ಸನಾತನಧರ್ಮ ಎಂಬುದು ಸದಾಕಾಲ ಇರುವಂತದ್ದು; ಪೇಜಾವರಶ್ರೀ
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಕರೆಕೊಟ್ಟಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖಂಡಿಸಿದರು.
ಉಡುಪಿ (ಸೆ.3): ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಕರೆಕೊಟ್ಟಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖಂಡಿಸಿದರು.
ಒಂದು ರಾಜ್ಯದ ಜವಾಬ್ದಾರಿಯುತ ಮಂತ್ರಿಯಾಗಿ ಈ ರೀತಿ ಕರೆಕೊಟ್ಟಿರುವುದು ಆಘಾತವಾಗಿದೆ. ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಸಮಾಜದಲ್ಲಿ ವಿಷಬೀಜ ಬಿತ್ತುವ ಕಾರ್ಯ ಮಾಡಬಾರದಿತ್ತು ಎಂದರು.
ಸ್ಟಾಲಿನ್ ಬಳಿಕ ಸನಾತನ ಧರ್ಮದ ವಿರುದ್ಧ ಪ್ರಕಾಜ್ ರಾಜ್ ವಿವಾದ್ಮಾಕ ಟ್ವೀಟ್, ನೆಟ್ಟಿಗರಿಂದ ಮಂಗಳಾರತಿ!
ಸನಾತನ ಧರ್ಮವೆಂಬುದು ಸದಾ ಕಾಲ ಇರುವಂತದ್ದು. ಧರ್ಮ ಎನ್ನುವುದರ ಅರ್ಥ ಎಲ್ಲರೂ ಸುಖ ಸಂತೋಷದಿಂದ ಬದುಕಬೇಕು ಎಂದು ಬಯಸುವವರು. ಅದಕ್ಕಾಗಿ ನಾವು ಪ್ರಯತ್ನ ಪಡಬೇಕು.ನಮ್ಮ ಪ್ರಯತ್ನ ನಮ್ಮ ಸುಖಕ್ಕಾಗಿ ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಾರದು. ಪ್ರತಿಯೊಬ್ಬರೂ ಸುಖ ಸಂತೋಷದಿಂದ ಬದುಕಬೇಕಾದರೆ ಯಾವ ಸೂತ್ರ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತೇವೆ ಅನ್ನೋದು ಧರ್ಮ. ನಮ್ಮ ಪ್ರಯತ್ನ ದಿಂದ ನಮ್ಮ ಸುಖ ಮಾತ್ರ ಅಲ್ಲ ಅಕ್ಕ-ಪಕ್ಕದ ಮನೆಯವರಿಗೂ ಸುಖವಾಗಲಿ ಎಂಬುದೇ ಸನಾತನ ಧರ್ಮ. ಇಂತಹ ಸನಾತನ ಧರ್ಮ ವಿರೋಧಿಸುವವರನ್ನ ಏನೆಂದು ಹೇಳಬೇಕು?
ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ನಿರ್ಮೂಲನೆ ಮಾಡಿ: ಸ್ಟಾಲಿನ್ ಪುತ್ರ
ಉದಯನಿಧಿ ಸ್ಟಾಲಿನ್ ಹೇಳಿರುವಂತೆ ಸನಾತನ ಧರ್ಮ ನಿರ್ಮೂಲನೆ ಮಾಡುವುದೆಂದರೆ ಸಮಾಜದಲ್ಲಿ ಯಾರೂ ಸಂತೋಷದಿಂದ ಇರಬಾರದು ಎಲ್ಲರೂ ದುಃಖದಿಂದ ಇರಬೇಕೆಂದೇ? ಇದು ನಾನು ಹೇಗಿದ್ದರೂ ನಡೆಯುತ್ತೆ ಅನ್ನುವ ಮನೋಭಾವ ಸೂಚಿಸುತ್ತೆ. ಇಂತಹ ಹೇಳಿಕೆ ಇಂತಹ ಪ್ರವೃತ್ತಿಯನ್ನು ನಾವು ಬಲವಾಗಿ ಖಂಡಿಸುತ್ತೇನೆ ಎಂದರು.