Asianet Suvarna News Asianet Suvarna News

Bengaluru Metro: ಕೆಆರ್ ಪುರಂ - ವೈಟ್ ಫಿಲ್ಡ್ ಮೆಟ್ರೋ ಸಂಚಾರ ಮಾರ್ಗ ಉದ್ಘಾಟನೆಗೆ ಕೌಂಟ್‌ಡೌನ್!

  • ಕೆಆರ್ ಪುರಂ - ವೈಟ್ ಫಿಲ್ಡ್ ಮೆಟ್ರೋ ಸಂಚಾರ ಮಾರ್ಗ ಉದ್ಘಾಟನೆಗೆ ದಿನಗಣನೆ
  • ನೂತನ ಮಾರ್ಗದ ಕೊನೆಯ ಹಂತದ ಪ್ರಾಯೋಗಿಕ ಸಂಚಾರ ಸಕ್ಸಸ್
  •  ಮುಂದಿನ ವಾರವೇ ಮೆಟ್ರೋ ಮಾರ್ಗ ಉದ್ಘಾಟನೆಗೊಳ್ಳುವ ಸಾಧ್ಯತೆ
Safety inspection of KR Puram-Whitefield metro line concludes at bengaluru bmrcl rav
Author
First Published Feb 25, 2023, 2:59 PM IST

ವರದಿ : ವಿದ್ಯಾಶ್ರೀ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಫೆ.25): ಕೆ ಆರ್ ಪುರಂ ಮತ್ತು ವೈಟ್ ಫಿಲ್ಡ್ ನಡುವಿನ ಮೆಟ್ರೋ ಪ್ರಯಾಣಿಕರ ಕನಸು ನನಸಾಗುವುದಕ್ಕೆ ಕೆಲ ದಿನಗಳಷ್ಟೇ ಬಾಕಿಯಿದೆ. ಹಲವು ವರ್ಷಗಳ ಮಹತ್ವದ ಮೆಟ್ರೋ ಯೋಜನೆಗಳಲ್ಲಿ ಒಂದಾದ ಈ ಮಾರ್ಗದ ಎಲ್ಲಾ ಕೆಲಸಗಳ ಮುಗಿದಿದ್ದು, ಕೊನೆಯ ಹಂತದ ಪ್ರಾಯೋಗಿಕ ಸಂಚಾರ ಕೂಡ ಯಶಸ್ವಿಯಾಗಿ ಪೂರ್ಣಗೊಂಡಿದೆ.

  ಹೌದು ಕಳೆದ ಮೂರು ದಿನಗಳಿಂದ ಮೆಟ್ರೋ(Namma Metro) ರೈಲು ಸೇಫ್ಟಿ ಕಮಿಷನ್(Railway Safety Commission) ಒಳಗೊಂಡ ತಂಡ ಕೆಆರ್ ಪುರಂ(KR pura) ಹಾಗೂ ವೈಟ್ ಫಿಲ್ಡ್(Whitefield) ಮಾರ್ಗದ ಕೊನೆಯ ಹಂತದ ಪ್ರಾಯೋಗಿಕ ಸಂಚಾರವನ್ನ ಹಂತ ಹಂತವಾಗಿ ನಡೆಸಿತ್ತು. 

Namma Metro: ಮತ್ತೊಂದು ಎಡವಟ್ಟು; ತಪ್ಪಿದ ಭಾರೀ ಅನಾಹುತ!

ಇದರ ಜೊತೆಗೆ ಸಾರ್ವಜನಿಕ ಸುರಕ್ಷತಾ ಕ್ರಮಗಳು, ಟೆಕ್ನಿಕಲ್ ವಿಚಾರಗಳು, ಮೆಟ್ರೋ ನಿಲ್ದಾಣಗಳಲ್ಲಿನ ಸೌಲಭ್ಯಗಳು ಸೇರಿದಂತೆ ಅನೇಕ ವಿಚಾರಗಳ ಪರಿಶೀಲನೆಗಳನ್ನ ನಡೆಸಿತ್ತು. ಸದ್ಯ 13.71 ಕಿ.ಮೀ ಮಾರ್ಗದ ಸಂಪೂರ್ಣ ಪರಿಶೀಲನೆಯಲ್ಲಿ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಒಂದು ವಾರದೊಳಗೆ ಸಂಪೂರ್ಣ ಪರಿಶೀಲನೆ ಮತ್ತು ಫಿಟ್ನೆಸ್ ವರದಿಯನ್ನ ಬಿಎಂಆರ್ಸಿಎಲ್(BMRCL) ಗೆ ಸಲ್ಲಿಸಲಿದೆ. 

ಸುಮಾರು 300 ಪುಟಗಳ ವರದಿಯನ್ನ ಸಿದ್ದಪಡಿಸಲಿರುವ ಸೇಫ್ಟಿ ಕಮಿಷನ್ ಹೊಸ ಮಾರ್ಗದ ಕಂಡಿಷನ್ ಬಗ್ಗೆ ಸಂಪೂರ್ಣ ವರದಿಯನ್ನ ಬಿಎಂಆರ್‌ಸಿಎಲ್‌ಗೆ ಸಲ್ಲಿಸಲಿದೆ.. ಇನ್ನು ಪರಿಶೀಲನೆ ವೇಳೆ ಬಹಳ ಪ್ರಮುಖವಾಗಿ ಮಾರ್ಗದಲ್ಲಿ ಲಭ್ಯವಿರುವ ಸಾರ್ವಜನಿಕ ಸೌಲಭ್ಯದ ಬಗ್ಗೆ ಕೂಡ ಸೇಫ್ಟಿ ಕಮಿಷನ್  ಪರಿಶೀಲನೆ ನಡೆಸಿದೆ.

ಹೊಸ ಮಾರ್ಗದಲ್ಲಿ ಲಭ್ಯವಿರುವ ಸೌಲಭ್ಯಗಳೇನು?

  • ನಿಲ್ದಾಣಗಳಲ್ಲಿ ಸೀಮಿತ ದ್ವಿಚಕ್ರ ವಾಹನ ನಿಲುಗಡೆ ಮತ್ತು ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್‌ ನಿಲ್ದಾಣಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯ.
  • ನಿಲ್ದಾಣಗಳ ಸುತ್ತಲೂ ಇರುವ ಸೇವಾ ರಸ್ತೆಗಳ ಎರಡೂ ಬದಿಯಲ್ಲಿ, ಪ್ರವೇಶ/ನಿರ್ಗಮನ ದ್ವಾರದೊಂದಿಗೆ ಬಿಎಂಟಿಸಿ(BMTC) ಬಸ್ ನಿಲ್ದಾಣಗಳು ಮಲ್ಟಿಮೋಡಲ್ ಏಕೀಕರಣ ಕೇಂದ್ರ ಇರಲಿದೆ.
  • ರಸ್ತೆಗಳನ್ನು ದಾಟಲು ಎಲ್ಲಾ ನಿಲ್ದಾಣಗಳನ್ನು ಪಾದಚಾರಿಗಳ ಮೇಲ್ಸೇತುವೆಯಾಗಿ ಉಪಯೋಗಿಸಬಹುದು.
  • ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್‌ನಲ್ಲಿ, ಮೆಟ್ರೋ ನಿಲ್ದಾಣಗಳಿಂದ  ನೇರವಾಗಿ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕಿಸಲು ಮೇಲ್ಸೇತುವೆಗಳು.
  • ಪಟ್ಟಂದೂರು ಅಗ್ರಹಾರ ನಿಲ್ದಾಣದಲ್ಲಿ ಐಟಿಪಿಬಿಗೆ ನೇರವಾಗಿ ಮೇಲ್ಸೇತುವೆ ಸಂಪರ್ಕ.
  • ವಿಕಲಚೇತರು ಎಲ್ಲಾ ನಿಲ್ದಾಣಗಳನ್ನು ಉಪಯೋಗಿಸುವ ಸೌಲಭ್ಯ.
  • ಪ್ರಯಾಣಿಕರ ಅನುಕೂಲಕ್ಕಾಗಿ, ಪ್ರತಿ ನಿಲ್ದಾಣದಲ್ಲಿ 8 ಎಸ್ಕಲೇಟರ್‌ಗಳು, 4 ಎಲಿವೇಟರ್‌ಗಳು ಮತ್ತು 8 ಮೆಟ್ಟಿಲುಗಳ ಅಳವಡಿಕೆ.

 ಬೆಂಗಳೂರು: ನಗರದಲ್ಲಿ ಶೀಘ್ರ ಚಾಲಕನಿಲ್ಲದ ಮೆಟ್ರೋ ಓಡಾಟ!

ಇನ್ನೂ ಒಂದು ವಾರದ ಬಳಿಕ ಸಲ್ಲಿಕೆಯಾಗಲಿರುವ ಪರಿಶೀಲನೆ ವರದಿಯಲ್ಲಿ ಎಲ್ಲಾ ಸರಿಯಾದ್ರೆ ಆ ಕೂಡಲೇ ನೂತನ ಮಾರ್ಗ ಉದ್ಘಾಟನೆಗೆ ಬಿಎಂಆರ್‌ಎಲ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಚುನಾವಣೆ ದಿನಾಂಕ ಕೂಡ ಹತ್ತಿರದಲ್ಲಿದ್ದು, ಮಾರ್ಚ್ ಎರಡನೇ ವಾರದ ಬಳಿಕ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಹಿನ್ನೆಲೆ, ಆ ಮೊದಲೇ ಹೊಸ ಮಾರ್ಗ ಉದ್ಘಾಟನೆಗೆ ಸರ್ಕಾರ ಕೂಡ ದಿನಾಂಕ ಮತ್ತು ಉದ್ಘಾಟಕರನ್ನ ಫೈನಲ್ ಮಾಡುವ ಸಾಧ್ಯತೆ ಇದೆ. 

ಎಲ್ಲಾ ಅಂದುಕೊಂಡಂತೆ ಆದ್ರೆ ಬಹುತೇಕ ಮಾರ್ಚ್ ಎರಡನೇ ವಾರದೊಳಗೆ ಹೊಸ ಮಾರ್ಗ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios