ಸ್ಟಾಲಿನ್ ಬಳಿಕ ಸನಾತನ ಧರ್ಮದ ವಿರುದ್ಧ ಪ್ರಕಾಜ್ ರಾಜ್ ವಿವಾದ್ಮಾಕ ಟ್ವೀಟ್, ನೆಟ್ಟಿಗರಿಂದ ಮಂಗಳಾರತಿ!

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ, ಹಿಂಧೂ ಧರ್ಮದ ವಿರುದ್ಧ ನಾಲಗೆ ಹರಿಬಿಟ್ಟ ಬೆನ್ನಲ್ಲೇ ಇದೀಗ ದಕ್ಷಿಣ ಭಾರತದ ನಟ ಪ್ರಕಾಶ್ ರಾಜ್, ಸನಾತನ ಧರ್ಮದ ವಿರುದ್ಧ ಟ್ವೀಟ್ ಮಾಡಿದ್ದಾರೆ.  ಪ್ರಕಾಜ್ ರಾಜ್ ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿದೆ.

Actor Prakash Raj makes fun of Sanatan Dharma says Anti humans after Udhayanidhi Stalin remark  ckm

ಬೆಂಗಳೂರು(ಸೆ.03) ಸನಾತನ ಧರ್ಮದ ವಿರುದ್ದ ತಮಿಳುನಾಡು ಮುಖ್ಯಮಂತ್ರಿ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.  ಸನಾತನ ಧರ್ಮ ಎಂಬುದು ಮಲೇರಿಯಾ, ಡೆಂಘಿ ಇದ್ದಂತೆ ಅದನ್ನು ಕೇವಲ ವಿರೋಧ ಮಾಡಿದರೆ ಸಾಲದು, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು. ಇದರ ಬೆನ್ನಲ್ಲೇ ದಕ್ಷಿಣ ಭಾರತದ ನಟ ಪ್ರಕಾಶ್ ರಾಜ್ ಭಾರಿ ವಿವಾದ ಸೃಷ್ಟಿಸಿದ್ದಾರೆ. ಚಂದ್ರಯಾನ ಯಶಸ್ಸನ್ನು ವ್ಯಂಗ್ಯವಾಡಿದ್ದ ಪ್ರಕಾಶ್ ರಾಜ್ ಇದೀಗ ಸನಾತನ ಧರ್ಮದ ವಿರುದ್ಧ ಟ್ವೀಟ್ ಮಾಡಿದ್ದಾರೆ. ಹಿಂದೂಗಳು ತನಾ ತನಿಸ್ ಅಲ್ಲ. ಆದರೆ ತನಾತನಿಸ್ ಮಾನವ ವಿರೋಧಿಗಳು ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ಚಂದ್ರಯಾನ ಯಶಸ್ಸು ಸಹಿಸದ ಪ್ರಕಾಶ್ ರಾಜ್ ವ್ಯಂಗ್ಯ ಚಿತ್ರ ಪೋಸ್ಟ್ ಮಾಡಿ ಇಸ್ರೋ ಹಾಗೂ ಭಾರತವನ್ನು ಗೇಲಿ ಮಾಡಿದ್ದರು. ಇದೀಗ ಸನಾತನ ಧರ್ಮದ ವಿರುದ್ಧ ಟ್ವೀಟ್ ಮಾಡಿ ಹಿಂದೂಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.  ಪ್ರಕಾಶ್ ರಾಜ್ ಟ್ವೀಟ್‌ನಲ್ಲಿ ಹೆಚ್ಚಿನ ಪದಗಳಿಲ್ಲ. ಆದರೆ ಬಳಸಿರುವ ಪದಗಳು ಕಠಿಣವಾಗಿದೆ. ಇಷ್ಟೇ ಅಲ್ಲ ಇದರ ಜೊತೆಗೆ ಪೆರಿಯಾರ್ ಹಾಗೂ ಡಾ.ಬಿಆರ್ ಅಂಬೇಡ್ಕರ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.  ಈ ಮೂಲಕ ಹಿಂದುತ್ವ ಹಾಗೂ ಸನಾತನ ಧರ್ಮ ವಿರುದ್ಧ ಕೆಂಡ  ಕಾರಿದ್ದಾರೆ.

ಚಂದ್ರಯಾನಕ್ಕೆ ಅಪಹಾಸ್ಯ: ಪ್ರಕಾಶ ರೈ ಬಂಧನಕ್ಕೆ ಶ್ರೀರಾಮ ಸೇನೆಯ ಆಗ್ರಹ

ಪ್ರಕಾಶ್ ರಾಜ್ ಟ್ವೀಟ್ ಮೂಲಕ ಇವಿ ರಾಮಸ್ವಾಮಿ ಅಂದರೆ ಪೆರಿಯಾರ್ ಹಾಗೂ ಅಂಬೇಡ್ಕರ್ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಹಿಂದೂಗಳು ತನಾತನಿಗಳಲ್ಲ. ಆದರೆ ತನಾತನೀಸ್ ಮಾನವ ವಿರೋಧಿಗಳು. ನೀವು ಒಪ್ಪಿದರೆ ರಿಟ್ವೀಟ್ ಮಾಡಿ. ಶುಭ ಭಾನುವಾರ. ಜಸ್ಟ್ ಆಸ್ಕಿಂಗ್ ಎಂದು  ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರಾಜ್ ಬಳಸಿರುವ ತಾನತನೀಸ್ ಪದದ ಅರ್ಥ ಸೀಮಿತವಾಗಿಲ್ಲ.

 

 

ತಂತಾನಿ ಅಥವಾ ತನಾ ತನಿಸ್ ಅನ್ನೋ ಪದವನ್ನು ಎಡಪಂಥೀಯರು ಸೇರಿದಂತೆ ಕೆಲವರು ಸನಾತನ ಧರ್ಮವನ್ನು ಗೇಲಿ ಮಾಡುವಾಗ, ವ್ಯಂಗ್ಯವಾಡುವಾಗ ಬಳಸಿದ ಪದವಾಗಿದೆ.  ಇದೇ ಪದವನ್ನು ಪ್ರಕಾಶ್ ರಾಜ್ ಬಳಸಿದ್ದಾರೆ.  ಇನ್ನು ಅಂಬೇಡ್ಕರ್ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮಂತಾತರಗೊಂಡವರು. ಈ ನಡೆಯನ್ನು ಹಲವರು ಹಿಂದೂ ಧರ್ಮದ ವಿರುದ್ಧ ಬಳಕೆ ಮಾಡುತ್ತಾರೆ. ಜೊತೆಗೆ ಪೆರಿಯಾರ್ ತಮ್ಮ ಜೀವಮಾನುದ್ದಕ್ಕೂ ಹಿಂದೂ ಧರ್ಮ, ಹಿಂದೂ ದೇವರನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಹಿಂದೂ ಗ್ರಂಥಗಳನ್ನು ಸುಟ್ಟು ಹಾಕಿ, ಹಿಂದೂ ದೇವರ  ಮೂರ್ತಿಗಳನ್ನು ಒಡೆದು ಹಾಕಿ, ಎಲ್ಲಾ ಬ್ರಾಹ್ಮಣ ದೇವರನ್ನು ತೊಡೆದು ಹೊರಬನ್ನಿ ಎಂದು ಕರೆಕೊಟ್ಟ ಪೆರಿಯಾರ್ ಅಲಿಯಾಸ್ ಇವಿ ರಾಮಸ್ವಾಮಿ ಫೋಟೋವನ್ನು ಪ್ರಕಾಶ್ ರಾಜ್ ಬಳಸಿಕೊಂಡಿದ್ದಾರೆ. 

ಸರ್ಕಾರಿ ಭೂಮಿ ನುಂಗಿದ ಆರೋಪ, ಪ್ರಕಾಶ್‌ ರಾಜ್‌ಗೆ ನೋಟಿಸ್‌!

ಪ್ರಕಾಶ್ ರಾಜ್ ಈ ಟ್ವೀಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.  ಹಲವರು ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.  ಇತ್ತೀಚೆಗೆ ಪ್ರಕಾಶ್ ರಾಜ್ ಲೋಟವೊಂದರಲ್ಲಿ ಚಹಾ ಸುರಿಯುತ್ತಿರುವ ವ್ಯಕ್ತಿಯೊಬ್ಬರ ವ್ಯಂಗ್ಯಚಿತ್ರವನ್ನು ಹಂಚಿಕೊಂಡು ಚಂದ್ರಯಾನವನ್ನು ಗೇಲಿ ಮಾಡಿದ್ದರು. ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ಬರೆದುಕೊಂಡಿದ್ದರು.  ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್‌ ಹಾಗೂ ಚಂದ್ರಯಾನ 3ನ್ನು ಗೇಲಿ ಮಾಡಿದ್ದ ಪ್ರಕಾಶ್ ರಾಜ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. 

Latest Videos
Follow Us:
Download App:
  • android
  • ios