ಸನಾತನ ಧರ್ಮದ ಶುದ್ಧೀಕರಣ ಆಗಬೇಕಿದೆಯೆನ್ನು ಮೂಲಕ ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ನೆರೆಯ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಉದಯಿನಿಧಿ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

ದಾವಣಗೆರೆ (ಸೆ.5) : ಸನಾತನ ಧರ್ಮದ ಶುದ್ಧೀಕರಣ ಆಗಬೇಕಿದೆಯೆನ್ನು ಮೂಲಕ ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ನೆರೆಯ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಉದಯಿನಿಧಿ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮದಲ್ಲಿ ಶೂದ್ರರಿಗೆ ಓದುವುದನ್ನು ಕಲಿಸಿರಲಿಲ್ಲ. ಲಾರ್ಡ್ ಮೆಕಾಲೆ ಬಂದ ನಂತರ ಎಲ್ಲರೂ ವ್ಯಾಪಕವಾಗಿ ವಿದ್ಯೆ ಕಲಿತರು. ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ ಹೇಗೆ ಇಂಗ್ಲೀಷ್ ಓದುತ್ತಿದ್ದರು ಎಂದರು.

One Nation, One Election ಇದು ಹಿಟ್ಲರ್ ಸಂಸ್ಕೃತಿ, ಸಂವಿಧಾನದಲ್ಲಿ ಅವಕಾಶವಿಲ್ಲ- ಎಚ್‌ಸಿ ಮಹದೇವಪ್ಪ

ಶೂದ್ರರು ತಮ್ಮ ಮಕ್ಕಳನ್ನು ಓದಿಸಿದರೆ ಕಾಯಿಸಿದ ಎಣ್ಣೆಯನ್ನು ಬಿಡುತ್ತಿದ್ದರು. ಯಾಕೆ ಹೀಗೆ ಮಾಡುತ್ತಿದ್ದರು? ಅದಕ್ಕಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಮನುವಾದವನ್ನು ಸುಟ್ಟು ಹಾಕಿದ್ದರು. ಭಾರತದ ನೆಲದಲ್ಲಿ ಯಾವುದೇ ಧರ್ಮವೂ ಮೇಲಲ್ಲ. ಎಲ್ಲ ಧರ್ಮಗಳೂ ಭಾರತದ ಸಂವಿಧಾನದಡಿಯೇ ಬರುತ್ತವೆ. ಸಂವಿಧಾನ ಪೀಠಿಕೆ ಜಾಹೀರಾತನ್ನು ನಾವು ನೀಡಿದ್ದೆವು ಗೊತ್ತಾ? ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂಬ ಉದ್ದೇಶ ಅದಾಗಿತ್ತು ಎಂದು ಅವರು ತಿಳಿಸಿದರು.

ಒನ್ ನೇಷನ್‌, ಒನ್‌ ಎಲೆಕ್ಷನ್‌ ಹೇಗೆ ಸಾಧ್ಯ ಆಗುತ್ತೇರಿ? ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸವಾಗಿದೆ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ಹೇಗೆ ಸಾಧ್ಯವಾಗುತ್ತದೆ? ವಿಧಾನಸಭೆ ಚುನಾವಣೆ ಆಗಿ ಮೂರು ತಿಂಗಳಷ್ಟೇ ಕಳೆದಿದೆ. ಮತ್ತೆ ಅಂತಹವರ ಜೊತೆ ಹೋಗು ಅಂದರೆ ಹೇಗೆ ಎಂದು ಕೇಂದ್ರ ಸರ್ಕಾರದ ಒನ್ ನೇಷನ್‌ ಒನ್ ಎಲೆಕ್ಷನ್‌ ನಿಲುವಿಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅದಾನಿ, ಅಂಬಾನಿ ಸಾಲ ಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ?

ಉಚಿತ ಯೋಜನೆ ಬಗ್ಗೆ ಪ್ರಧಾನಿ ಮೋದಿ ಹೇಳಿಕೆಗೆ ಸಚಿವ ಮಹದೇವಪ್ಪ ಆಕ್ಷೇಪ

ಉಚಿತ ಯೋಜನೆಗಳಿಂದ ದೇಶ ದಿವಾಳಿಯಾಗುತ್ತೆ ಎನ್ನುವವರು ಅದಾನಿ, ಅಂಬಾನಿ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿ ಆಗುವುದಿಲ್ಲವೇ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿರುದ್ಧ ವಾಗ್ಧಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಯೋಜನೆಗಳಿಂದ ಬಡವರಿಗೆ, ಕಡು ಬಡುವರಿಗೆ, ಅಸಹಾಯಕರಿಗೆ ಅನುಕೂಲವಾಗುತ್ತದೆ. ನಮ್ಮ ಸರ್ಕಾರದ ಐದು ಗ್ಯಾರಂಟಿ ಭರವಸೆಗಳಿಂದಾಗಿ ನಮ್ಮ ಯೋಜನೆಗಳು 1.32 ಕೋಟಿ ಬಡ ಜನರಿಗೆ ತಲುಪುತ್ತಿವೆ. ಇದರಿಂದ ಅಂತಹ ಜನರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದರು.

ಮೋದಿ ಸೇರಿದಂತೆ ಬಿಜೆಪಿಯವರೇನು ಎಮ್ಮೆಗಳ ಮೈ ಉಜ್ಜಿದ್ದಾರಾ? ಸೆಗಣಿ, ಕಸ ತೆಗೆದಿದ್ದಾರಾ? ದನ ಮೇಯಿಸಿದ್ದಾರಾ? ಇದೆಲ್ಲವನ್ನೂ ತೊಳೆಯುವವರು ನಾವು. ಸುಮ್ಮನೇ ಭಾವನಾತ್ಮಕವಾಗಿ ಮಾತನಾಡುತ್ತಾರಷ್ಟೇ. ಬಿಜೆಪಿಯವರಿಗೆ ಎಂದಿಗೂ ಬಡವರ ಪರವಾಗಿ ಕೆಲಸ ಮಾಡಿ ಗೊತ್ತಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರ ಸ್ಪಂದನೆ ನೋಡಿ ಸಹಿಸಲಾಗುತ್ತಿಲ್ಲವಷ್ಟೇ ಎಂದು ಅವರು ಕುಟುಕಿದರು.

ರಾಜ್ಯ, ದೇಶದಲ್ಲಿ ಮಳೆ ಕಡಿಮೆಯಾಗಿದೆ. ಕಳೆದ 100 ವರ್ಷದಿಂದಲೂ ಕಾವೇರಿ ವಿವಾದ ಇದ್ದೇ ಇದೆ. ಮಳೆ ಇಲ್ಲದ ಸಮಯದಲ್ಲಿ ಯಾವ ರೀತಿ ನೀರು ಹಂಚಿಕೆ ಮಾಡಬೇಕೆಂಬುದನ್ನು ಹೇಳಿಲ್ಲ. ಕೆಆರ್‌ ಎಸ್ ಜಲಾಶಯದಲ್ಲಿ ನೀರೇ ಇಲ್ಲ. ಕಬ್ಬಿನ ಬೆಳೆಗೆ ನೀರಿಲ್ಲ, ಜನ, ಜಾನುವಾರುಗಳಿಗೆ ಕುಡಿಯುವುದಕ್ಕೂ ನೀರಿಲ್ಲ. ನೀರು ಹಂಚಿಕೆ ಮಾಡಲು ಈಗಾಗಲೇ ನ್ಯಾಯಾಲಯ ತೀರ್ಮಾನ ಮಾಡಿದೆ ಎಂದು ಅವರು ತಿಳಿಸಿದರು.

ಒಳಪಂಗಡ ಮರೆತು ಶೋಷಿತರು ಒಂದಾದ​ರೆ ದಲಿತ ಸಿಎಂ ಸಾಧ್ಯ: ಎಚ್‌ಸಿ ಮಹದೇವಪ್ಪ

ಜಲಾಶಯದಲ್ಲಿ ನೀರು ಇಲ್ಲದಿದ್ದಾಗ ಸರ್ಕಾರ ನೀರು ಕೊಡುತ್ತದೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹೇಳುವುದೂ ಇಲ್ಲ. ಇನ್ನೇನಿದ್ದರೂ ನ್ಯಾಯಾಲಯದಲ್ಲಿ ಫೈಟ್ ಮಾಡುತ್ತೇವೆ. ರಾಜ್ಯದಲ್ಲಿ ಮಳೆ ಇಲ್ಲ. ದೇಶದಲ್ಲೂ ಮಳೆ ಇಲ್ಲ. ವಾಸ್ತವಾಂಶವನ್ನು, ನೈಜ ಚಿತ್ರಣವನ್ನು ನ್ಯಾಯಾಲಯದ ಮುಂದಿಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದರು.