಅಂದರೆ, ಏಪ್ರಿಲ್1 ರಿಂದ ಏಪ್ರಿಲ್ 30ರ ಅವಧಿಯಲ್ಲಿ ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5 ರಷ್ಟುರಿಯಾಯಿತಿ ನೀಡಲಾಗುತ್ತದೆ. ಆಸ್ತಿ ಮಾಲೀಕರು ರಿಯಾಯಿತಿಯ ಸದುಪಯೋಗ ಪಡಿಸಿಕೊಳ್ಳುವಂತೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ.ಆರ್.ಎಲ್.ದೀಪಕ್ ಕೋರಿದ್ದಾರೆ.